Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ಗೂಂಡಾ ಕಾಯ್ದೆ ಅಡಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ

ಲೋಕಸಭಾ ಚುನಾವಣೆ ಹಿನ್ನಲೆ ಗೂಂಡಾ ಕಾಯ್ದೆಯಡಿ ಹಿಂದೂ ಕಾರ್ಯಕರ್ತ ಜಯಪ್ರಶಾಂತ್ ಬಂಧನ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶಿವಾನಂದ ಮೆಂಡನ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಿಂದುತ್ವ ಪರ ಕೆಲಸ ಮಾಡುವವರ ಮೇಲೆ ಗೂಂಡಾಕಾಯ್ದೆ ಹಾಕಲಾಗಿದೆ. ಒಂದು ಕೇಸ್​ಗೆ ಪೊಲೀಸರು ಮೂರು ಎಫ್​ಐಆರ್ ದಾಖಲಿಸಿದ್ದಾರೆ.

ಮಂಗಳೂರಿನಲ್ಲಿ ಗೂಂಡಾ ಕಾಯ್ದೆ ಅಡಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ
ವಿಶ್ವ ಹಿಂದೂ ಪರಿಷತ್ ಸುದ್ದಿಗೋಷ್ಠಿ
Follow us
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Mar 21, 2024 | 5:52 PM

ಮಂಗಳೂರು, ಮಾರ್ಚ್​ 21: ಲೋಕಸಭಾ ಚುನಾವಣೆ ಹಿನ್ನಲೆ ಗೂಂಡಾ ಕಾಯ್ದೆಯಡಿ (Goonda Act) ಹಿಂದೂ ಕಾರ್ಯಕರ್ತ ಜಯಪ್ರಶಾಂತ್ ಬಂಧನ ಮಾಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶಿವಾನಂದ ಮೆಂಡನ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹಿಂದುತ್ವ ಪರ ಕೆಲಸ ಮಾಡುವವರ ಮೇಲೆ ಗೂಂಡಾಕಾಯ್ದೆ ಹಾಕಲಾಗಿದೆ. ಒಂದು ಕೇಸ್​ಗೆ ಪೊಲೀಸರು ಮೂರು ಎಫ್​ಐಆರ್ ದಾಖಲಿಸಿದ್ದಾರೆ. ಈ ಹಿಂದೆ ಸೆಗಣಿ ಹಾಕಿದ್ದಕ್ಕೆ ಪ್ರದೀಪ್ ವಿರುದ್ಧ ಸೆಕ್ಷನ್ 307 ಹಾಕಿದ್ದರು. ಪಾಕಿಸ್ತಾನ ಪರ ಘೋಷಣೆ ಹಾಕಿದ ಆರೋಪಿಗಳ ಮೇಲೆ ಕೇಸ್ ಹಾಕಲ್ಲ. ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ದಮನಮಾಡುವ ಕೆಲಸ ನಡೀತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜರಂಗದಳ ಕಾರ್ಯಕರ್ತರನ್ನ ಬಂಧಿಸಿದರೆ ಅಲ್ಪ ಸಂಖ್ಯಾತರು ಮತ ಹಾಕುತ್ತಾರೆ ಎಂಬುವುದು ಭ್ರಮೆ ಎಂದ ಶಿವಾನಂದ ಮೆಂಡನ್

ಕಳೆದ ಚುನಾವಣೆ ಸಂದರ್ಭ ಕಾಂಗ್ರೆಸ್​​ನವರು ಬಜರಂಗದಳ ಬ್ಯಾನ್ ಎಂದು ಸುಳ್ಳು ಹೇಳಿದ್ದರು. ಇದರಿಂದ ಅಲ್ಪಸಂಖ್ಯಾತರ ಮತ ಸಿಗುತ್ತೆ ಎಂಬ ಯೋಚಿಸಲಾಗಿತ್ತು. ಬಜರಂಗದಳ ಕಾರ್ಯಕರ್ತರನ್ನ ಬಂಧಿಸಿದರೆ ಅಲ್ಪ ಸಂಖ್ಯಾತರು ಮತ ಹಾಕುತ್ತಾರೆ ಎಂಬ ಭ್ರಮೆ ಇದೆ. ಈ ಕಾರಣಕ್ಕೆ ನಮ್ಮನ್ನ ಚುನಾವಣೆ ಸಂದರ್ಭ ದಮನ ಮಾಡುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ: 6 ಲಕ್ಷ ರೂ. ಮೌಲ್ಯದ ಚಿನ್ನ ವಶ

ಜೈ ಶ್ರೀ ರಾಮ್, ಹನುಮಾನ್ ಚಾಲೀಸ ಹೇಳುವುದಕ್ಕೆ ಎಲ್ಲಾ ಕೇಸ್ ಹಾಕುತ್ತಾರೆ. ಹಾಗಾಗಿ ನಮಗೆ ಹಿಂದೂಗಳ ಪರವಾದ ಸರಕಾರ ಬೇಕು. ನಾವು ಈ ಬಾರಿ ಮನೆಗೆ ಮನೆಗೆ ಹೋಗಿ ಪ್ರಚಾರ ಮಾಡುತ್ತೇವೆ. ನಮ್ಮ ಕೇಂದ್ರದ ಬೈಠಕ್​​ನಲ್ಲೂ ಈ ಬಗ್ಗೆ ತೀರ್ಮಾನವಾಗಿದೆ. ಈ ಕಾರಣಕ್ಕೆ ನಾವು ಹಿಂದುತ್ವದ ಪರವಾದ ಸರ್ಕಾರವನ್ನ ಗೆಲ್ಲಿಸುತ್ತೇವೆ. ನಮ್ಮದು ಗೊ ಹತ್ಯೆ, ಡ್ರಗ್ಸ್, ಹೆಣ್ಣು ಮಕ್ಕಳನ್ನ ಕೆಡಿಸುವ ಸಂಘಟನೆಯಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

19 ರೌಡಿ ಶೀಟರ್‌ಗಳ ಗಡಿಪಾರಿಗೆ ಆದೇಶ

ಇನ್ನು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 19 ರೌಡಿ ಶೀಟರ್‌ಗಳ ವಿರುದ್ಧ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಗಡಿಪಾರು ಆದೇಶ ಹೊರಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.