AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?

ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ರೂ ಹಣ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಸೈಬರ್ ಅಪರಾಧ ಪ್ರಕರಣಗಳ ಬೆನ್ನತ್ತಿದಾಗ ಈ ಅಚ್ಚರಿಯ ಸಂಗತಿ ಬಯಲಾಗಿದ್ದು, ಪೊಲೀಸರು ಸ್ವತಃ ಅಚ್ಚರಿಗೊಂಡಿದ್ದಾರೆ. ವಿವಿಧ ಖಾತೆಗಳಿಂದ ಹಣ ಜಮಾ ಮತ್ತು ವರ್ಗಾವಣೆ ಆಗಿದ್ದು, ಸೈಬರ್ ವಂಚಕರು ಖಾತೆಯನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?
ಇರ್ಫಾನ್, ಪೊಲೀಸ್​ ಠಾಣೆ
ಸಂಜಯ್ಯಾ ಚಿಕ್ಕಮಠ
| Edited By: |

Updated on: Feb 05, 2026 | 7:37 PM

Share

ಹುಬ್ಬಳ್ಳಿ, ಫೆಬ್ರವರಿ 05: ಆತ ಆಟೋ ಚಾಲಕ (Auto driver). ಆದರೆ ಆತನ ಬ್ಯಾಂಕ್​​ ಖಾತೆ ವಹಿವಾಟು ನೋಡಿ ಸ್ವತಃ ಪೊಲೀಸರೇ ಶಾಕ್ ಆಗಿದ್ದಾರೆ. ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು ನಡೆದಿದೆ.  ದೇಶದ ವಿವಿಧೆಡೆ ನಡೆದಿರುವ ಸೈಬರ್ ಅಪರಾಧ ಪ್ರಕರಣಗಳ (cyber crime) ಬೆನ್ನು ಹತ್ತಿದ್ದಾಗ ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟಿ ಕೋಟಿ ರೂ ವ್ಯವಹಾರ ನಡೆದಿರುವುದು ಇದೀಗ ಬಯಲಾಗಿದೆ.

ನಡೆದದ್ದೇನು?

ದೇಶದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ. ಹತ್ತಾರು ವಾಮ ಮಾರ್ಗಗಳ ಮೂಲಕ  ಕೋಟಿ ಕೋಟಿ‌ ಹಣ ವಂಚಿಸುವ ಜಾಲ ಸಕ್ರಿಯವಾಗಿದೆ. ಆದರೆ ಇಂತಹದೊಂದು ಅಕ್ರಮ ಬೆನ್ನು ಹತ್ತಿದಾಗ ಪೊಲೀಸರಿಗೆ ಬಹುತೇಕವಾಗಿ ಆರೋಪಿಗಳು ಪತ್ತೆಯಾಗುವುದಿಲ್ಲ. ನಕಲಿ ವಿಳಾಸ, ನಕಲಿ ಆಧಾರ್ ಕಾರ್ಡ್ ನೀಡಿ ಅಕೌಂಟ್ ಮಾಡಿಸಿಕೊಂಡು ವಂಚಕರು ವಂಚಿಸಿರುತ್ತಾರೆ. ಇನ್ನು ಅನೇಕರು ತಾವು ವಂಚನೆಗೊಳಗಾದ ಮೇಲೆ ಸೈಬರ್ ದೂರು‌ ಹೆಲ್ಪಲೈನ್ ನಂಬರ್ 1930ಗೆ ಕರೆ ಮಾಡಿ ದೂರು ನೀಡುತ್ತಾರೆ. ಆದರೆ ಬಹುತೇಕ ವಂಚನೆ ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗುವುದಿಲ್ಲ.

ಇದನ್ನೂ ಓದಿ: ಧಾರವಾಡ: ಇಲ್ಲಿ ಇಡೀ ಗ್ರಾಮಕ್ಕೇ ಸಿಸಿಟಿವಿ ಕಣ್ಗಾವಲು! ಅಪರಾಧ ಕೃತ್ಯವೂ ಇಳಿಕೆ

ಇನ್ನು ಬೆಂಗಳೂರಿನ ಸೈಬರ್ ಕಮಾಂಡ್ ಸೆಂಟರ್​ಗೆ ಕೆಲ ದಿನಗಳಿಂದ ದೂರು ದಾಖಲಾಗಿದ್ದವು. ಬಹುತೇಕ ದೂರುದಾರರು‌ ಒಂದೇ ಅಕೌಂಟ್ ನಂಬರ್ ನೀಡಿದ್ದರು. ಆ ಅಕೌಂಟ್ ಪರಿಶೀಲಿಸಿದಾಗ ಇದು ಹುಬ್ಬಳ್ಳಿ ನಗರದ ಕೇಶ್ವಾಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿರು ಅಕೌಂಟ್ ಅನ್ನೋದು ಗೊತ್ತಾಗಿತ್ತು. ಹೀಗಾಗಿ ಬೆಂಗಳೂರು ಸೈಬರ್ ಕಮಾಂಡ್ ಸೆಂಟರ್​​ ಸಿಬ್ಬಂದಿ ಹುಬ್ಬಳ್ಳಿ ಸೆನ್ ಪೊಲೀಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆಟೋ ಚಾಲಕನ ಖಾತೆಯಿಂದ ಕೋಟಿ ಕೋಟಿ ವರ್ಗಾವಣೆ

ಈ ಬಗ್ಗೆ ಎರಡು ದಿನಗಳ ಹಿಂದೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಸೆನ್ ಠಾಣೆ ಪೊಲೀಸರು, ಅಕೌಂಟ್ ಯಾರದ್ದು ಅಂತ ಪತ್ತೆ ಮಾಡಿದ್ದರು. ಆಗ ಈ ಅಕೌಂಟ್ ಗೋಪನಕೊಪ್ಪ ನಿವಾಸಿ ಇರ್ಫಾನ್ ಎಂಬುವವರದ್ದು ಎಂದು ಗೊತ್ತಾಗಿದೆ. ಇರ್ಫಾನ್ ಅಕೌಂಟ್ ಪರಿಶೀಲನೆ ನಡೆಸಿದಾಗ ಸ್ವತಃ ಸೆನ್ ಠಾಣೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಇರ್ಫಾನ್ ಅಕೌಂಟ್​ಗೆ ದೇಶದ ವಿವಿಧಡೆಯಿಂದ ಕೋಟಿ ಕೋಟಿ ಹಣ ಜಮೆಯಾಗಿದ್ದರೆ, ಇರ್ಫಾನ್ ಅಕೌಂಟ್​ನಿಂದ 50ಕ್ಕೂ ಹೆಚ್ಚು ಖಾತೆಗಳಿಗೆ ಕೋಟ್ಯಂತರ ರೂ ಹಣ ವರ್ಗಾವಣೆಯಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಇರ್ಫಾನ್ ಕುಕ್ಕಿಂಗ್ ವಿತ್ ಕೇಟರಿಂಗ್ ಹೆಸರಲ್ಲಿ ಬ್ಯಾಂಕ್ ಆಫ್​​ ಬರೋಡಾ ಶಾಖೆಯಲ್ಲಿ ಅಕೌಂಟ್ ಮಾಡಿಸಿದ್ದರು. ನಂತರ ಅದನ್ನು ಸೈಬರ್‌ ವಂಚಕರಿಗೆ ನೀಡಿ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಇರ್ಫಾನ್ ವಿರುದ್ಧ ಕೇಳಿಬಂದಿದ್ದು, ದೂರು ದಾಖಲಾಗಿದೆ.

ಆಟೋ ಚಾಲಕ ಮತ್ತು ಆಗಾಗ ಅಡುಗೆ ಕೆಲಸ ಮಾಡುವ ಇರ್ಫಾನ್ ಅಕೌಂಟ್​ನಿಂದ ಕೋಟಿ ಕೋಟಿ ಹಣ ಜಮೆ ಮತ್ತು ವರ್ಗಾವಣೆ ಆಗಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ಇನ್ನು ಇರ್ಫಾನ್ ತನ್ನ ಅನೇಕ ಸಂಬಂಧಿಗಳ ಅಕೌಂಟ್​ಗೆ ಸಾಕಷ್ಟು ಹಣ ವರ್ಗಾವಣೆ ಮಾಡಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಹೀಗಾಗಿ ಸೆನ್ ಠಾಣೆ ಪೊಲೀಸರು, ಯಾವೆಲ್ಲಾ ಅಕೌಂಟ್​ನಿಂದ ಇರ್ಫಾನ್ ಅಕೌಂಟ್​ಗೆ ಹಣ ಜಮೆಯಾಗಿದೆ, ಯಾರ ಅಕೌಂಟ್​ಗೆ ವರ್ಗಾವಣೆ ಆಗಿದೆ ಅನ್ನೋದರ ಬಗ್ಗೆ ಬ್ಯಾಂಕ್​​ಗೆ ಮಾಹಿತಿ ಕೇಳಿದ್ದು, ಮಾಹಿತಿಗಾಗಿ ಕಾಯುತ್ತಿದ್ದಾರೆ. ಇನ್ನು ಇರ್ಫಾನ್​​ಗೆ ನೋಟಿಸ್ ನೀಡಿ ನಿನ್ನೆ ಠಾಣೆಗೆ ಕರೆದು ವಿಚಾರಣೆ ಕೂಡ ಮಾಡಲಾಗಿದೆ. ಸೈಬರ್ ಅಪರಾಧಗಳಲ್ಲಿ ಇರ್ಫಾನ್ ಭಾಗಿ ಆಗಿದ್ದರಾ ಅಥವಾ ಅವರ ಅಕೌಂಟ್​ನ್ನು ವಂಚಕರು ದುರುಪಯೋಗ ಮಾಡಿಕೊಂಡಿದ್ದಾರಾ ಎನ್ನುವ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ವಿಧಾನಸಭೆಯಲ್ಲೂ ಸದ್ದು ಮಾಡಿದ ಸೈಬರ್ ಕ್ರೈಂ: ಗೃಹ ಸಚಿವ ಪರಮೇಶ್ವರ್ ಕೊಟ್ರು ಆಘಾತಕಾರಿ ಮಾಹಿತಿ

ಆರಂಭಿಕ ವಿಚಾರಣೆಯಲ್ಲಿ ಇರ್ಫಾನ್ ಅಕೌಂಟ್​ನಿಂದ ಕೋಟ್ಯಂತರ ರೂ. ಹಣ ಜಮೆ ಮತ್ತು ವರ್ಗಾವಣೆ ಆಗಿದ್ದು, ಇದರ ಬಗ್ಗೆ ತನಿಖೆ ಮಾಡಲು ಪ್ರತ್ಯೇಕ ತಂಡವನ್ನೇ ರಚಿಸಲಾಗಿದೆ. ತನಿಖೆ ನಂತರವೇ ಸೈಬರ್ ಅಪರಾಧಗಳಲ್ಲಿ ಇರ್ಫಾನ್ ಪಾತ್ರದ ಬಗ್ಗೆ ನಿಖರ ಮಾಹಿತಿ ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ
PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕರ್ನಾಟಕ ಸೇನಾ ಪಡೆ
ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕರ್ನಾಟಕ ಸೇನಾ ಪಡೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್
ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್
‘ಧುರಂಧರ್​ಗಿಂತ ಸೀಕ್ವೆಲ್ ಇನ್ನೂ ಪವರ್​​ಫುಲ್; ಯಾಮಿ ಗೌತಮ್
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್​​​ಪ್ರೆಸ್ ರೈಲು