ಹೊಸ ಪಠ್ಯಕ್ರಮದ ಪರಿಷ್ಕರಣ ಸಮತಿ ವಜಾ ಮಾಡಿ ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಿ; ಸರ್ಕಾರಕ್ಕೆ ಮೇ 31ರವರೆಗೆ ಗಡುವು ನೀಡಿದ ಸಂಘಟನೆಗಳು

ಪಠ್ಯ ಪರಿಷ್ಕರಣೆ ಹಿಂಪಡೆಯುವಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನಾ ಧರಣಿಗೆ ಕರೆ ನೀಡಲಾಗಿದೆ. ಮೇ 31 ರ ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು ಭಾಗಿಯಾಗಲಿವೆ.

ಹೊಸ ಪಠ್ಯಕ್ರಮದ ಪರಿಷ್ಕರಣ ಸಮತಿ ವಜಾ ಮಾಡಿ ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಿ; ಸರ್ಕಾರಕ್ಕೆ ಮೇ 31ರವರೆಗೆ ಗಡುವು ನೀಡಿದ ಸಂಘಟನೆಗಳು
ಶಿಕ್ಷಣ ತಜ್ಞರು, ಸಾಹಿತಿಗಳು ಧಾರವಾಡದಲ್ಲಿ ಪಠ್ಯಪುಸ್ತಕ ವಿರೋಧಿಸಿ ಸಭೆ ನಡೆಸಿದ್ದಾರೆ
Follow us
TV9 Web
| Updated By: ಆಯೇಷಾ ಬಾನು

Updated on:May 27, 2022 | 9:19 AM

ಧಾರವಾಡ: ಹೊಸ ಪಠ್ಯಪುಸ್ತಕಕ್ಕೆ ವಿರೋಧ ಹಿನ್ನೆಲೆ ಶಿಕ್ಷಣ ತಜ್ಞರು, ಸಾಹಿತಿಗಳು ಧಾರವಾಡದಲ್ಲಿ ಪಠ್ಯಪುಸ್ತಕ ವಿರೋಧಿಸಿ ಸಭೆ ನಡೆಸಿದ್ದಾರೆ. ತಮ್ಮ ಈ ಹೋರಾಟಕ್ಕೆ ‘ನಾವು ಕನ್ನಡಿಗರು ವಿಚಾರ ವೇದಿಕೆ’ ಸ್ಥಾಪನೆ ಮಾಡಲಾಗಿದೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಭೆ ನಡೆದಿದ್ದು ಪರಿಷ್ಕೃತ ಪಠ್ಯ ವಾಪಸ್‌ಗೆ 15 ದಿನಗಳ ಗಡುವು ನೀಡಿದ್ದಾರೆ.

‘ನಾವು ಕನ್ನಡಿಗರು ವಿಚಾರ ವೇದಿಕೆ’ ಡಾ. ಹೆಡ್ಗೇವಾರ್, ಸೂಲಿಬೆಲೆ ಪಠ್ಯ ತೆಗೆಯುವಂತೆ ಆಗ್ರಹಿಸಿದ್ದು ರೋಹಿತ್ ಚಕ್ರತೀರ್ಥರನ್ನು ಸಮಿತಿಯಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಹೊಸ ಪಠ್ಯ ಮುದ್ರಣಕ್ಕೂ ಮೊದಲೇ ಸಾರ್ವಜನಿಕರಿಗೆ ತಿಳಿಸಬೇಕು. ಒಂದು ವರ್ಷ ಮೊದಲೇ ಈ ಕೆಲಸ ಮಾಡಬೇಕು. ಸಾರ್ವಜನಿಕರು ಒಪ್ಪಿದರೆ ಮುದ್ರಿಸಬೇಕೆಂದು ಆಗ್ರಹಿಸಿದ್ದಾರೆ. ಇಲ್ಲದಿದ್ದಲ್ಲಿ ಧಾರವಾಡದಲ್ಲಿ ಸಮಾವೇಶ ಮಾಡಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: Climate Change:ಹವಾಮಾನ ಬದಲಾವಣೆ ಮುಂದೊಂದು ದಿನ ನಿಮ್ಮ ನಿದ್ರೆಯನ್ನೇ ಕಸಿಯಬಹುದು

ಸರ್ಕಾರಕ್ಕೆ ಮೇ 31ರವರೆಗೆ ಗಡುವು ನೀಡಿದ ಸಂಘಟನೆಗಳು ಇನ್ನು ಮತ್ತೊಂದು ಕಡೆ ದಿನದಿಂದ ದಿನಕ್ಕೆ ಪಠ್ಯ ಪರಿಷ್ಕರಣೆ ವಿರೋಧ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನೆಲೆ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮೇ 31ರವರೆಗೆ ಗಡುವು ನೀಡಿವೆ. ಸಾಹಿತಿಗಳು, ಚಿಂತಕರು ಹಾಗೂ ಶಿಕ್ಷಣ ತಜ್ಞರ ಹೋರಾಟಕ್ಕೆ ಕರವೇ ಸಾಥ್ ನೀಡಿದೆ. ಪಠ್ಯ ಪರಿಷ್ಕರಣೆ ಹಿಂಪಡೆಯುವಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದ ಪ್ರತಿಭಟನಾ ಧರಣಿಗೆ ಕರೆ ನೀಡಲಾಗಿದೆ. ಮೇ 31 ರ ಪ್ರತಿಭಟನೆಯಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳು ಭಾಗಿಯಾಗಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

SFI, NSUI, AISF, AISA, KVS, DSF, AIRSO, DVP, VBV, VJD ಹಾಗೂ ಬೆಂವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಕೂಡ ಭಾಗಿಯಾಗಲಿದೆ. ವಿವಿಧ ವಿದ್ಯಾರ್ಥಿ ಸಂಘಟನೆಗಳ ಜೊತೆಗೆ ಕರವೇ ನಾರಾಯಣಗೌಡ ಬಣದಿಂದಲೂ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮೇ 31ರಂದು ರಾಜ್ಯಾದ್ಯಂತ ಹೋರಾಟದ ಗಡುವು ನೀಡಿರುವ ಕರವೇ 31 ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ಮಾಡಲು ನಿರ್ಧಾರ ಮಾಡಿದೆ. 31 ರೊಳಗೆ ಹೊಸ ಪಠ್ಯಕ್ರಮದ ಪರಿಷ್ಕರಣ ಸಮತಿಯನ್ನ ವಜಾ ಮಾಡುವಂತೆ ಕರವೇ ಗಡುವು ನೀಡಿದ್ದು ಹಳೆಯ ಪಠ್ಯಕ್ರಮವನ್ನೇ ಮುಂದುವರಿಸಬೇಕು ಅಂತಾ ಮನವಿ ಮಾಡಿದೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದದಿಂದ ಕಂಗಾಲಾದ ಖಾಸಗಿ ಶಾಲೆಗಳು; ಗೊಂದಲದ ಪಠ್ಯ ಬಿಟ್ಟು ಉಳಿದ ಪಠ್ಯ ಬೋಧನೆಗೆ ಮನವಿ ಮಾಡಿ ಪತ್ರ ಬರೆದ ಒಕ್ಕೂಟ

Published On - 9:19 am, Fri, 27 May 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್