ಕರ್ನಾಟಕದಲ್ಲಿ ಡೆಂಗ್ಯೂ ಹೆಚ್ಚಳಕ್ಕೆ ಹೈಕೋರ್ಟ್ ಕಳವಳ: ಸರ್ಕಾರಕ್ಕೆ ಖಡಕ್​ ಸೂಚನೆ

ಕರ್ನಾಟಕದಲ್ಲಿ ಬೆಂಗಳೂರು ಸೇರದಂತೆ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ಸಿಜೆ ಎನ್​ವಿ ಅಂಜಾರಿಯಾ ಮತ್ತು ನ್ಯಾ. ಕೆ.ವಿ ಅರವಿಂದ್‌ ಅವರಿದ್ದ ಪೀಠ ಆತಂಕ ವ್ಯಕ್ತಪಡಿಸಿದೆ. ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡ‌ ಹೈಕೋರ್ಟ್, ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಂಡಕ್ರಮಗಳ ಬಗ್ಗೆ ತಿಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಡೆಂಗ್ಯೂ ಹೆಚ್ಚಳಕ್ಕೆ ಹೈಕೋರ್ಟ್ ಕಳವಳ: ಸರ್ಕಾರಕ್ಕೆ ಖಡಕ್​ ಸೂಚನೆ
ಕರ್ನಾಟಕದಲ್ಲಿ ಡೆಂಗ್ಯೂ ಹೆಚ್ಚಳಕ್ಕೆ ಹೈಕೋರ್ಟ್ ಕಳವಳ: ಸರ್ಕಾರಕ್ಕೆ ಖಡಕ್​ ಸೂಚನೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 10, 2024 | 5:36 PM

ಬೆಂಗಳೂರು, ಜುಲೈ 10: ಕರ್ನಾಟಕದಲ್ಲಿ ಡೆಂಗ್ಯೂ (Dengue) ಪ್ರಕರಣಗಳ ಹೆಚ್ಚಳಕ್ಕೆ ಹೈಕೋರ್ಟ್ (High Court) ಕಳವಳ ವ್ಯಕ್ತಪಡಿಸಿದ್ದು, ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ. ರಾಯಚೂರಿನ ಹೆಚ್​​ಕೆ ವಿಜಯ್ ಕುಮಾರ್ ಎಂಬುವವರು ಪತ್ರಿಕೆಯೊಂದಕ್ಕೆ ಬರೆದ ಪತ್ರವನ್ನು ಆಧರಿಸಿ ಹೈಕೋರ್ಟ್ ಪಿಐಎಲ್​ ದಾಖಲಿಸಿಕೊಂಡಿದೆ. ಜುಲೈ 23 ರೊಳಗೆ ಡೆಂಗ್ಯೂ ನಿಯಂತ್ರಣಕ್ಕೆ ಕೈಗೊಂಡಕ್ರಮಗಳ ಬಗ್ಗೆ ತಿಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿಗೂ ತುರ್ತು ನೋಟಿಸ್ ಹೊರಡಿಸಿದೆ.

ಬೆಂಗಳೂರು, ಗ್ರಾಮೀಣ ಭಾಗದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸಿಜೆ ಎನ್​ವಿ ಅಂಜಾರಿಯಾ ಮತ್ತು ನ್ಯಾ. ಕೆ.ವಿ ಅರವಿಂದ್‌ ಅವರಿದ್ದ ಪೀಠ ಆತಂಕ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಡೆಂಗ್ಯೂ ಪರೀಕ್ಷೆ: ಸರ್ಕಾರದ ಆದೇಶಕ್ಕಿಲ್ಲ ಕಿಮ್ಮತ್ತು, ಬೆಂಗಳೂರಿನ ಲ್ಯಾಬ್​ಗಳಲ್ಲಿ 10 ಪಟ್ಟು ದರ ವಸೂಲಿ

ನಾಗರಿಕರಿಗೆ ಆರೋಗ್ಯ ಹಾಗೂ ಚಿಕಿತ್ಸೆ ಹಕ್ಕಿದೆ. ನಾಗರಿಕರಿಗೆ ಆರೋಗ್ಯಕರ ಪರಿಸರದಲ್ಲಿ ಬದುಕುವ ಹಕ್ಕಿದೆ.  ಗ್ರಾಮೀಣ ಹಾಗೂ ನಗರದಲ್ಲಿ ವೈದ್ಯಕೀಯ ಸೌಲಭ್ಯಗಳು, ಸೊಳ್ಳೆಗಳ ಸಂತಾನ ನಿಯಂತ್ರಣಕ್ಕೆ ಕೈಗೊಂಡ  ಕ್ರಮಗಳು ಮತ್ತು ಜನಜಾಗೃತಿ ಕ್ರಮಗಳ ಬಗ್ಗೆ ವಿವರ ನೀಡಲು ಹೈಕೋರ್ಟ್ ನಿರ್ದೇಶನ ನೀಡಿದೆ.

ಇದನ್ನೂ ಓದಿ: Dengue Cases in Karnataka: ಒಂದೇ ದಿನ ಬೆಂಗಳೂರಿನಲ್ಲಿ 91 ಡೆಂಗ್ಯೂ ಪ್ರಕರಣ ಪತ್ತೆ; ಶಿವಮೊಗ್ಗದಲ್ಲಿ ಮಹಿಳೆ ಸಾವು

ಒಂದೇ ದಿನದಲ್ಲಿ ಬೆಂಗಳೂರಿನಲ್ಲೇ 91 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇನ್ನು ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ಅತೀ ವೇಗವಾಗಿ ಹೆಚ್ಚಳವಾಗುತ್ತಿವೆ. ಚಿಕ್ಕಮಗಳೂರಿನಲ್ಲಿ 521, ಮೈಸೂರಿನಲ್ಲಿ 496, ಹಾವೇರಿಯಲ್ಲಿ 481, ಧಾರವಾಡದಲ್ಲಿ 289, ಚಿತ್ರದುರ್ಗದಲ್ಲಿ 275 ಪ್ರಕರಣಗಳು ಕಂಡಬಂದಿವೆ.

ಇದನ್ನೂ ಓದಿ: ಡೆಂಗ್ಯೂ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ; 12 ವರ್ಷದ ಬಾಲಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

ಗದಗ ಜಿಲ್ಲೆಯಲ್ಲಿ ಡೆಂಗ್ಯೂ ಅಟ್ಟಹಾಸಕ್ಕೆ ಜನರು ಕಂಗಾಲಾಗಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಆತಂಕ ಹೆಚ್ಚಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 62 ಡೆಂಗ್ಯೂ ಪಾಸಿಟಿವ್​ ಕಂಡುಬಂದಿದೆ. 16 ಮಕ್ಕಳಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಡೆಂಗ್ಯೂಗೆ ನಗರದಲ್ಲಿ ಒಂದು ಸಾವಾಗಿದ್ದು, ನಗರಸಭೆ ಮಾತ್ರ ಸ್ವಚ್ಚತೆ ಬಗ್ಗೆ ಡೋಂಟ್ ಕೇರ್ ಎನ್ನುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.