ಆಸ್ಪತ್ರೆಯಲ್ಲಿ ಸಿದ್ದು ಭೇಟಿಗೆ ಬಂದ ವಿಶೇಷ ವ್ಯಕ್ತಿ..! ಯಾರದು? ಆತನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು: ಉಪಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುವ ಸಂದರ್ಭದಲ್ಲಿ ಇಂದಿರಾ ಗಾಂಧಿ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಈ ವೇಳೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ಸಿದ್ದರಾಮಯ್ಯ ಅವರ ಮಾತಿಗೆ ‘ಹೌದೋ ಹುಲಿಯಾ’ ಎಂದು ಕೂಗಿದರು. ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಭಾಷಣದ ವೇಳೆ ‘ಹೌದೋ ಹುಲಿಯಾ’ ಎಂದು ಅವರದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಪೀರಪ್ಪ ಕಟ್ಟೀಮನಿ ಇಂದು […]
ಬೆಂಗಳೂರು: ಉಪಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುವ ಸಂದರ್ಭದಲ್ಲಿ ಇಂದಿರಾ ಗಾಂಧಿ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಈ ವೇಳೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ವ್ಯಕ್ತಿ ಸಿದ್ದರಾಮಯ್ಯ ಅವರ ಮಾತಿಗೆ ‘ಹೌದೋ ಹುಲಿಯಾ’ ಎಂದು ಕೂಗಿದರು. ಈ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದೀಗ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ ಭಾಷಣದ ವೇಳೆ ‘ಹೌದೋ ಹುಲಿಯಾ’ ಎಂದು ಅವರದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಪೀರಪ್ಪ ಕಟ್ಟೀಮನಿ ಇಂದು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ್ದಾರೆ. ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ ‘ಹುಲಿಯಾ’ ಎಂದು ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಕಾಗವಾಡದಲ್ಲಿ ನನ್ನ ಭಾಷಣದ ವೇಳೆ "ಹೌದೋ ಹುಲಿಯಾ" ಅಂತ ಅವನದ್ದೇ ಶೈಲಿಯಲ್ಲಿ ಪ್ರೀತಿಯಿಂದ ಕೂಗಿದ್ದ ಈ ಪೀರಪ್ಪ ಕಟ್ಟೀಮನಿ.
ಅಷ್ಟೇ ಪ್ರೀತಿಯಿಂದ ಇಂದು ನನ್ನ ಆರೋಗ್ಯ ವಿಚಾರಿಸಲು ಬಂದಿದ್ದಾನೆ.
ಇಂಥ ನಿಷ್ಕಲ್ಮಶ ಪ್ರೀತಿ ತುಂಬಿದ ಹೃದಯದ ಈತನೇ ನಿಜವಾದ 'ಹುಲಿಯಾ'. pic.twitter.com/rgTLG469Jv
— Siddaramaiah (@siddaramaiah) December 16, 2019
Published On - 2:27 pm, Mon, 16 December 19