ಆಂಬುಲೆನ್ಸ್ ಸಿಗದೆ ನಡುರಾತ್ರಿ ಸ್ಟ್ರೆಚರ್ ಮೂಲಕ ರೋಗಿಯನ್ನ ಮತ್ತೊಂದು ಆಸ್ಪತ್ರೆಗೆ ಶಿಪ್ಟ್ ಮಾಡಿದ ಸಂಬಂಧಿಕರು
ಆಂಬುಲೆನ್ಸ್ ಸಿಗದೆ ನಡುರಾತ್ರಿ ರಸ್ತೆಯಲ್ಲಿ ರೋಗಿಯನ್ನ ಸ್ಟ್ರೆಚರ್ ಮೂಲಕ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರಗೆ ಶಿಪ್ಟ್ ಮಾಡಿದ ಅಮಾನವೀಯ ಘಟನೆ ಹಾಸನ ನಗರದ ಸಂಪಿಗೆ ರಸ್ತೆಯಲ್ಲಿ ನಡೆದಿದೆ.
ಹಾಸನ: ಆಂಬುಲೆನ್ಸ್ (Ambulance) ಸಿಗದೆ ನಡುರಾತ್ರಿ ರಸ್ತೆಯಲ್ಲಿ ರೋಗಿಯನ್ನ ಸ್ಟ್ರೆಚರ್ ಮೂಲಕ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರಗೆ ಶಿಪ್ಟ್ ಮಾಡಿದ ಅಮಾನವೀಯ ಘಟನೆ ಹಾಸನ (Hassan) ನಗರದ ಸಂಪಿಗೆ ರಸ್ತೆಯಲ್ಲಿ ನಡೆದಿದೆ. ರೋಗಿಯನ್ನು ಒಂದು ಖಾಸಗಿ ಆಸ್ಪತ್ರೆಯಿಂದ ಇನ್ನೊಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಬೇಕಿತ್ತು. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ ಒದಗಿಸಿಲ್ಲ. ಆಗ ಸಂಬಂಧಿಕರು ರೋಗಿಯನ್ನು ತುಂತುರು ಮಳೆಯ ನಡುವೆಯೇ ಒಂದು ಖಾಸಗಿ ಆಸ್ಪತ್ರೆಯಿಂದ ಮತ್ತೊಂದು ಖಾಸಗಿ ಆಸ್ಪತ್ರೆಗೆ ರಸ್ತೆಯಲ್ಲಿ ಸ್ಟ್ರೆಚರ್ ಮೂಲಕ ಶಿಫ್ಟ್ ಮಾಡಿದ್ದಾರೆ. ಈ ಮನಕಲಕುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. ಆಂಬುಲೆನ್ಸ ಒದಗಿಸದ ಆಸ್ಪತ್ರೆ ಸಿಬ್ಬಂದಿ ವಿರುಧ್ದ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ರೋಗಿಯನ್ನು ಸ್ಥಳಾಂತರ ಮಾಡಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ, ರೋಗಿಯ ಸ್ಥಿತಿ ಗಂಭಿರವಾಗಿದ್ದರು ಆಸ್ಪತ್ರೆ ಸಿಬ್ಬಂದಿ ತುರ್ತು ನೆರವು ನೀಡಲಿಲ್ಲ.
ಇದನ್ನು ಓದಿ: ವಿಮಾನದ ಕಿಟಕಿ ಬಳಿ ಗುಟ್ಕಾ ಚಿತ್ತಾರ, ಥೂ ಅಸಹ್ಯ ಎಂದ ನೆಟ್ಟಿಗರಿಂದ ಟ್ರೋಲ್ಗಳ ಸುರಿಮಳೆ
ಹೃದಯ ವಿದ್ರಾವಕ ಘಟನೆಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ಹೊರ ಹಾಕಿದ್ದು, ಅಮಾನವೀಯವಾಗಿ ವರ್ತಿಸಿದ ಆಸ್ಪತ್ರೆ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಇದನ್ನು ಓದಿ: ಏರ್ ಇಂಡಿಯಾದಲ್ಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪೊಲೀಸರ ವಿಚಾರಣೆ ಅಂಜಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣು
ಕಲಬುರಗಿ: ಪೊಲೀಸರ ವಿಚಾರಣೆ ಮತ್ತು ಮರ್ಯಾದೆಗೆ ಅಂಜಿ ವ್ಯಕ್ತಿಯೋರ್ವ ಆತ್ಮಹತ್ಯೆ ಘಟನೆ ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಮರತೂರ ಗ್ರಾಮದಲ್ಲಿ ನಡೆದಿದೆ. ಮನೋಜ ಸಿಂದೆ(32) ಮೃತ ದುರ್ದೈವಿ. ಮನೋಜ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಮನೋಜ್ನ ಹೆಂಡತಿಯ ಅಣ್ಣನ ಮಗು ಕಾಣೆಯಾಗಿತ್ತು. ಹೀಗಾಗಿ ಆ ಮಗುವನ್ನು ಮನೋಜನೇ ತೆಗೆದುಕೊಂಡು ಹೋಗಿದ್ದಾನೆ ಎಂದು ಶಹಬಾದ್ ಠಾಣೆ ಪೊಲೀಸ್ ರು ಕಿರುಕುಳ ನಿಡುತ್ತಿದ್ದಾರೆಂದು ಆರೋಪಿಸಲಾಗಿತ್ತು. ಎರಡು ದಿನ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ ಮನೋಜನಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಇವತ್ತು ಬಿಟ್ಟಿದ್ದೇವೆ, ನಾಳೆ ನಿನ್ನ ಹೆಂಡತಿಯನ್ನೂ ಕೂಡ ಕರೆದುಕೊಂಡು ಬಂದು ಇಬ್ಬರಿಗೂ ಜೈಲಿಗೆ ಹಾಕುತ್ತೇವೆ ಅಂತ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಹಬಾದ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:37 am, Fri, 27 May 22