ಶಿಗ್ಗಾಂವಿ ಬೈ ಎಲೆಕ್ಷನ್​: ಟಿಕೆಟ್​​ಗಾಗಿ ಕಾಂಗ್ರೆಸ್​​ನಲ್ಲಿ ಮುಸ್ಲಿಂ-ಲಿಂಗಾಯತ ಜಂಗೀ ಕುಸ್ತಿ !

ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಇದೇ ನವೆಂಬರ್ 13ಕ್ಕೆ ಮೂರು ಅಖಾಡದಲ್ಲೂ ಮತದಾನ ನಡೆಯಲಿದೆ. ನಾಡಿದ್ದು ಶುಕ್ರವಾರದಿಂದ ನಾಮಿನೇಷನ್ ಪ್ರಕ್ರಿಯೆ ಶುರುವಾಗಲಿದೆ. ಯಾವ ಕ್ಷೇತ್ರದಿಂದ ಯಾರು ಕಣಕ್ಕಿಳಿತಾರೆ ಎನ್ನುವುದೇ ನಿಗೂಢವಾಗಿದೆ. ಅದರಲ್ಲೂ ಶಿಗ್ಗಾಂವಿ ಕಾಂಗ್ರೆಸ್​ ಟಿಕೆಟ್​ಗಾಗಿ ಮುಸ್ಲಿಂ ವರ್ಸಸ್ ಲಿಂಗಾಯತ ನಡುವೆ ಪೈಪೋಟಿ ನಡೆದಿದೆ.

ಶಿಗ್ಗಾಂವಿ ಬೈ ಎಲೆಕ್ಷನ್​: ಟಿಕೆಟ್​​ಗಾಗಿ ಕಾಂಗ್ರೆಸ್​​ನಲ್ಲಿ ಮುಸ್ಲಿಂ-ಲಿಂಗಾಯತ ಜಂಗೀ ಕುಸ್ತಿ !
ಕಾಂಗ್ರೆಸ್‌
Follow us
|

Updated on: Oct 16, 2024 | 10:21 PM

ಹಾವೇರಿ, (ಅಕ್ಟೋಬರ್ 16): ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಇದೇ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ಆದ್ರೆ, ಕಾಂಗ್ರೆಸ್​​ ಮತ್ತು ಬಿಜೆಪಿಯಲ್ಲಿ ಟಿಕೆಟ್​ ಫೈಟ್ ಶುರುವಾಗಿದ್ದು, ಯಾರಿಗೆ ಕೊಡಬೇಕೆನ್ನುವುದೇ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಅದರಲ್ಲೂ ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ನೋಡಿದರೆ ಹನುಮಂತನ ಬಾಲದಂತಿದೆ. ಮುಸ್ಲಿಂ ಸಮುದಾಯದ ಇಬ್ಬರು ಟಿಕೆಟ್​ಗೆ ಬೇಡಿಕೆ ಇಟ್ಟಿದ್ದರೆ, ಮತ್ತೊಂದು ಲಿಂಗಾಯತ ಸಮುದಾಯದವರ ಸಹ ತಮಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ.

ಬೆಂಗಳೂರಿನಲ್ಲಿ ಬೀಡುಬಿಟ್ಟ ಟಿಕೆಟ್ ಆಕಾಂಕ್ಷಿಗಳು

ಹೌದು…..ಅಜ್ಜಂಫೀರ್ ಖಾದ್ರಿ, ಯಾಸೀರ್ ಖಾನ್ ಪಠಾಣ್, ಸಂಜೀವ್ ನೀರಲಗಿ , ಸೋಮಣ್ಣ ಬೇವಿನಮರದ ಸೇರಿದಂತೆ ಹಲವರು ಟಿಕೆಟ್​ಗಾಗಿ ಬೆಂಗಳೂರಲ್ಲಿ ಬೀಡುಬಿಟ್ಟಿದ್ದು, ಟಿಕೆಟ್​ಗಾಗಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಸೇರಿದಂತೆ ತಮ್ಮ ಅಪ್ತ ಸಚಿವರ ದುಂಬಾಲು ಬಿದ್ದಿದ್ದಾರೆ. ಹೀಗಾಗಿ ಯಾರಿಗೆ ಟಿಕೆಟ್​ ನೀಡಬೇಕೆಂದು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್​ ನಾಯಕರು​ ಗೊಂದಲಕ್ಕೀಡಾಗಿದ್ದು, ಯಾರಿಗೆ ಕೊಟ್ಟರೆ ಈ ಬಾರಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ. ಹಾಗೇ ಭಿನ್ನಮತ ಭುಗಿಲೇಳದಂತೆ ಅಭ್ಯರ್ಥಿ ಆಯ್ಕೆ ಮಾಡಬೇಕಾಗಿರುವುದು ಕಾಂಗ್ರೆಸ್​ ನಾಯಕರಿಗೆ ದೊಡ್ಡ ಸವಾಲ್ ಆಗಿದ್ದು, ಇದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕರ್ನಾಟಕದ 3 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ

ಮುಸ್ಲಿಂ ವರ್ಸಸ್ ಲಿಂಗಾಯತ

ಈಗಾಗಲೇ ಶಿಗ್ಗಾಂವಿಯಲ್ಲಿ 5 ಬಾರಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದರೂ ಸಹ ಸೋಲಾಗಿದೆ. ಈಗ ಆರನೇ ಬಾರಿಗೂ ಸಹ ತಮಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದೆ. 5 ಸಲ ಸೋತರೇನು? ಇದು ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರ. ಹಾಗಾಗಿ ನಮಗೆ ಟಿಕೆಟ್ ನೀಡಬೇಕೆಂದು ಮುಸ್ಲಿಂ ಟಿಕೆಟ್ ಆಕಾಂಕ್ಷಿಗಳು ಬಿಗಿಪಟ್ಟು ಹಿಡಿದಿದ್ದು, ಮುಸ್ಲಿಂ ಸಮುದಾಯದ ಟಿಕೆಟ್​ ಆಕಾಂಕ್ಷಿಗಳಾದ ಮಾಜಿ‌ ಶಾಸಕ‌ ಅಜ್ಜಂಫೀರ್ ಖಾದ್ರಿ ಮತ್ತು ಯಾಸೀರ್ ಖಾನ್ ಫಠಾಣ್ ನಡುವೆ ಫೈಪೋಟಿ ನಡೆದಿದೆ.

ಇತ್ತ ಈ ಬಾರಿ ಲಿಂಗಾಯತರಿಗೆ ಅವಕಾಶ ಕೊಡಿ ಎಂದು ಲಿಂಗಾಯತ ಟಿಕೆಟ್ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ. ಲಿಂಗಾಯತರಲ್ಲಿ ಸೋಮಣ್ಣ ಬೇವಿನಮರದ, ಸಂಜೀವ್ ನೀರಲಗಿ ನಡುವೆ ಟಿಕೆಟ್ ಪೈಪೋಟಿ ಇದೆ. ಮುಸ್ಲಿರಿಗೆ ಮಣೆ ಹಾಕಿದರೆ ಲಿಂಗಾಯತ ಮತಗಳು ಕೈ ಕೊಡಲಿವೆ. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್​ ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಈ ಬಗ್ಗೆ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಜಾತಿವಾರು ಲೆಕ್ಕಾಚಾರ

  • ಒಟ್ಟು ಮತದಾರರ ಸಂಖ್ಯೆ- 2,26,079
  • ಪುರುಷರು- 1,16,588
  • ಮಹಿಳೆಯರು- 1,09480
  • ಇತರೇ- 11
  • ಲಿಂಗಾಯತರು- 80000
  • ಮುಸ್ಲಿಂ – 55 000
  • ಕುರುಬ – 25000
  • ಎಸ್ ಸಿ- 30, 000
  • ಎಸ್ಟಿ-22,000
  • ಬ್ರಾಹ್ಮಣ ,ದೈವಜ್ಞ ಸಮಾಜ- 3000
  • ಇತರೆ-12,000 ಮತಗಳು

ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು