ಪ್ರಜ್ವಲ್ ವಿಡಿಯೋ ಪ್ರಕರಣ: ಪ್ರೀತಂ ಗೌಡ ಆಪ್ತರ ನಿವಾಸದಲ್ಲಿ ಎಸ್​ಐಟಿಗೆ 10 ಪೆನ್​​ಡ್ರೈವ್‌ಗಳು, ಹಾರ್ಡ್ ಡಿಸ್ಕ್ ಪತ್ತೆ

| Updated By: Ganapathi Sharma

Updated on: May 16, 2024 | 11:54 AM

ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 ಪೆನ್​​ಡ್ರೈವ್‌ಗಳು, ಹಾರ್ಡ್ ಡಿಸ್ಕ್ ಪತ್ತೆಯಾಗಿವೆ. ಮತ್ತೊಂದೆಡೆ, ವಿಡಿಯೋ ಸೋರಿಕೆ ಪ್ರಕರಣದ 6 ಮತ್ತು 7 ನೇ ಆರೋಪಿಗಳನ್ನು ಬಂಧಿಸಲಾಗಿದ್ದು, ಅದಕ್ಕೂ ಮೊದಲಿನ ಆರೋಪಿಗಳು, ಕಾಂಗ್ರೆಸ್ ಕಾರ್ಯಕರ್ತರನ್ನು ಈವರೆಗೂ ಬಂಧಿಸದಿರುವ ಎಸ್​ಐಟಿ ನಡೆ ಅನುಮಾನಕ್ಕೆ ಕಾರಣವಾಗಿದೆ.

ಪ್ರಜ್ವಲ್ ವಿಡಿಯೋ ಪ್ರಕರಣ: ಪ್ರೀತಂ ಗೌಡ ಆಪ್ತರ ನಿವಾಸದಲ್ಲಿ ಎಸ್​ಐಟಿಗೆ 10 ಪೆನ್​​ಡ್ರೈವ್‌ಗಳು, ಹಾರ್ಡ್ ಡಿಸ್ಕ್ ಪತ್ತೆ
ಪ್ರೀತಂ ಗೌಡ
Follow us on

ಹಾಸನ, ಮೇ 16: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ವಿಶೇಷ ತನಿಖಾ ತಂಡಕ್ಕೆ (SIT) ಬಿಜೆಪಿ ನಾಯಕ ಪ್ರೀತಂ ಗೌಡ (Preetham Gowda) ಆಪ್ತರ ಮನೆಯಲ್ಲಿ 10 ಪೆನ್​​ಡ್ರೈವ್‌ಗಳು, ಹಾರ್ಡ್ ಡಿಸ್ಕ್ ಪತ್ತೆಯಾಗಿವೆ. ಪ್ರೀತಂ ಗೌಡ ಆಪ್ತರು ಮತ್ತು ಪ್ರಕರಣದ ಸಂಬಂಧ ಈಗಾಗಲೇ ಬಂಧಕ್ಕೊಳಗಾಗಿರುವವರ ಮನೆಗಳ ಮೇಲೆ ಎಸ್​ಐಟಿ ದಾಳಿ ನಡೆಸಿತ್ತು. ಈಗ ವಶಕ್ಕೆ ಪಡೆದಿರುವ ಪೆನ್​ಡ್ರೈವ್​ಗಳನ್ನು ಎಸ್​ಐಟಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಿದೆ.

ಪ್ರೀತಂಗೌಡ ಆಪ್ತರ ಮನೆಯಲ್ಲಿ ದೊರೆತ ಪೆನ್​​ಡ್ರೈವ್ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದ್ದೇ ಹೌದೋ ಅಲ್ಲವೋ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ತಿಳಿದುಬರಲಿದೆ.

ಇನ್ನು ಹಾಸನದ 18 ಕಡೆ ನಡೆಸಿದ ದಾಳಿಯಲ್ಲಿ ಎಸ್​ಐಟಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. 7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್, ನಾಲ್ಕು ಲ್ಯಾಪ್ ಟಾಪ್, ಮೂರು ಡೆಸ್ಕ್ ಟಾಪ್ ವಶಕ್ಕೆ ಪಡೆದಿದೆ. ದಾಳಿ ನಡೆಸಿದ ಕಡೆಯಲ್ಲಿ ಸಿಕ್ಕ ಸಿಸಿ ಕ್ಯಾಮರಾಗಳ ದೃಶ್ಯಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ. ಪತ್ತೆಯಾದ ಹಾರ್ಡ್ಡ ಡಿಸ್ಕ್​​ಗಳಲ್ಲಿರುವ ವಿಡಿಯೋಗಳನ್ನೂ ಪರಿಶೀಲನೆ ಮಾಡಲಾಗುತ್ತಿದೆ. ವಿಡಿಯೋಗಳನ್ನು ಪೆನ್ ಡ್ರೈವ್, ಲ್ಯಾಪ್ ಟಾಪ್ ಹಾಗೂ ಡೆಸ್ಕ್ ಟಾಪ್​​ಗೆ ಕಾಪಿ ಮಾಡಿ ನಂತರ ಬೇರೆಯವರಿಗೆ ಹಂಚಿರುವ ಆರೋಪವಿದೆ.

ವಿಡಿಯೋ ಉಳ್ಳ ಪೆಬ್​ಡ್ರೈವ್ ಹಂಚಿಕೆಯ ಆರೋಪ ಎದುರಿಸುತ್ತಿರುವವರ ಮನೆ, ಕಚೇರಿಗೆ ಬಂದು ಹೋಗಿರುವವರ ಬಗ್ಗೆಯೂ ಎಸ್​​ಐಟಿ ಮಾಹಿತಿ ಕಲೆ ಹಾಕುತ್ತಿದೆ.

ಕಾಂಗ್ರೆಸ್ ಕಾರ್ಯಕರ್ತರ ಬಂಧನವಿಲ್ಲ: ಅಚ್ಚರಿ ಮೂಡಿಸಿದ ಎಸ್​​ಐಟಿ ನಡೆ

ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾದ 33/2024 ಪ್ರಕರಣಕ್ಕೆ ಹೊಸ ಹೆಸರು ಸೇರಿಸಿ ಇಬ್ಬರನ್ನು ಬಂಧಿಸಲಾಗಿದೆ. 6 ಮತ್ತು 7 ನೇ ಆರೋಪಿಗಳಾಗಿ ಚೇತನ್ ಹಾಗು ಲಿಖಿತ್ ಎಂಬವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಒಮ್ಮೆ ಟಿಕೆಟ್ ರದ್ದು, ಮತ್ತೆ ಟಿಕೆಟ್ ಕಾಯ್ದಿರಿಸಿ ವಿಮಾನ ಏರದ ಪ್ರಜ್ವಲ್: ಎಸ್​ಐಟಿ ಅಧಿಕಾರಿಗಳು ಬೇಸ್ತು

ಇವರಿಬ್ಬರ ಬಂಧನವಾದರೂ ಮೊದಲ ಐವರು ಆರೋಪಿಗಳ ಬಂಧನ ಇನ್ನೂ ಆಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರಾದ ನವೀನ್ ಗೌಡ, ಚೇತನ್ ಹಾಗೂ ಪುಟ್ಟಿ ಆಲಿಯಾಸ್ ಪುಟ್ಟರಾಜ್​​ರನ್ನು ಈವರೆಗೂ ಎಸ್​ಐಟಿ ಬಂಧಿಸಿಲ್ಲ. ಪೆನ್ ಡ್ರೈವ್ ಹೊಂದಿದ್ದ ಮೂಲ ವ್ಯಕ್ತಿ, ಪ್ರಜ್ವಲ್ ಮಾಜಿ ಕಾರು ಚಾಲಕನನ್ನೂ ತನಿಖಾ ತಂಡ ವಶಕ್ಕೆ ಪಡೆದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ