ಹಾಸನದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಬೆಲೆ ಬಾಳುವ ಗೋಮಾಳ ಜಾಗ ಕಬಳಿಕೆ! ಗ್ರಾಮಸ್ಥರ ಆರೋಪ
ಹೇಮಾವತಿ ಯೋಜನೆ ಸಂತ್ರಸ್ತರೆಂದು ಭೂಮಿ ಹಂಚಿಕೆ ಮಾಡಿದ್ದಾರಂತೆ. ಹೇಮಾವತಿ ಸಂತ್ರಸ್ತರ ಪುನರ್ವಸತಿಗೆ ಭೂಮಿ ಮೀಸಲಾಗಿಲ್ಲ. ಭೂಮಿ ಮೀಸಲಾಗದಿದ್ದರೂ ಅಕ್ರಮವಾಗಿ ಭೂ ಮಂಜೂರಾತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಸನ: ಗೋಮಾಳ ಜಾಗವನ್ನು ಅಕ್ರಮವಾಗಿ ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಹಾಸನ ತಾಲೂಕಿನ ಜಿ.ಮೈಲನಹಳ್ಳಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರು ಕೋಟ್ಯಾಂತರ ಬೆಲೆ ಬಾಳುವ ಭೂಮಿ ಕಬಳಿಕೆ ಮಾಡಿದ್ದಾರೆ ಅಂತ ರೈತರು ಆರೋಪಿಸಿದ್ದಾರೆ. ಗ್ರಾಮಸ್ಥರಿಗೆ ಮಾಹಿತಿ ನೀಡದೆ ಗೋಮಾಳ ಜಾಗವನ್ನು ಈರಮ್ಮ, ಮಂಜೇಗೌಡ ಹೆಸರಿಗೆ ತಲಾ 4 ಎಕರೆ ಹಂಚಿಕೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಭೂಮಿ ಉಳಿಸಿಕೊಳ್ಳಲು ಗ್ರಾಮದ ರೈತರು ಹೋರಾಟ ನಡೆಸುತ್ತಿದ್ದಾರೆ.
ಹೇಮಾವತಿ ಯೋಜನೆ ಸಂತ್ರಸ್ತರೆಂದು ಭೂಮಿ ಹಂಚಿಕೆ ಮಾಡಿದ್ದಾರಂತೆ. ಹೇಮಾವತಿ ಸಂತ್ರಸ್ತರ ಪುನರ್ವಸತಿಗೆ ಭೂಮಿ ಮೀಸಲಾಗಿಲ್ಲ. ಭೂಮಿ ಮೀಸಲಾಗದಿದ್ದರೂ ಅಕ್ರಮವಾಗಿ ಭೂ ಮಂಜೂರಾತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಭೂಮಿ ಹಂಚಿಕೆಗೆ ನಾವು ಒಪ್ಪಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು ಅಕ್ರಮದ ಹಿಂದೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಅಂತ ಆರೋಪಿಸಿದ್ದಾರೆ.
ಸರ್ವೇ ನಂ 146 ರಲ್ಲಿ ಈರಮ್ಮ ಬಿನ್ ಚನ್ನೇಗೌಡ ಮತ್ತು ಮಂಜೇಗೌಡ ಬಿನ್ ಕೃಷ್ಣೇಗೌಡ ಎಂಬುವರಿಗೆ ಅಕ್ರಮವಾಗಿ ತಲಾ 4 ಎಕರೆ ಭೂಮಿ ಹಂಚಿಕೆ ಆಗಿದೆ. ಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿಯೇ ನೀಡದೆ 2018-19 ರಲ್ಲಿ ಗೋಮಾಳ ಭೂಮಿಯನ್ನ ಇಬ್ಬರು ವ್ಯಕ್ತಿಗಳ ಹೆಸರಿನಲ್ಲಿ ಖಾತೆ ಮಾಡಿದ್ದಾರೆ. ಅಕ್ರಮದ ಹಿಂದೆ ಅಧಿಕಾರಿಗಳೂ ಶಾಮೀಲು ಇದೆ ಅಂತ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಇದನ್ನೂಓದಿ
ಹಾಸನದಲ್ಲಿ ರಾತ್ರಿಯಿಡಿ ಸುರಿದ ಮಳೆಗೆ ಕೊಚ್ಚಿ ಹೋದ ರಸ್ತೆ; ವಾಹನ ಸವಾರರ ಪರದಾಟ
ಮೇಘಾಲಯದಲ್ಲಿ ಕಾಂಗ್ರೆಸ್ಗೆ ಇನ್ನೊಂದು ಆಘಾತ; ದೋಷ ಹೇಳಿದರೆ ನಿಂದಿಸುತ್ತಾರೆಂದು ಪಕ್ಷ ತೊರೆದ ಯುವ ಘಟಕ ಅಧ್ಯಕ್ಷ