ಅಪರಿಚಿತ ವಾಹನ ಡಿಕ್ಕಿ, ಜೈಲ್ ವಾರ್ಡರ್ ಆಗಿದ್ದ ನಿವೃತ್ತ ಯೋಧ ಸಾವು: ಕಾರು ಅಪಘಾತದಲ್ಲಿ ಗಾಯಾಳು ಸಾವು, ಅಂಗಾಂಗ ದಾನ

ಅಪರಿಚಿತ ವಾಹನ ಡಿಕ್ಕಿ, ಜೈಲ್ ವಾರ್ಡರ್ ಆಗಿದ್ದ ನಿವೃತ್ತ ಯೋಧ ಸಾವು: ಕಾರು ಅಪಘಾತದಲ್ಲಿ ಗಾಯಾಳು ಸಾವು, ಅಂಗಾಂಗ ದಾನ
ಅಪರಿಚಿತ ವಾಹನ ಬೈಕ್​ ಗೆ ಡಿಕ್ಕಿ ಹೊಡೆದು ಜೈಲ್ ವಾರ್ಡರ್ ಆಗಿದ್ದ ನಿವೃತ್ತ ಯೋಧ ಸಾವು

ಹಾಸನದಿಂದ ದುದ್ದ ಕಡೆಗೆ ತೆರಳೋ ವೇಳೆ ನಿನ್ನೆ ಸಂಜೆ ಯೋಧ ಮೋಹನ್ ಕುಮಾರ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿಹೊಡೆದಿದೆ. ಇನ್ನು, ಏಪ್ರಿಲ್ 9 ರಂದು ಮಂಗಳೂರು ನಗರದ ಬಳ್ಳಾಲ್ ಭಾಗ್ ಎಂಬಲ್ಲಿ ಸರಣಿ ಅಪಘಾತ ‌ನಡೆದಿತ್ತು. ರಸ್ತೆಯ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಮತ್ತು ಪ್ರೀತಿಅವರ ಬಿಎಂಡಬ್ಲ್ಯೂ ಕಾರಿಗೆ ಡಿಕ್ಕಿಯಾಗಿತ್ತು.

TV9kannada Web Team

| Edited By: sadhu srinath

Apr 23, 2022 | 1:52 PM

ಹಾಸನ: ಹಾಸನ ತಾಲ್ಲೂಕಿನ ಅರಸೀಕೆರೆ ರಸ್ತೆಯ ಕೋರವಂಗಲ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿವೃತ್ತ ಯೋಧರೊಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಎ.ಎಂ. ಮೋಹನ್ ಕುಮಾರ್ (46) ಮೃತ ನಿವೃತ್ತ ಯೋಧ. ಹಾಸನದಿಂದ ದುದ್ದ ಕಡೆಗೆ ತೆರಳೋ ವೇಳೆ ನಿನ್ನೆ ಸಂಜೆ ಯೋಧ ಮೋಹನ್ ಕುಮಾರ್ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿಹೊಡೆದಿದೆ. ಸೇನೆಯಿಂದ ನಿವೃತ್ತಿಯಾದ ಬಳಿಕ ಮೋಹನ್ ಅವರು ಹಾಸನ ಜಿಲ್ಲಾ ಕಾರಾಗೃಹ ದಲ್ಲಿ ಜೈಲ್ ವಾರ್ಡರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದುದ್ದಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಿಡ್ಲಘಟ್ಟದ ಬಳಿ ಕಾರು ಬೈಕ್ ಗಳ ನಡುವೆ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಹೊರವಲಯದಲ್ಲಿ ಬಳಿ ಕಾರು ಮತ್ತು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಒಂದು ಕಾರು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು, ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರ ಹುಜಗೂರಿನ ಮಂಜುನಾಥ್ ಮೃತಪಟ್ಟ ದುರ್ದೈವಿ. ಮುತ್ತಕದಹಳ್ಳಿಯ ಕಿಶೋರ್ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಂಧ್ರ ಪ್ರದೇಶ ನೋಂದಣಿಯ AP 09 BJ 440 ಸಂಖ್ಯೆಯ ವೆರ್ನಾ ಕಾರಿನಿಂದ ಅಪಘಾತ ಸಂಭವಿಸಿದೆ. ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣ: ಗಾಯಾಳು ಪ್ರೀತಿ ಸಾವು, ಅಂಗಾಂಗ ದಾನ ಮಂಗಳೂರು: ಮಂಗಳೂರಿನಲ್ಲಿ ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣದಲ್ಲಿ ಗಾಯಾಳು ಪ್ರೀತಿ ಮನೋಜ್ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರೀತಿ ಅವರಿಗೆ ಬ್ರೈನ್ ಡೆಡ್ ಆಗಿತ್ತು. ಇಂದು ಅವರ ಸಾವನ್ನು ಘೋಷಿಸಲಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಪ್ರೀತಿ ಮನೋಜ್ ಅವರು ಅಂಗಾಂಗ ದಾನ ಮಾಡಿದ್ದಾರೆ. ಪ್ರೀತಿ ಮನೆಯವರ ಒಪ್ಪಿಗೆ ಪಡೆದು ಅಂಗಾಂಗ ದಾನ ಮಾಡಲಾಗಿದೆ.

ಏಪ್ರಿಲ್ 9 ರಂದು ಮಂಗಳೂರು ನಗರದ ಬಳ್ಳಾಲ್ ಭಾಗ್ ಎಂಬಲ್ಲಿ ಸರಣಿ ಅಪಘಾತ ‌ನಡೆದಿತ್ತು. ರಸ್ತೆಯ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಮತ್ತು ಪ್ರೀತಿಅವರ ಬಿಎಂಡಬ್ಲ್ಯೂ ಕಾರಿಗೆ ಡಿಕ್ಕಿಯಾಗಿತ್ತು. ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ಇದೇ ವೇಳೆ, ಡಿವೈಡರ್ ನಲ್ಲಿ ನಿಂತಿದ್ದ ಮಹಿಳೆ ಕೂದಲೆಲೆ ಅಂತರದಲ್ಲಿ ಪಾರಾಗಿದ್ದಾರೆ.

Mangalore Car Accident Injured Preeti dead

ಬಿಎಂಡಬ್ಲ್ಯೂ ಕಾರು ಅಪಘಾತ ಪ್ರಕರಣ: ಗಾಯಾಳು ಪ್ರೀತಿ ಸಾವು, ಅಂಗಾಂಗ ದಾನ

ಇದನ್ನೂ ಓದಿ: ಜಹಾಂಗೀರ್​​ಪುರಿ ಹಿಂಸಾಚಾರ ಪ್ರಕರಣ; ಪ್ರಮುಖ ಆರೋಪಿ ಅನ್ಸಾರ್ ಕೇಸ್ ದಾಖಲು, ಇಡಿಯಿಂದ ತನಿಖೆ ಆರಂಭ

ಇದನ್ನೂ ಓದಿ: ರಾಬ್ರಿ ದೇವಿ ಮನೆಯ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಸಿಎಂ; ಬಿಹಾರದಲ್ಲಿ ಮತ್ತೆ ಒಂದಾಗ್ತಾರಾ ನಿತೀಶ್ ಕುಮಾರ್- ಲಾಲೂ ಪ್ರಸಾದ್?

Follow us on

Related Stories

Most Read Stories

Click on your DTH Provider to Add TV9 Kannada