ಉದ್ಯಮಿಗೆ 50 ಕೋಟಿ ರೂ.ಗೆ ನೀಡುವಂತೆ ಬೆದರಿಕೆ: FIR ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ ಕುಮಾರಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 14, 2024 | 8:14 PM

ಉದ್ಯಮಿ ವಿಜಯ್‌ ಟಾಟಾಗೆ ಬೆದರಿಕೆ ಕೇಸ್‌ನಲ್ಲಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮತ್ತು ಎಂಎಲ್​ಸಿ ರಮೇಶ್​ ಗೌಡ ವಿರುದ್ಧವೂ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿತ್ತು. ಇದೀಗ ವಿಜಯ್‌ ಟಾಟಾ ಎಫ್​ಐಆರ್​ ಪ್ರಶ್ನಿಸಿ ಕುಮಾರಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ವಿಚಾರಣೆ ಅ.21ಕ್ಕೆ ಮುಂದೂಡಿದೆ.

ಉದ್ಯಮಿಗೆ 50 ಕೋಟಿ ರೂ.ಗೆ ನೀಡುವಂತೆ ಬೆದರಿಕೆ: FIR ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ ಕುಮಾರಸ್ವಾಮಿ
ಉದ್ಯಮಿಗೆ 50 ಕೋಟಿ ರೂ.ಗೆ ನೀಡುವಂತೆ ಬೆದರಿಕೆ: FIR ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ ಕುಮಾರಸ್ವಾಮಿ
Follow us on

ಬೆಂಗಳೂರು, ಅಕ್ಟೋಬರ್​ 14: 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಟಾಟಾ ದಾಖಲಿಸಿದ ಎಫ್​ಐಆರ್​ ಪ್ರಶ್ನಿಸಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮತ್ತು ಎಂಎಲ್​ಸಿ ರಮೇಶ್​ ಗೌಡ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.21ಕ್ಕೆ ಮುಂದೂಡಿದೆ.

ಉದ್ಯಮಿ ವಿಜಯ್‌ ಟಾಟಾಗೆ ಬೆದರಿಕೆ ಕೇಸ್‌ನಲ್ಲಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮತ್ತು ಎಂಎಲ್​ಸಿ ರಮೇಶ್​ ಗೌಡ ವಿರುದ್ಧವೂ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿತ್ತು. ನಿಖಿಲ್ ಕುಮಾರಸ್ವಾಮಿಯನ್ನ ಚನ್ನಪಟ್ಟಣ ಬೈ ಎಲೆಕ್ಷನ್‌ಗೆ ನಿಲ್ಲಿಸ್ತಾ ಇದ್ದೀನಿ, 50 ಕೋಟಿ ರೂ. ಕೊಡದೇ ಇದ್ರೆ ನಿಮ್ಮ ಪ್ರಾಜೆಕ್ಟ್​ಗಳನ್ನ ಕಂಪ್ಲೀಟ್ ಮಾಡೋಕೆ ಬಿಡಲ್ಲ ಅಂತಾ ಹೆಚ್‌ಡಿ ಕುಮಾರಸ್ವಾಮಿ ಬೆದರಿಕೆ ಹಾಕಿದ್ರು ಎಂದು ವಿಜಯ್ ತಾತಾ ದೂರು ನೀಡಿದ್ದರು.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಉದ್ಯಮಿ ವಿಜಯ್ ಟಾಟಾ ದೂರು ದಾಖಲು: 50 ಕೋಟಿ ರೂ.ಗೆ ಬೆದರಿಕೆ ಆರೋಪ

ಅಲ್ಲದೆ ರಮೇಶ್ ಗೌಡ ವಿರುದ್ಧ 5 ಕೋಟಿ ರೂ. ಬೇಡಿಕೆಯ ಬಾಂಬ್ ಸಿಡಿಸಿದ್ದರು. ಇದಾದ ಬೆನ್ನಲ್ಲೇ ರಮೇಶ್ ಗೌಡ ವಿಜಯ್ ಟಾಟಾ ವಿರುದ್ಧವೇ ಪ್ರತಿದೂರು ನೀಡಿ, ಅವರೇ 100 ಕೋಟಿ ರೂ. ನೀಡುವಂತೆ ತಮಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಕರ್ನಾಟಕ ರಾಜಕಾರಣದಲ್ಲಿ ಜೋರಾಯ್ತು ಎಫ್​ಐಆರ್ ಪಾಲಿಟಿಕ್ಸ್: ಹೆಚ್​ಡಿಕೆ vs ವಿಜಯ್ ಟಾಟಾ ಪ್ರಕರಣದ ಸಮಗ್ರ ವಿವರ ಇಲ್ಲಿದೆ

ತಮ್ಮ ವಿರುದ್ಧದ ಪ್ರತಿದೂರಿನ ಬೆನ್ನಲ್ಲೇ, ಪ್ರತಿಕ್ರಿಯೆ ನೀಡಿದ್ದ ವಿಜಯ್ ಟಾಟಾ, ನಾನು ಯಾರು ಅಂತಾನೇ ಗೊತ್ತಿಲ್ಲ ಅಂತಿದ್ದವರು, ಈಗ ನನ್ನ ವಿರುದ್ಧ ದೂರು ನೀಡಿದ್ದಾರೆ. ಕುಮಾರಸ್ವಾಮಿ ಅವರ ಹತ್ತಿ ನಾನು, 100 ಕೋಟಿ ಕೇಳೋಕೆ ಸಾಧ್ಯವೆ ಎಂದಿದ್ದಾರೆ. ಅಷ್ಟೇ ಅಲ್ಲ, ಹೆಚ್​ಡಿ ಕುಮಾರಸ್ವಾಮಿ ನನ್ನ ಬಳಿ 50 ಕೋಟಿ ರೂ. ಕೇಳಿ ಬೆದರಿಕೆ ಹಾಕಿದ್ದನ್ನ ನಾನು ಪ್ರೂವ್ ಮಾಡುತ್ತೇನೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:01 pm, Mon, 14 October 24