AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಸಾರ್ವಕಾಲಿಕ ದಾಖಲೆ; ಸುಮಾರು 3 ಸಾವಿರ ಕೋಟಿಗೂ ಅಧಿಕ ವಹಿವಾಟು

ಈ ಬಾರಿ ವಿಶ್ವಪ್ರಸಿದ್ದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ದಾಖಲೆಯ ವಹಿವಾಟು ಮಾಡಿದೆ. ಕಳೆದ ವರ್ಷದ ದಾಖಲೆಯನ್ನ ಮುರಿದು, ಸಾರ್ವಕಾಲಿಕ ದಾಖಲೆಯನ್ನ ಮುಡಿಗೇರಿಸಿಕೊಂಡಿದೆ. ರಾಜ್ಯ-ಹೊರರಾಜ್ಯದ ರೈತರು ಇಲ್ಲಿ ಮೆಣಸಿಕಾಯಿ ಮಾರಾಟ ಮಾಡಲು ಆಗಮಿಸುತ್ತಾರೆ. ಈ ಹಿನ್ನಲೆ ಕಳೆದ ಬಾರಿಗಿಂತ ಅಂದರೆ ಬರೋಬ್ಬರಿ 3178 ಕೋಟಿ ರೂಪಾಯಿ ಮೆಣಸಿಕಾಯಿ ವಹಿವಾಟು ನಡೆಸುವ ಮೂಲಕ ದಾಖಲೆ ಮಾಡಿದೆ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಸಾರ್ವಕಾಲಿಕ ದಾಖಲೆ; ಸುಮಾರು 3 ಸಾವಿರ ಕೋಟಿಗೂ ಅಧಿಕ ವಹಿವಾಟು
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 18, 2024 | 10:04 PM

Share

ಹಾವೇರಿ, ಮೇ.18: ಈ ಬಾರಿ ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ(Badagi Chilli Market) ದಾಖಲೆಯ ವಹಿವಾಟು ಮಾಡಿದೆ. 2023-24 ರಲ್ಲಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ 3178 ಕೋಟಿ ರೂಪಾಯಿ ವಹಿವಾಟು ನಡೆಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ಮಾರುಕಟ್ಟೆ ಕಳೆದ ವರ್ಷ ಸುಮಾರು 2281 ಕೋಟಿ ರೂಪಾಯಿ ವಹಿವಾಟು ನಡೆಸಿತ್ತು. ಈ ವರ್ಷ ಕಳೆದ ವರ್ಷದ ಪ್ರತಿಶತ 30 ರಷ್ಟು ಪ್ರಮಾಣದ ಅಧಿಕ ವಹಿವಾಟು ನಡೆಸುವ ಮೂಲಕ ಅಚ್ಚರಿ ಮೂಡಿಸಿದೆ. ಪ್ರಸ್ತುತ ವರ್ಷ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನಲೆ ಮೆಣಸಿನಕಾಯಿ ಬೆಳೆ ಉತ್ತಮವಾಗಿ ಬಂದಿದೆ. ಬರಗಾಲದಿಂದ ಕಂಗಾಲದ ರೈತರಿಗೆ ಕೆಂಪು ಸುಂದರಿ ಕೈ ಹಿಡಿದ್ದಿದ್ದಾಳೆ.

ವರುಣನ ಕಣ್ಣಾಮುಚ್ಚಾಲೆ ಆಟದಲ್ಲಿ ಮೆಣಸಿನಕಾಯಿ ಬೆಳೆಯುವುದು ರೈತರಿಗೆ ಒಂದು ಸವಾಲು. ಹೆಚ್ಚು ಮಳೆಯಾದ ಮೆಣಸಿನಕಾಯಿ ಬೆಳೆಗಳಿಗೆ ರೋಗಗಳು ಕಾಣಿಸುತ್ತವೆ. ಮಳೆ ಆಗದಿದ್ದರೆ ಸಂಪೂರ್ಣವಾಗಿ ನಷ್ಟ ಅನುಭವಿಸುತ್ತಾರೆ. ಮಳೆಯ ಪ್ರಮಾಣ ಕಡಿಮೆಯಾದರೆ‌ ಮೆಣಸಿನಕಾಯಿ ಬೆಳೆಗೆ ಅತ್ಯುತ್ತಮ ಹವಾಮಾನ ಕಲ್ಪಿಸಿದ್ದಂತೆ. ಈ ಬಾರಿ ಅನುಕೂಲಕರ ಮಳೆಯಾಗಿದೆ. ಹೀಗಾಗಿ ಮಾರುಕಟ್ಟೆಗೆ ಅಧಿಕ ಪ್ರಮಾಣದ ಆವಕವಾಗಿದೆ. ಇದಲ್ಲದೆ ಈ ವರ್ಷ ಮೆಣಸಿನಕಾಯಿ ಬೆಳೆಯುವ ಪ್ರದೇಶ ಸಹ ಅಧಿಕವಾಗಿದ್ದು, ವಿಸ್ತೀರ್ಣ ಅಧಿಕವಾದ ಕಾರಣ ಅಧಿಕ ಪ್ರಮಾಣದ ಮೆಣಸಿನಕಾಯಿ ಮಾರುಕಟ್ಟೆಗೆ ಬಂದಿದೆ.

ಇದನ್ನೂ ಓದಿ:ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಗಲಾಟೆ: ಆರೋಪಿ ನಾಶಿಪುಡಿಗೂ ಇದಕ್ಕೂ ಸಂಬಂಧವಿಲ್ಲ; ಪರಮೇಶ್ವರ್​​

ದಿನದಲ್ಲಿ 3 ಲಕ್ಷ 60 ಸಾವಿರ ಚೀಲಗಳು ಆವಕ

ಇದರ ಜೊತೆಗೆ ಪ್ರಸ್ತುತ ವರ್ಷ ಇಳುವರಿ ಕಡಿಮೆಯಾದರೂ ಸಹ ಬಂದ ಇಳುವರಿ ಉತ್ತಮವಾಗಿದೆ. ಈ ಇಳುವರಿಯಲ್ಲಿ ಬಿಳಿಗಾಯಿ ಫಂಗಸ್ ಇಲ್ಲದಿರುವುದು ರೈತರಿಗೆ ಉತ್ತಮ ದರ ಸಿಕ್ಕಿದೆ. ಆದರೆ, ಅರ್ಥಶಾಸ್ತ್ರದ ನಿಯಮದಂತೆ ಅಧಿಕ ಪೂರೈಕೆಯಾದಾಗ ದರ ಇಳಿಕೆಯಾಗುವುದು ಸಾಮಾನ್ಯ. ಅದರಂತೆ ಮಾರುಕಟ್ಟೆಗೆ ಅಧಿಕ ಪ್ರಮಾಣದ ಮೆಣಸಿನಕಾಯಿ ಬಂದಾಗ ಟೆಂಡರ್‌ದಾರರು ಕಡಿಮೆ ಬೆಲೆಗೆ ಟೆಂಡರ್ ಹಾಕುತ್ತಾರೆ ಎನ್ನುತ್ತಾರೆ. ಬ್ಯಾಡಗಿ ಮೆಣಸಿನಕಾಯಿ ಪ್ರಸ್ತುತ ವರ್ಷ ಅತ್ಯಧಿಕ ಮೆಣಸಿನಕಾಯಿ ಅವಾಕ್ ಆಗಿದೆ. ದಿನದಲ್ಲಿ 3 ಲಕ್ಷ 60 ಸಾವಿರ ಚೀಲಗಳು ಆವಕವಾಗುವ ಮೂಲಕ ಅತ್ಯಧಿಕ ಆವಕದ ದಾಖಲೆಯಾಯಿತು. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಚೀಲಗಳಿಡಲು ಜಾಗ ಇಲ್ಲದಂತ ಪರಿಸ್ಥಿತಿಯಾದಾಗ ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಮೆಣಸಿನಕಾಯಿ ಲಾಟ್ ಮಾಡಿ ದರ ನಿಗಧಿ ಮಾಡಲಾಯಿತು ಎನ್ನುತ್ತಾರೆ

ಬ್ಯಾಡಗಿ ಮೆಣಸಿನಕಾಯಿ ಮಾರಕಟ್ಟಿಯಲ್ಲಿ ರೈತರ ಫಸಲಿಗೆ ಉತ್ತಮ ಹಣ ನೀಡಿ ಖರೀದಿ ಮಾಡುತ್ತಾರೆ. ಹೀಗಾಗಿ ಅತಿ ಹೆಚ್ಚು ಆವಾಕ ಆಗಲು ಪ್ರಮುಖ ಕಾರಣವಾಗಿದೆ. ಜೊತೆಗೆ ಪಾರದರ್ಶಕ ಅಡಳಿತ, ಈ ಟೆಂಡರ್ ಮತ್ತು ನ್ಯಾಯಯುತ ದರ ನಿಗದಿ ಈ ಎಲ್ಲ ಕಾರಣದಿಂದ ವರ್ಷದಿಂದ ವರ್ಷಕ್ಕೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಅಧಿಕ ಪ್ರಮಾಣದ ಆವಕವಾಗುವ ಜೊತೆಗೆ ವಹಿವಾಟು ಸಹ ದಾಖಲೆ ಪ್ರಮಾಣದ ಏರಿಕೆಯಾಗಿ ಮಾರುಕಟ್ಟೆ ದೊಡ್ಡಮಟ್ಟದ ಹೆಸರು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ