ಬೆಂಗಳೂರು: ಇಂದು ರಾಜ್ಯದಲ್ಲಿ ಹೊಸದಾಗಿ 99 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ.
ಬೆಂಗಳೂರು 24, ಮಂಡ್ಯ 17, ಕಲಬುರಗಿ 10, ಉತ್ತರ ಕನ್ನಡ 9, ರಾಯಚೂರು 6, ಯಾದಗಿರಿ 5, ವಿಜಯಪುರ 5, ಗದಗ 5, ಹಾಸನ 4, ಕೊಪ್ಪಳ 3, ಬೆಳಗಾವಿ 2, ದಕ್ಷಿಣ ಕನ್ನಡ 2, ದಾವಣಗೆರೆ, ಮೈಸೂರು, ಬೀದರ್, ಬಳ್ಳಾರಿ ಜಿಲ್ಲೆ, ಉಡುಪಿ, ಕೊಡಗು ಜಿಲ್ಲೆಯಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ ಎಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಪುಟಾಣಿಗಳಿಗೂ ವಕ್ಕರಿಸಿದ ಮಹಾಮಾರಿ: ಮಹಾರಾಷ್ಟ್ರದಿಂದ ಬಂದವರಲ್ಲಿಯೇ ಹೆಚ್ಚಿನ ಪಾಸಿಟಿವ್ ಕೇಸ್ ಕಾಣಿಸಿಕೊಂಡಿದ್ದು, ಕರ್ನಾಟಕಕ್ಕೆ ಮಹಾರಾಷ್ಟ್ರ ಕಂಟಕವಾಗುತ್ತಿದೆಯೂ ಎಂಬಂತಿದೆ. ಹಾಗೂ ಕೊರೊನಾ ಮಕ್ಕಳ ದೇಹವನ್ನು ಹೊಕ್ಕುತ್ತಿದೆ. ಬೆಂಗಳೂರಿನಲ್ಲಿ 8 ವರ್ಷದ ಬಾಲಕಿ, 11 ವರ್ಷದ ಬಾಲಕನಲ್ಲಿ ಸೋಂಕು ಕಂಡು ಬಂದಿದೆ. ಬೆಂಗಳೂರಿನ ಕಂಟೆನ್ಮೆಂಟ್ ವಲಯದ ಪುಟಾಣಿಗಳಲ್ಲಿ ಹಾಗೂ ಕಲಬುರಗಿಯ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ.