ಪ್ರೀತಂ ಬಾಯಲ್ಲಿ ಬರಲಿಲ್ಲ ಪ್ರಜ್ವಲ್‌ ಹೆಸರು…ಜೆಡಿಎಸ್​​ಗೆ ಶಾಕ್ ಕೊಟ್ಟ ಬಿಜೆಪಿ ಉಸ್ತುವಾರಿ

ಲೋಕಸಭೆ ಸಮರದಲ್ಲಿ ಮೂರು ಪಕ್ಷಗಳ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಿದ್ದಾರೆ. ಆದ್ರೆ ಮೂರು ಪಕ್ಷಗಳು ಕೂಡ ಸೆರಗಲ್ಲಿ ಕೆಂಡ ಇಟ್ಟುಕೊಂಡಂತೆ ಅಸಮಾಧಾನ ಬಲೆಯಲ್ಲಿ ಬಿದ್ದು ವಿಲ ವಿಲ ಒದ್ದಾಡ್ತಿವೆ.. ಟಿಕೆಟ್​ ವಂಚಿತ ಆಕ್ರೋಶ, ಆಪರೇಷನ್​ ಆಟ, ಬಂಡಾಯದ ಬೆಂಕಿಯಲ್ಲಿ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್ ಸಿಲುಕಿವೆ. ಅದರಲ್ಲೂ ಮುಖ್ಯವಾಗಿ ಹಾಸದನಲ್ಲಿ ಎಷ್ಟೇ ಸಂಧಾನ ಮಾಡಿದರೂ ಪ್ರಯೋಜನವಾಗಿಲ್ಲ.

ಪ್ರೀತಂ ಬಾಯಲ್ಲಿ ಬರಲಿಲ್ಲ ಪ್ರಜ್ವಲ್‌ ಹೆಸರು...ಜೆಡಿಎಸ್​​ಗೆ ಶಾಕ್ ಕೊಟ್ಟ ಬಿಜೆಪಿ ಉಸ್ತುವಾರಿ
Follow us
ರಮೇಶ್ ಬಿ. ಜವಳಗೇರಾ
|

Updated on:Apr 07, 2024 | 12:34 PM

ಹಾಸನ.ಮೈಸೂರು, (ಏಪ್ರಿಲ್ 07): ದಳಪತಿಗಳ ಭದ್ರಕೋಟೆ ಹಾಸನದಲ್ಲಿ ಬಿಜೆಪಿ ಮತ್ತು ಜೆಡಿಎಸ್​ ನಡುವಿನ ಒಳಜಗಳ ಮುಗಿಯದ ಕತೆಯಾಗಿದೆ. ಹಾಸನದಲ್ಲಿ ಬಿಜೆಪಿ ನಾಯುಕರು ಏನಿಲ್ಲ ಏನಿಲ್ಲ ಬಿಜೆಪಿ-ಜೆಡಿಎಸ್​ ಮೈತ್ರಿ ಮಧ್ಯೆ ಏನಿಲ್ಲ ಎಂದು ನಾಯಕರುಗಳು ಹೇಳುತ್ತಿದ್ದಾರೆ. ಆದ್ರೆ, ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಮಾತ್ರ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರಕ್ಕೆ ಹೋಗುತ್ತಿಲ್ಲ. ಅಲ್ಲದೇ ಈ ಬಗ್ಗೆ ಮಾಧ್ಯಮಗಳ ಮುಂದೆ ಪ್ರೀತಂ ಬಾಯಲ್ಲಿ ಪ್ರಜ್ವಲ್‌ ಹೆಸರು ಬರುತ್ತಿಲ್ಲ. ಹೌದು….ಈ ಬಗ್ಗೆ ಇಂದು (ಏಪ್ರಿಲ್ 07) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೀತಂಗೌಡ, ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ಹೆಸರು ಹೇಳುತ್ತಿಲ್ಲ. ಪ್ರತಿ ಪ್ರಶ್ನೆಗೂ ಎನ್​ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದಷ್ಟೇ ಹೇಳುತ್ತಿದ್ದಾರೆ. ಎಷ್ಟೇ ಪ್ರಶ್ನೆ ಮಾಡಿದ್ರೂ ಒಮ್ಮೆಯೂ ಪ್ರಜ್ವಲ್ ರೇವಣ್ಣ ಹೆಸರು ಹೇಳಲೇ ಇಲ್ಲ. ಪ್ರತಿ ಮಾತು ಮಾತಿಗೂ ಎನ್​ಡಿಎ, ಬಿಜೆಪಿ ಅಂತಷ್ಟೇ ಹೇಳಿದರು.

ಇದರ ಮಧ್ಯೆ ಸ್ವತಃ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಮೋಹನ್ ದಾಸ್ ಅಗರ್ವಾಲ್ ಅವರು ಹಾಸನ ಕ್ಷೇತ್ರದಲ್ಲಿನ ಹೊಂದಾಣಿಕೆ ಸಮಸ್ಯೆ ಬಗ್ಗೆ ಮಾತನಾಡಿದ್ದು,  ಪ್ರೀತಂಗೌಡ ಅವರಿಗೆ ಮೈಸೂರು, ಚಾಮರಾನಗರ ಉಸ್ತುವಾರಿ ನೀಡಿದ್ದೇವೆ. ಹೀಗಾಗಿ ಅವರು ಹಾಸನಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಒಂದು ರೀತಿ ಅಚ್ಚರಿಗೆ ಕಾರಣವಾಗಿದೆ. ಪ್ರೀತಂಗೌಡ ಹಾಸನದ ಶಾಸಕರಾಗಿದ್ದವರು. ಕ್ಷೇತ್ರದಲ್ಲಿ ಅವರದ್ದೇ ಆದ ವರ್ಚಸ್ಸು ಇರುತ್ತೆ. ಹೀಗಾಗಿ ಕ್ಷೇತ್ರದಲ್ಲಿ ಪ್ರೀತಂಗ ಗೌಡ ಪ್ರಚಾರ ಹೋಗುವುದರಿಂದ ಮೈತ್ರಿ ಅಭ್ಯರ್ಥಿ ಗೆಲುವು ಸುಲಭವಾಗಬಹುದು. ಆದ್ರೆ, ರಾಧಮೋಹನ್ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.  ಅಲ್ಲದೇ ಇದು ಒಂದು ರೀತಿ ಜೆಡಿಎಸ್​ ಅಭ್ಯರ್ಥಿಗೆ ಬಿಗ್ ಶಾಕ್ ಎಂದು ಹೇಳಬಹುದು.

ಹಾಸನಕ್ಕೆ ಪ್ರೀತಂಗೌಡ ಹೋಗಲು ಆಗಲ್ಲ ಎಂದ ಉಸ್ತುವಾರಿ

ಇನ್ನು ಹಾಸನದ ಬಗ್ಗೆ ಇಂದು(ಏಪ್ರಿಲ್ 07) ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಮೋಹನ್ ದಾಸ್ ಅಗರ್ವಾಲ್ , ಹಾಸನದಲ್ಲಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ನಿನ್ನೆಯು ಹಾಸನಕ್ಕೆ ಹೋಗಿದ್ದೆ. ಅಲ್ಲಿ ಯಾವುದೇ ಸಮಸ್ಯೆ ಕಾಣಲಿಲ್ಲ. ಎಲ್ಲರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ನವರಿಗಿಂತಲು ಬಿಜೆಪಿ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರೀತಂಗೌಡ ಅವರ ಬೆಂಬಲಿಗರು ಕೆಲಸ ಮಾಡುತ್ತಿದ್ದಾರೆ. ಅವಶ್ಯಕತೆ ಬಿದ್ದರೆ ಅವರು (ಪ್ರೀತಂಗೌಡ) ಹಾಸನಕ್ಕೆ ಹೋಗುತ್ತಾರೆ ಎಂದು ಸ್ಪಷ್ಟಪಡಿಸಿದರು.

ನಾನು ಉತ್ತರ ಪ್ರದೇಶದವನು. ಅಲ್ಲಿಯು ಚುನಾವಣೆ ನಡೆಯುತ್ತಿದೆ. ಆದ್ರೆ ನಾನು ಕರ್ನಾಟಕ ಉಸ್ತುವಾರಿ ಆಗಿದ್ದೇನೆ. ಅದೇ ರೀತಿ ಪ್ರೀತಂ ಮೈಸೂರು ಚಾಮರಾಜನಗರ ಉಸ್ತುವಾರಿ ಆಗಿದ್ದಾರೆ. ಯಾವಗಲು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ನಿನ್ನೆ ಎರಡು ಗಂಟೆ ಜೊತೆಗಿದ್ದರು. ಅವರು ಪ್ರೀತಮ್ ಬಗ್ಗೆ ಕಾರ್ಯಕರ್ತರ ಬಗ್ಗೆ ಏನನ್ನು ಹೇಳಿಲ್ಲ. ಪ್ರೀತಂ- ಪ್ರಜ್ವಲ್ ಮೀಟಿಂಗ್ ಬಗ್ಗೆ ಮಾಹಿತಿ ಇಲ್ಲ, ಯಾವ ಸಭೆಯು ಇಲ್ಲ. ಯಾವುದೇ ಸಮಸ್ಯೆ ಇಲ್ಲ. ಪ್ರೀತಂ ಗೌಡ ಹಾಸನದಲ್ಲಿ ಸೋತಿರಬಹುದು. ಆದ್ರೆ ಜೆ.ಡಿ.ಎಸ್ ಎಂಎಲ್​ಎಗಿಂತ ಪಾಪ್ಯುಲರ್ ವ್ಯಕ್ತಿ ಎಂದು ಪ್ರೀತಂಗೌಡ ಅವರನ್ನು ಕೊಂಡಾಡಿದರು.

ಹಾಸನ ದಳಪತಿಗಳ ಭದ್ರಕೋಟೆ. ಈ 7 ಸುತ್ತಿನ ಭದ್ರ ಕೋಟೆಯನ್ನ ಕಬ್ಜ ಮಾಡಲು ಕಾಂಗ್ರೆಸ್​ ಪಾಳಯ ಹೊಂಚು ಹಾಕಿ ಕುಳಿತಿದ್ರೆ, ಮತ್ತೊಂದೆಡೆ ಮೈತ್ರಿ ನಾಯಕರ ಮಧ್ಯೆ ಮುನಿಸು ಭುಗಿಲೆದ್ದಿದೆ. ಅಸಮಾಧಾನಿತ ನಾಯಕರಿಗೆ ಸಮಾಧಾನಕ್ಕೆ ಮುಲಾಮು ಹಚ್ಚಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ ಹಾಸನ ಸವಾಲಾಗಿ ಪರಿಣಮಿಸಿದೆ. ಲೋಕಸಭಾ ಚುನಾವಣೆಗೆ ದಿನಗಣನೇ ಆರಂಭವಾದ್ರೂ ಹಾಸನದಲ್ಲಿ ಮೈತ್ರಿ ಮುನಿಸಿನ ಪ್ರಹಸನ ಮಾತ್ರ ಮುಗಿಯದ ಕತೆಯಾಗಿದೆ.

ಹಾಸನದಲ್ಲಿ ಮೈತ್ರಿ ನಾಯಕರ ಮುನಿಸಿಗೆ ಜಿಲ್ಲೆಯ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲಿನಂತಾಗಿದೆ. ಹಾಸನದಲ್ಲಿ ಬಿಜೆಪಿ-ಜೆಡಿಎಸ್​ ಮುನಿಸಿಗೆ ಇನ್ನೂ ಮುಲಾಮು ಸಿಗದಂತಾಗಿದೆ. ಇತ್ತ ಎಲೆಕ್ಷನ್​ ಪ್ರಚಾರದಿಂದ ಪ್ರೀತಂಗೌಡ ಅಂತರ ಕಾಯ್ದುಕೊಂಡ್ರೆ ಅತ್ತ ಸಿಮೆಂಟ್ ಮಂಜು ಸೈಲೆಂಟ್ ಆಗಿದ್ದಾರೆ. ನಿನ್ನೆ (ಏಪ್ರಿಲ್ 07) ಹಾಸನಕ್ಕೆ ಎಂಟ್ರಿ ಕೊಟ್ಟಿದ್ದ ಚುನಾವಣೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್​ವಾಲ್​, ಬಿಜೆಪಿ, ಜೆಡಿಎಸ್ ಸಮನ್ವಯ ಸಭೆ ನಡೆಸಿದ್ರು. ಪ್ರೀತಂಗೌಡಗೆ ಇಲ್ಲಿ ಇರಬೇಡಿ ಎಂದು ನಾನೇ ಹೇಳಿದ್ದೇನೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ದಳಪತಿಗಳಿಗೆ ಭದ್ರ ಕೋಟೆ ತಲೆನೋವಾಗಿದ್ದು, ಸಮನ್ವಯ ಸಭೆ ನಡೆಸಿದರೂ ಫಲ ಸಿಗದಂತಾಗಿದೆ.. ಹಾಸನದಲ್ಲಿ ಮೈತ್ರಿ ನಡುವೆ ಗೊಂದಲ ಹೆಚ್ತಿರೋದಕ್ಕೆ ಕಾರಣ ಏನು ಅಂತ ಹುಡೋಕೋದೆ ದಳಪತಿಗಳಿಗೆ ಸವಾಲಾಗಿದೆ.

Published On - 12:33 pm, Sun, 7 April 24

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ