AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Human Interest Story: ಎಸ್ಸೆಸ್ಸೆಲ್ಸಿ ಪರೀಕ್ಷೆ ಒಟ್ಟಿಗೆ ಬರೆದ ಅಪ್ಪ-ಮಗಳು; ಮಗಳಿಗೆ 83 ಪರ್ಸೆಂಟ್, ತಂದೆ 57 ಪರ್ಸೆಂಟ್

ಹಾವೇರಿ ಜಿಲ್ಲೆಯಲ್ಲಿ ಅಪ್ಪ-ಮಗಳು ಇಬ್ಬರೂ ಒಟ್ಟಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ವಿಶೇಷ ಏನೆಂದರೆ, ಅಪ್ಪನಿಗಿಂತ ಮಗಳಿಗೆ ಹೆಚ್ಚು ಅಂಕ ಬಂದಿದೆ.

Human Interest Story: ಎಸ್ಸೆಸ್ಸೆಲ್ಸಿ ಪರೀಕ್ಷೆ ಒಟ್ಟಿಗೆ ಬರೆದ ಅಪ್ಪ-ಮಗಳು; ಮಗಳಿಗೆ 83 ಪರ್ಸೆಂಟ್, ತಂದೆ 57 ಪರ್ಸೆಂಟ್
ತಂದೆ ನಾಗರಾಜ (ಎಡಭಾಗದಲ್ಲಿ), ಮಗಳು ಚಂದ್ರಮ್ಮ (ಬಲ ಭಾಗದಲ್ಲಿ)
TV9 Web
| Edited By: |

Updated on: Aug 12, 2021 | 6:55 PM

Share

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಬಂದಾಗ ತಮ್ಮ ಮಕ್ಕಳ ಅಂಕ ಎಷ್ಟು ಎಂದು ತಂದೆ- ತಾಯಿಗಳು ಕುತೂಹಲಿಗಳಾಗಿರುತ್ತಾರೆ. ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ತಾವೇ ಪಾಸ್​ ಆದಂತೆ ತಂದೆ- ತಾಯಿ ಸಕತ್ ಖುಷಿ ಆಗುತ್ತಾರೆ. ಇಂಥ ಸನ್ನಿವೇಶವನ್ನು ನಾವು ನೋಡಿರುತ್ತೇವೆ. ಆದರೆ ಮಗಳ ಜೊತೆಗೆ ತಂದೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಇಬ್ಬರೂ ಉತ್ತೀರ್ಣರಾದ ಆಸಕ್ತಿಕರ ಘಟನೆ ವರದಿ ಆಗಿದೆ. ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ನಾಗರಾಜ ಹರಿಜನ ಎಂಬುವರು ಕುಡುಪಲಿ ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿದ್ದಾರೆ. 1995ರಲ್ಲಿ ನಾಗರಾಜ ಅವರು ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದ ಶಾಲೆಯಲ್ಲಿ ಓದಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ್ದರು. ಅಂದು ಎಲ್ಲ ವಿಷಯಗಳಲ್ಲೂ ಫೇಲ್ ಆಗಿದ್ದರು. ಆಗಿನಿಂದಲೂ ನಾಗರಾಜ ಆರು ಬಾರಿ ಪರೀಕ್ಷೆಗೆ ಕುಳಿತಿದ್ದರು. ಆದರೆ ಕನ್ನಡ, ಹಿಂದಿ, ಸಮಾಜ ವಿಜ್ಞಾನ ಮೂರು ವಿಷಯದಲ್ಲಿ ಪಾಸಾಗಿ, ಗಣಿತ,‌ ಇಂಗ್ಲಿಷ್, ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರು. ಅದಾದ ನಂತರ ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ವೀರಮಹೇಶ್ವರ ಪ್ರೌಢ ಶಾಲೆಯಿಂದ ಪರೀಕ್ಷೆ ಎದುರಿಸಿದ್ದರು. ಆಗಲೂ ಫಲಿತಾಂಶ ಮಾತ್ರ ಬದಲಾಗಲಿಲ್ಲ. ಅಷ್ಟರಲ್ಲಿ ಪರೀಕ್ಷೆ ಆಸೆಯನ್ನೇ ಬಿಟ್ಟ ಅವರು, ಹಾಜರಾಗುವುದನ್ನೇ ಬಿಟ್ಟಿದ್ದರು.

ಕುಡುಪಲಿ ಗ್ರಾಮದ ವೀರಮಹೇಶ್ವರ ಪ್ರೌಢ ಶಾಲೆಯಲ್ಲಿ ನಾಗರಾಜರ ಮಗಳು ಚಂದ್ರಮ್ಮ ಹರಿಜನ ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದದ್ದು ನೋಡಿದ ಮೇಲೆ ನಾಗರಾಜಗೆ ಪರೀಕ್ಷೆಗೆ ಮತ್ತೆ ಕೂರಬೇಕು ಎಂಬ ಆಸೆ ಹುಟ್ಟಿದೆ. ಸರಿ, ಇದೊಂದು ಬಾರಿ ಪರೀಕ್ಷೆ ಎದುರಿಸೋಣ ಎಂದುಕೊಂಡ ನಾಗರಾಜ, ಮಗಳ ಜತೆಗೆ ತಾವೂ ಪರೀಕ್ಷೆಗೆ ಸಿದ್ದತೆ ನಡೆಸಿದ್ದರು. ಈ ಬಾರಿ ಕೊನೆಗೂ‌‌ ಮಗಳೊಂದಿಗೆ ಎಸ್ಸೆಸ್ಸೆಲ್ಸಿ ಪಾಸಾಗಿದ್ದಾರೆ ನಾಗರಾಜ. ಬಾಕಿ ಉಳಿದುಕೊಂಡಿದ್ದ ಗಣಿತ, ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್ಲ ವಿಷಯಗಳೂ ಸೇರಿ ನಾಗರಾಜಗೆ ಶೇ 57ರಷ್ಟು ಅಂಕ ಬಂದಿದೆ.

ಇನ್ನು ನಾಗರಾಜ ಅವರ ಮಗಳು ಚಂದ್ರಮ್ಮ ಹರಿಜನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 519 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದು, ಅಪ್ಪ ಮತ್ತು ಮಗಳು ಒಂದೇ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್ ಆಗಿರುವುದರ ಸಂಭ್ರಮಾಚರಣೆ ಮನೆ ಮಾಡಿದೆ.

“ನಮ್ಮ ಅಪ್ಪ ಸುಮಾರು ವರ್ಷಗಳಿಂದ ಪರೀಕ್ಷೆ ಬರೆದಿದ್ದರೂ ಪಾಸಾಗಿರಲಿಲ್ಲ. ಈ ವರ್ಷ ನನ್ನ ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿ ಪಾಸ್ ಆಗಿರುವುದು ಬಹಳ ಖುಷಿಯಾಗಿದೆ. ನಾನು ಮುಂದೆ ಚೆನ್ನಾಗಿ ಓದಿ, ಒಂದು ನೌಕರಿ ಪಡೆಯಬೇಕು ಎಂಬ ಆಸೆ ಇದೆ,” ಎನ್ನುತ್ತಾ ಕಣ್ಣು ತುಂಬಿಕೊಳ್ಳುತ್ತದೆ ಹದಿಹರೆಯದ ಹೆಣ್ಣುಮಗಳು ಚಂದ್ರಮ್ಮ. “1995ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದೆ. ಆದರೆ ಪಾಸಾಗಿರಲಿಲ್ಲ. ಈ ವರ್ಷ ಮಗಳು ಪರೀಕ್ಷೆ ಬರೆಯುತ್ತಿರುವುದರಿಂದ ಇನ್ನೊಂದು ಬಾರಿ ಪ್ರಯತ್ನ ಮಾಡೋಣ ಎಂದುಕೊಂಡು ಪರೀಕ್ಷೆ ಬರೆದೆ. ಆದರೆ ಈ ವರ್ಷ ಮಗಳ ಜೊತೆಗೆ ನಾನೂ ಎಸ್ಎಸ್ಎಲ್ಸಿ ಪಾಸಾಗಿದ್ದೇನೆ. ಎಷ್ಟೇ ಪ್ರಯತ್ನ ಪಟ್ಟಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಅದು ಮಗಳೊಂದಿಗೆ ಪರೀಕ್ಷೆ ಪಾಸ್ ಆಗುವ ಮೂಲಕ ಈ ವರ್ಷ ಈಡೇರಿದೆ,” ಎನ್ನುತ್ತಾರೆ ನಾಗರಾಜ.

ಇದನ್ನೂ ಓದಿ: ಒಂದೇ ವರ್ಷ ಎಸ್​ಎಸ್​ಎಲ್​ಸಿ ಪಾಸ್ ಆದ ಕೊಡಗಿನ ತಾಯಿ, ಮಗ!

ಇದನ್ನೂ ಓದಿ: ಹೃದಯ ಕಾಯಿಲೆಯಿಂದ ಬಳಲುತ್ತಿರುವ ಎಸ್​ಎಸ್​ಎಲ್​ಸಿ ಟಾಪರ್ ಗಂಗಮ್ಮ ಮನೆಗೆ ಶಾಸಕ ವೀರಣ್ಣ ಚರಂತಿಮಠ ಭೇಟಿ

(Haveri Districts Father And Daughter Both Passed In SSLC Exam Here Is The Interesting Details )

Follow Us
TV9 Web
TV9 Web

TV9 Kannada

Read More
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್