ಹಾವೇರಿ, ಡಿಸೆಂಬರ್ 30: ಅಯೋಧ್ಯೆ ರಾಮಮಂದಿರ (Ayodhya Ram Mandir) ಬಳಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣವಾಗಬೇಕು. ಮಹರ್ಷಿ ವಾಲ್ಮೀಕಿ (Valmiki) ರಾಮಾಯಣ ಗ್ರಂಥ ರಚಿಸಿದ್ದಾರೆ. ಅಯೋಧ್ಯೆ ಏರ್ಪೋರ್ಟ್ಗೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿದ್ದನ್ನು ಸ್ವಾಗತಿಸುವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಖುಷಿ ತಂದಿದೆ. ಇದು ಭಾರತೀಯರ ಬಹುದಿನದ ಕನಸಾಗಿತ್ತು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು.
ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖುಷಿ ತಂದಿದೆ. ದೇಶದಲ್ಲಿ ಬಹಳಷ್ಟು ಮಂದಿರಗಳು ಇವೆ ಈಗ ರಾಮ ಮಂದಿರ ಸೇರ್ಪಡೆಯಾಗುತ್ತಿದೆ. ಇನ್ನು ಬಿಜೆಪಿ ರಾಜಕೀಯವಾಗಿ ಲಾಭ ಪಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಅವರು ರಾಜಕೀಯ ಎಲ್ಲಿ ಇಲ್ಲಾ ಹೇಳಿ? ಎಲ್ಲ ಕಡೆ ಇದೆ. ಅದು ಲಾಭ ಆಗುತ್ತೋ ನಷ್ಟವಾಗುತ್ತೋ ಚುನಾವಣೆ ನಂತರ ತಿಳಿಯುತ್ತೆ ಎಂದರು.
ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಹಿಜಾಬ್ ವಿಚಾರವಾಗಿ ಮಾತನಾಡಿದ ಅವರು ಹಿಜಾಬ್ ವಿಚಾರದಲ್ಲಿ ಸರ್ಕಾರ ಯಾವುದೇ ಆದೇಶ ಮಾಡಿಲ್ಲ. ಮಾಡುತ್ತೆನೆ ಅಂಥಾ ಹೇಳಿದರು ಆದರೆ ಅದು ಕಾನೂನಿನಲ್ಲಿ ಇಲ್ಲ. ಹಿಜಾಬ್ ಧರಿಸುವುದು, ಬಿಡುವುದು ಅವರಿಗೆ ಬಿಟ್ಟ ವಿಷಯ. ನಡೆದುಕೊಂಡು ಬಂದಿದೆ ನಡೆದುಕೊಂಡು ಹೋಗಲಿ ಎಂದು ಜಾರಿಕೊಂಡರು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಕಾಶಿ ಮತ್ತು ಪ್ರಯಾಗ್ ರಾಜ್ ಭಿಕ್ಷುಕರಿಂದ 4 ಲಕ್ಷ ದೇಣಿಗೆ
ಮೂರು ಜನರಿಗೆ ಉಪಮುಖ್ಯಮಂತ್ರಿ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು ಇದು ಹೈಕಮಾಂಡ್ಗೆ ಬಿಟ್ಟ ವಿಚಾರ. ಅವರು ಏನು ಮಾಡುತ್ತಾರೇ ನೋಡೋಣ. ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ಪ್ರಕರಣ ದಾಖಲಾಗಿದೆ. ನ್ಯಾಯಾಲಯ ಏನು ತೀರ್ಮಾನ ತೆಗೆದುಕೊಳ್ಳುತ್ತೆ ನೋಡೋಣ. ನ್ಯಾಯಾಲಯದ ತೀರ್ಮಾನ ಅಂತಿಮ. ನಾವು ಏನು ಹೇಳಲಿಕ್ಕೆ ಆಗಲ್ಲ ಎಂದರು.
ಸಚಿವ ಮಧು ಬಂಗಾರಪ್ಪ ಚಕ್ ಬೋನ್ಸ್ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು ಇದು ಅವರ ಖಾಸಗಿ ವಿಚಾರ ಉದ್ಯಮದಲ್ಲಿ ಇವೆಲ್ಲಾ ಕಾಮನ್. ರಾಜಕೀಯವಾಗಿ ಏನಾದರು ತಪ್ಪು ಮಾಡಿದರೇ ನೋಡೋಣ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Sat, 30 December 23