ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಸ್ತಬ್ಧಚಿತ್ರಗಳಿಗೆ ಬಹುಮಾನ ಘೋಷಣೆ: ಮಂಡ್ಯಕ್ಕೆ ಪ್ರಥಮ ಬಹುಮಾನ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಸ್ತಬ್ಧಚಿತ್ರಗಳ ಬಹುಮಾನ ಘೋಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮ ಕೃಷ್ಣರಾಜ ಸಾಗರ ಅಣೆಕಟ್ಟು ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಧಾರವಾಡ ಜಿಲ್ಲೆಯ ಇಸ್ರೋ ಗಗನಯಾನದ ಸ್ತಬ್ಧಚಿತ್ರಗೆ ದ್ವಿತೀಯ ಬಹುಮಾನ ಬಂದಿದ್ದು, ಚಾಮರಾಜನಗರ ಜಿಲ್ಲೆಗೆ ತೃತೀಯ ಬಹುಮಾನ ಬಂದಿದೆ.
ಮೈಸೂರು, ಅಕ್ಟೋಬರ್ 14: ವಿಶ್ವವಿಖ್ಯಾತ ಮೈಸೂರು ದಸರಾಗೆ (Dasara) ಅದ್ಧೂರಿ ತೆರೆಬಿದ್ದಿದೆ. ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು 36 ಜಿಲ್ಲೆಗಳಿಂದ 51 ಸ್ಥಬ್ದಚಿತ್ರಗಳ ಪ್ರದರ್ಶನ ಮಾಡಲಾಗಿತ್ತು. ಇದೀಗ ಈ ಸ್ತಬ್ಧಚಿತ್ರಗಳಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿಧಾಮ ಕೃಷ್ಣರಾಜ ಸಾಗರ ಅಣೆಕಟ್ಟು ಸ್ಥಬ್ದಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಧಾರವಾಡ ಜಿಲ್ಲೆಯ ಇಸ್ರೋ ಗಗನಯಾನದ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ ಪಡೆದರೆ, ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡಿನ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಲಭ್ಯವಾಗಿದೆ. ಉಡುಪಿ, ಗದಗ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗೆ ಸಮಾಧಾನಕರ ಬಹುಮಾನ ನೀಡಲಾಗಿದೆ.
ಇದನ್ನೂ ಓದಿ: ಮೈಸೂರು ದಸರಾ: ಜಂಬೂಸವಾರಿ ಪ್ರಮುಖ ಆಕರ್ಷಣೆಯಾದ 31 ಜಿಲ್ಲೆಗಳ 51 ಸ್ಥಬ್ಧಚಿತ್ರಗಳು
ಇನ್ನು ಇಲಾಖೆಯ ಸ್ತಬ್ಧಚಿತ್ರಗಳಲ್ಲಿ ವಾರ್ತಾ ಇಲಾಖೆಯ ವಿಶ್ವಗುರು ಬಸವಣ್ಣ ಮಹಾತ್ಮ ಗಾಂಧಿ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಸಿಕ್ಕಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಗೆ ದ್ವಿತೀಯ ಬಹುಮಾನ ಮತ್ತು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ ಮೂರನೇ ಬಹುಮಾನ ನೀಡಲಾಗಿದೆ. ಅರಣ್ಯ ಇಲಾಖೆ, ಕಾರ್ಮಿಕ ಇಲಾಖೆ, ವಾಕ್ ಮತ್ತು ಶ್ರವಣ ಸಂಸ್ಥೆ, ಕೈಗಾರಿಕಾಭಿವೃದ್ಧಿ ನಿಗಮಕ್ಕೆ ಸಮಾಧಾನಕರ ಬಹುಮಾನ ಲಭಿಸಿದೆ.
ಮೈಸೂರು ದಸರಾ ಮಹೋತ್ಸವ ಜಂಬೂಸವಾರಿ ಮೆರವಣಿಗೆಯಲ್ಲಿ ಒಟ್ಟು 51 ಸ್ತಬ್ಧಚಿತ್ರಗಳ ಪ್ರದರ್ಶನಗೊಂಡಿವೆ. ಮೈಸೂರು ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಈ ಸ್ತಬ್ಧ ಚಿತ್ರ ನಿರ್ಮಾಣ ಕಾರ್ಯ ಮಾಡಲಾಗಿತ್ತು. 31 ಆಯಾ ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ವೈಶಿಷ್ಟ್ಯ , ಆಚಾರ ವಿಚಾರ, ಭೌಗೋಳಿಕ ಹಿನ್ನೆಲೆ ಸಾರುವ ಸ್ತಬ್ಧಚಿತ್ರಗಳು ಒಳಗೊಂಡಿದ್ದವು.
ಇದನ್ನೂ ಓದಿ: ದಸರಾ ಮಹೋತ್ಸವನ್ನು ಅದ್ದೂರಿಯಾಗಿ ನೆರವೇರಿಸಿದ 14 ಆನೆಗಳು ಇಂದು ವಾಪಸ್ಸು ಕಾಡಿಗೆ
ಇನ್ನು ದಸರಾ ಜಂಬೂಸವಾರಿ ಮುಗಿಸಿ ಗಜಪಡೆ ಇಂದು ಯಶಸ್ವಿಗೊಳಿಸಿದ ಗಜಪಡೆ ಇದೀಗ ತಮ್ಮೂರಿನತ್ತ ಮುಖ ಮಾಡಿವೆ. ಅರಮನೆ ಹೆಣ್ಣಾನೆಗಳ ಸಖ್ಯಕ್ಕೆ ಬಿದ್ದ ಏಕಲವ್ಯ ಲಾರಿ ಹತ್ತಲು ಹಠ ಮಾಡಿದ್ರೆ, ಅರಣ್ಯ ಇಲಾಖೆ ಆನೆಗಳಿಗೆ ಅರಮನೆ ಅಂಗಳದಲ್ಲಿ ಬೀಳ್ಕೊಡುಗೆ ನಿಡ್ತು, ಕ್ಯಾಪ್ಟನ್ ಅಭಿಮನ್ಯು ಜೊತೆ ಸೆಲ್ಫಿಗೆ, ಪೋಟೋ ತೆಗೆದುಕೊಳ್ಳಲು ಜನ ಮುಗಿಬಿದ್ರೆ, ಎಲ್ರಿಗೂ ನಮಸ್ಕರಿಸಿ ಗಜಪಡೆಗಳು ತಮ್ಮೂರಿನತ್ತ ಹೊರಟಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.