ಹಾವೇರಿ: ಪತಿ ಮನೆ ಮುಂದೆ ಧರಣಿ ಕುಳಿತ ಪತ್ನಿ; ಏನಿದು ಗಂಡ-ಹೆಂಡ್ತಿ ಗಲಾಟೆ?

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬೀರನಕೊಪ್ಪ ಗ್ರಾಮದಲ್ಲಿ ಕಳೆದ ನಾಲ್ಕು ದಿನದಿಂದ ಗಂಡನ ಮನೆ ಎದುರು ಹೆಂಡತಿ ಧರಣಿ ಕುಳಿತಿರುವ ಘಟನೆ ನಡೆದಿದೆ. ಒಂದು ವರ್ಷದ ಹಿಂದಷ್ಟೇ ಮದುವೆ ಆಗಿದ್ದು, ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ ಗಂಡ ಡಿವೋರ್ಸ್​ಗೆ ಅಪ್ಲೈ ಮಾಡಿದ್ದಾರೆ.

ಹಾವೇರಿ: ಪತಿ ಮನೆ ಮುಂದೆ ಧರಣಿ ಕುಳಿತ ಪತ್ನಿ; ಏನಿದು ಗಂಡ-ಹೆಂಡ್ತಿ ಗಲಾಟೆ?
ಉಷಾ, ಪ್ರವೀಣ್
Image Credit source: tv9 kannada

Updated on: Sep 28, 2026 | 3:19 PM

ಹಾವೇರಿ, ಸೆಪೆಂಬರ್​​ 28: ಇಲ್ಲಸಲ್ಲದ ಕಾರಣ ಹೇಳಿ ಡಿವೋರ್ಸ್ ನೀಡಲು ಮುಂದಾದ ಗಂಡನ ಮನೆ ಮುಂದೆ 4 ದಿನಗಳಿಂದ ಹಗಲು-ರಾತ್ರಿ ಹೆಂಡತಿ ಧರಣಿಗೆ ಕುಳಿತುಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬೀರನಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಂಡನ ಮನೆ ಮುಂದೆ ಹೆಂಡತಿ ಏಕಾಂಗಿ ಧರಣಿ ನಡೆಸಿದ್ದಾರೆ. ಅಷ್ಟೇ ಅಲ್ಲದೆ ನನ್ನ ಗಂಡ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ನಡೆದಿದ್ದೇನು?

ತುಮಕೂರಿನ ಜಯ ನಗರದ ನಿವಾಸಿ 32 ವರ್ಷದ ಉಷಾ ಧರಣಿ ಕುಳಿತ ಹೆಂಡತಿ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬೀರನಕೊಪ್ಪ ಗ್ರಾಮದ ಪ್ರವೀಣ್ ಈಳಗೇರ್​ ಗಂಡ. ಉಷಾ ಮತ್ತು ಪ್ರವೀಣ್​ ಇಬ್ಬರು ತುಮಕೂರಿನ ದಾಬಸ್ ಪೇಟೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಪರಿಚಯ ಸ್ನೇಹ ಆಗಿ, ಬಳಿಕ ಪ್ರೀತಿಯಾಗಿ ಬದಲಾಗಿದೆ. ಆದರೆ ಉಷಾಗೆ ಈ ಮೊದಲೇ ಒಂದು ಮದುವೆ ಆಗಿ ಡಿವೋರ್ಸ್ ಕೂಡ ಆಗಿತ್ತು. ಈ ವಿಚಾರ ಗೊತ್ತಿದ್ದರೂ ಉಷಾಳನ್ನು ಪ್ರೀತಿಸಿ ಪ್ರವೀಣ್ ಮದುವೆ ಆಗಿದ್ದ.

ಇದನ್ನೂ ಓದಿ: ಬಾಡಿಗೆ ಮನೆ ಹಾಲು ಉಕ್ಕಿಸುವ ನೆಪದಲ್ಲಿ ಖತರ್ನಾಕ್ ಸ್ಕೆಚ್: ಮಹಿಳೆಯ ಕೈಕಾಲು ಕಟ್ಟಿ 1 ಲಕ್ಷ ರೂ. ನಗದು, ಮಾಂಗಲ್ಯ ಸರ ದೋಚಿದ್ದ ಮೂವರ ಬಂಧನ

ಉಷಾ ಹಾಗೂ ಪ್ರವೀಣ್​​ ಒಂದು ವರ್ಷದ ಹಿಂದಷ್ಟೇ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆದರೆ ಮದುವೆ ಆದಾಗಿನಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ ಪ್ರವೀಣ್, ಇತ್ತೀಚೆಗೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. ಅತ್ತ ಪ್ರವೀಣ್​​ ಏಕಾಏಕಿ ಡಿವೋರ್ಸ್​ಗೆ ಅಪ್ಲೈ ಮಾಡಿದ್ದಕ್ಕೆ ಇತ್ತ ಉಷಾ ಕೆಂಡಾಮಂಡಲ ಆಗಿದ್ದಾರೆ.

ಮೋಸ ಮಾಡುತ್ತಿದ್ದಾನೆ ಎಂದ ಹೆಂಡತಿ: ಆರೋಪ ತಳ್ಳಿ ಹಾಕಿದ ಗಂಡ 

‘ಮೊದಲನೇ ಗಂಡನಿಗೆ ಡಿವೋರ್ಸ್ ಕೊಟ್ಟ ವಿಚಾರ ಗೊತ್ತಿದ್ದರೂ ಪ್ರವೀಣ್​ ಮದುವೆ ಆದ. ನಂಬಿಸಿ ಇದೀಗ ಮೋಸ ಮಾಡುತ್ತಿದ್ದಾನೆ’ ಎಂದು ಉಷಾ ಆರೋಪ ಮಾಡಿದ್ದಾರೆ. ಆದರೆ ಉಷಾ ಆರೋಪ ತಳ್ಳಿ ಹಾಕಿರುವ  ಪ್ರವೀಣ್, ‘ಸಣ್ಣಪುಟ್ಟ ವಿಚಾರಕ್ಕೆ ಜಗಳ ಮಾಡುತ್ತಾಳೆ. ಆಕೆಯ ಮೊದಲ ಗಂಡ ವಾಯ್ಸ್ ಮೆಸೇಜ್ ಮಾಡುತ್ತಾನೆ. ಈ ಬಗ್ಗೆ ಕೇಳಿದರೆ ಜಗಳ ಮಾಡುತ್ತಾಳೆ. ನಾನು ನನ್ನ ತಂದೆ-ತಾಯಿ ಬಳಿಗೆ ಹೋಗುವುದು ಬೇಡ ಅಂತಾಳೆ’ ಎಂದಿದ್ದಾರೆ.

ಜೀವ ಬೆದರಿಕೆ ಹಾಕುತ್ತಾಳೆ ಎಂದ ಗಂಡ

ಇನ್ನು ‘ನನ್ನ ಸಹೋದರಿಗೂ ಏನು ಸಹಾಯ ಮಾಡವಾರದು ಅಂತಾಳೆ. ಅಟ್ರಾಸಿಟಿ ಕೇಸ್​ ಹಾಕುವುದಾಗಿ ಬೆದರಿಸುತ್ತಾಳೆ. ತುಮಕೂರಿಗೆ ಬಂದರೆ ನಿನ್ನ ಬದುಕುವುದಕ್ಕೆ ಬಿಡಲ್ಲ ಅಂತ ಜೀವ ಬೆದರಿಕೆ ಹಾಕುತ್ತಾಳೆ. ಹೀಗಾಗಿ ಡಿವೋರ್ಸ್​ಗೆ ಅಪ್ಲೈ ಮಾಡಿದ್ದೇನೆ’ ಎಂದು ಪ್ರವೀಣ್ ಹೇಳಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:16 pm, Mon, 28 September 26

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us