ನಾನು ತಪ್ಪು ಮಾಡಿದ್ರೆ ನೇಣು ಹಾಕಿಕೊಳ್ಳಲು ಸಿದ್ಧ -ಸಚಿವ V ಸೋಮಣ್ಣ ಹೀಗೇಕೆ ಹೇಳಿದರು?
ಬೆಂಗಳೂರು: ನಾನು ತಪ್ಪು ಮಾಡಿದ್ರೆ ನೇಣು ಹಾಕಿಕೊಳ್ಳೋಕೆ ರೆಡಿ ಇದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ನಾನು ಸಣ್ಣದಾಗಿ ನಡೆದುಕೊಂಡು ಯಾರ ಬಗ್ಗೆ ಆದರೂ ಅಪಚಾರ ಮಾಡಿದ್ರೆ ನೇಣು ಹಾಕಿಕೊಳ್ಳೋಕೆ ತಯಾರಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಬಡವರಿಗಾಗಿ ಶಾಸಕರ ಸಲಹೆಯನ್ನು ಸ್ವೀಕರಿಸಬೇಕು. ಅವರು ಹೇಳಿದಂತೆ ಅವರ ಸಲಹೆಗಳನ್ನು ನಾನು ಕಾರ್ಯರೂಪಕ್ಕೆ ತರಬೇಕು. ಇಲ್ಲ ಅಂದರೆ ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿಬಿಡುತ್ತೇನೆ ಎಂದು ಸಚಿವರು ಹೇಳಿದ್ದಾರೆ. PDOಗಳ ಪ್ರತಿಭಟನೆ ಬಗ್ಗೆ ಹೇಳಿದ್ದು ಹೀಗೆ […]

ಬೆಂಗಳೂರು: ನಾನು ತಪ್ಪು ಮಾಡಿದ್ರೆ ನೇಣು ಹಾಕಿಕೊಳ್ಳೋಕೆ ರೆಡಿ ಇದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿಕೆ ನೀಡಿದ್ದಾರೆ. ನಾನು ಸಣ್ಣದಾಗಿ ನಡೆದುಕೊಂಡು ಯಾರ ಬಗ್ಗೆ ಆದರೂ ಅಪಚಾರ ಮಾಡಿದ್ರೆ ನೇಣು ಹಾಕಿಕೊಳ್ಳೋಕೆ ತಯಾರಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬಡವರಿಗಾಗಿ ಶಾಸಕರ ಸಲಹೆಯನ್ನು ಸ್ವೀಕರಿಸಬೇಕು. ಅವರು ಹೇಳಿದಂತೆ ಅವರ ಸಲಹೆಗಳನ್ನು ನಾನು ಕಾರ್ಯರೂಪಕ್ಕೆ ತರಬೇಕು. ಇಲ್ಲ ಅಂದರೆ ನಾನು ಕೆಲಸಕ್ಕೆ ಬಾರದ ವ್ಯಕ್ತಿಯಾಗಿಬಿಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.
PDOಗಳ ಪ್ರತಿಭಟನೆ ಬಗ್ಗೆ ಹೇಳಿದ್ದು ಹೀಗೆ PDOಗಳು ರಾಕ್ಷಸರಿದಂತೆ ಎಂಬ ನನ್ನ ಹೇಳಿಕೆಯನ್ನು ಖಂಡಿಸಿ PDOಗಳು ಧರಣಿಗೆ ಮುಂದಾಗ್ತಿದ್ದಾರೆ. ಅವರು ಪ್ರತಿಭಟನೆ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ. ನಾನು ಎಲ್ಲರಿಗೂ ಆ ಮಾತನ್ನು ಹೇಳಿಲ್ಲ. ಸರಿಯಾಗಿ ಕೆಲಸ ಮಾಡದ PDOಗಳ ಬಗ್ಗೆ ನಾನು ಹೇಳಿದ್ದೇನೆ ಎಂದು ಸೋಮಣ್ಣ ಹೇಳಿದರು.
ನಮಗೆ ಕೇಂದ್ರದಿಂದ ಸಿಗುವುದು 1.20 ಲಕ್ಷ ಮನೆಗಳು ಮಾತ್ರ. ರಾಜ್ಯದ 188 ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಅನ್ವಯವಾಗುತ್ತದೆ. ಹೀಗಾಗಿ, PDOಗಳು ಅರ್ಹ ಫಲಾನುಭವಿಗಳನ್ನ ಆಯ್ಕೆ ಮಾಡಬೇಕು. ನಾನು ಅಂದು ಹೇಳಿದ್ದು, ಕೆಲ ರಾಕ್ಷಸ ಪ್ರವೃತ್ತಿ ಹೊಂದಿರುವ PDOಗಳಿಗೆ ಮಾತ್ರ. ಇಂದು ಕೂಡ ನಾನು ನನ್ನ ಹೇಳಿಕೆಗೆ ಬದ್ಧ. ಯಾವ PDOಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಅವರಿಗೆ ಮಾತ್ರ ನಾನು ಹೇಳಿದ್ದು ಅಂತಾ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.




