ನಕಲಿ ಕಾಸ್ಮೆಟಿಕ್ಸ್ ವಿರುದ್ಧ ಆರೋಗ್ಯ ಇಲಾಖೆ ಸಮರ: ನೀವು ಬಳಸುವ ಬ್ಯೂಟಿ ಪ್ರಾಡಕ್ಟ್​​ ಎಷ್ಟು ಡೇಂಜರ್ ಗೊತ್ತಾ?

Fake Cosmetics: ಕರ್ನಾಟಕದಲ್ಲಿ ನಕಲಿ ಕಾಸ್ಮೆಟಿಕ್ಸ್ ಹಾವಳಿಗೆ ಬ್ರೇಕ್ ಹಾಕಲು ಆಹಾರ ಮತ್ತು ಔಷಧ ಆಡಳಿತ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ 50ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ, 19ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ನೀವು ಬಳಸುವ ಬ್ಯೂಟಿ ಪ್ರಾಡಕ್ಟ್ ಎಷ್ಟು ಡೇಂಜರ್ ಗೊತ್ತಾ? ಈ ಸ್ಟೋರಿ ಓದಿ.

ನಕಲಿ ಕಾಸ್ಮೆಟಿಕ್ಸ್ ವಿರುದ್ಧ ಆರೋಗ್ಯ ಇಲಾಖೆ ಸಮರ: ನೀವು ಬಳಸುವ ಬ್ಯೂಟಿ ಪ್ರಾಡಕ್ಟ್​​ ಎಷ್ಟು ಡೇಂಜರ್ ಗೊತ್ತಾ?
ಕಾಸ್ಮೆಟಿಕ್ಸ್
Image Credit source: Getty images
Edited By:

Updated on: Aug 26, 2026 | 9:26 PM

ಬೆಂಗಳೂರು, ಆಗಸ್ಟ್​ 26: ಪಂಚತಾರಾ ಹೋಟೆಲ್, ಪಬ್, ಇಂದಿರಾ ಕ್ಯಾಂಟೀನ್ ಬಳಿಕ ಇದೀಗ ನಕಲಿ ಕಾಸ್ಮೆಟಿಕ್ಸ್ (Fake Cosmetics) ಮೇಲೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಕಣ್ಣು ಬಿದ್ದಿದೆ. ರಾಜಧಾನಿಯಲ್ಲಿ ಫೇಕ್ ಮೆಡಿಸಿನ್ ಬಳಿಕ ಫೇಕ್ ಕಾಸ್ಮೆಟಿಕ್ಸ್ ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಇಲಾಖೆ ಸಮರ ಸಾರಿದೆ. ಬೆಂಗಳೂರು ಸೇರಿ ರಾಜ್ಯದ 50ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ 19ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಸ್ಯಾಂಪಲ್ಸ್ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿದೆ.‌

50ಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲಿ ಮಿಂಚಿನ ದಾಳಿ

ರಾಜ್ಯದಲ್ಲಿ ಹೆಚ್ಚುತ್ತಿರುವ ನಕಲಿ ಸೌಂದರ್ಯವರ್ಧಕಗಳ ಹಾವಳಿಗೆ ಬ್ರೇಕ್ ಹಾಕಲು ಔಷಧ ಆಡಳಿತ ಇಲಾಖೆ ಮುಂದಾಗಿದೆ. ಬೆಂಗಳೂರು ಸೇರಿ ರಾಜ್ಯದ 50ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು 19ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ವಿವಿಧ ಪ್ರಾಡಕ್ಟ್‌ಗಳ ಸ್ಯಾಂಪಲ್ಸ್ ಸಂಗ್ರಹಿಸಿದ್ದಾರೆ. ವೈಟ್ನಿಂಗ್ ಕ್ರೀಮ್, ಫೇರ್‌ನೆಸ್ ಕ್ರೀಮ್, ಸ್ಪ್ರೇಗಳು, ಸೆರಮ್, ಹೇರ್ ಡೈ, ಲಿಪ್‌ಸ್ಟಿಕ್, ಪೌಡರ್, ಕಾಜಲ್ ಸೇರಿದಂತೆ 19 ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಮೆಂಬರ್‌ಶಿಪ್​​​ಗೆ ಲಕ್ಷಾಂತರ ರೂ ಪಡೆಯುವ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗಳ ಬಣ ಬಯಲು

ಈ ನಕಲಿ ಕಾಸ್ಮೆಟಿಕ್ಸ್‌ಗಳಲ್ಲಿ ನಿಷೇಧಿತ ರಾಸಾಯನಿಕ ಅಂಶಗಳಿರುವ ಆರೋಪ ಕೇಳಿಬಂದಿದೆ. ಮಿತಿಮೀರಿದ ಪ್ರಮಾಣದಲ್ಲಿ ಮರ್ಕ್ಯುರಿ, ಲೆಡ್ ಅಂಶ ಇರುವ ಶಂಕೆ ವ್ಯಕ್ತವಾಗಿದೆ. ಇಂತಹ ಉತ್ಪನ್ನಗಳ ನಿರಂತರ ಬಳಕೆಯಿಂದ ಚರ್ಮದ ಸಮಸ್ಯೆ, ಅಲರ್ಜಿ, ಮೊಡವೆ, ಕಪ್ಪು ಕಲೆಗಳು, ಕೂದಲು ಉದುರುವುದು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಆತಂಕ ಎದುರಾಗಿದೆ.

ಕ್ಷಣಾರ್ಧದಲ್ಲಿ ಬೆಳ್ಳಗಾಗೋ ಆಸೆ ತೋರಿಸಿ ಚರ್ಮ ಹಾಳು

ವಿಶೇಷವಾಗಿ ವೈಟ್ನಿಂಗ್ ಕ್ರೀಮ್‌ಗಳಲ್ಲಿ ಸ್ಟಿರಾಯ್ಡ್ ಅಂಶ ಮಿತಿಮೀರಿ ಬಳಸಲಾಗುತ್ತಿದೆ ಎಂಬ ಆರೋಪವಿದೆ. ಕ್ಷಣದಲ್ಲಿ ಬೆಳ್ಳಗಾಗುವ ಆಸೆ ತೋರಿಸಿ ಚರ್ಮವನ್ನು ಹಾಳು ಮಾಡಲಾಗುತ್ತಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತಾ ಇಲಾಖೆ ಜಂಟಿಯಾಗಿ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​​ ಅಧ್ಯಕ್ಷ ಹೇಳಿದ್ದಿಷ್ಟು 

‘ಕಾಸ್ಮೆಟಿಕ್ಸ್‌ಗಳಲ್ಲಿ ಅತಿಯಾದ ರಾಸಾಯನಿಕ ಬಳಕೆ ನಕಲಿ ಕಾಸ್ಮೆಟಿಕ್ಸ್‌ಗಳಲ್ಲಿ ನಿರಂತರ ಬಳಕೆಯಿಂದ ಚರ್ಮದ ಸಮಸ್ಯೆ, ಅಲರ್ಜಿ, ಚರ್ಮದ ಕ್ಯಾನ್ಸರ್ ಕೂದಲು ಉದುರುವುದು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಆತಂಕ ಎದುರಾಗಬಹುದು. ಈ ರೀತಿಯ ಕ್ರಮ ಒಳ್ಳೆಯದು’ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​​ ಅಧ್ಯಕ್ಷ ವೀರಭದ್ರಯ್ಯ ಅಭಿಪ್ರಾಯಪಟ್ಟಿದ್ದಾರೆ.

ವರದಿ ಬಂದ ಬಳಿಕ ಕಠಿಣ ಕ್ರಮ

ಅನುಮಾನಾಸ್ಪದ ಕಾಸ್ಮೆಟಿಕ್ಸ್‌ಗಳ ಸ್ಯಾಂಪಲ್ಸ್ ಸಂಗ್ರಹಿಸಿರುವ ಅಧಿಕಾರಿಗಳು ಈಗ ಲ್ಯಾಬ್ ವರದಿಗಾಗಿ ಕಾಯುತ್ತಿದ್ದಾರೆ. ಲ್ಯಾಬ್ ವರದಿ ಬಂದ ಬಳಿಕ ನಕಲಿ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿದ್ದಾರೆ. ಕಳಪೆ ಹಾಗೂ ನಕಲಿ ಉತ್ಪನ್ನಗಳ ಮಾರಾಟ ಮಾಡುತ್ತಿರುವವರ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಲೈಸೆನ್ಸ್ ರದ್ದು, ದಂಡ, ಕ್ರಿಮಿನಲ್ ಕೇಸ್ ದಾಖಲಿಸುವ ಸಾಧ್ಯತೆ ಇದೆ. ಜನರು ಕೂಡ ಎಚ್ಚರಿಕೆಯಿಂದ ಇರಬೇಕು, ಕಡಿಮೆ ಬೆಲೆಗೆ ಸಿಗುವ ಬ್ರ್ಯಾಂಡೆಡ್ ಕಾಸ್ಮೆಟಿಕ್ಸ್ ಖರೀದಿಸಬಾರದು ಎಂದು ಇಲಾಖೆ ಮನವಿ ಮಾಡಿದೆ.

Fake Cosmetics Crackdown In Karnataka | ಮಾರುಕಟ್ಟೆಯಲ್ಲಿ ಹೆಚ್ಚುತ್ತಿರೋ ನಕಲಿ ಕಾಸ್ಮೆಟಿಕ್ಸ್ ಹಾವಳಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us