ನನಗೆ ಯಾವುದೇ ನೋಟಿಸ್ ಬಂದಿಲ್ಲ, ಡಿ.ಕೆ.ಶಿವಕುಮಾರ್​ ದೊಡ್ಡವರು: ಜಮೀರ್ ಅಹ್ಮದ್

ನನಗೆ ಯಾವುದೇ ನೋಟಿಸ್ ಬಂದಿಲ್ಲ,  ಪಕ್ಷದಿಂದ ಈವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದ್ದಾರೆ.  ಡಿ.ಕೆ.ಶಿವಕುಮಾರ್​ ದೊಡ್ಡವರು, ನಮ್ಮ ಪಕ್ಷದ ಅಧ್ಯಕ್ಷರು, ನಾನು ಅವರ ಬಗ್ಗೆ ಮಾತಾಡುವುದಿಲ್ಲ ಎಂದರು. ದಾವಣಗೆರೆಯಲ್ಲಿ ಖಾಸಗಿ ಸಮುದಾಯ ಭವನದಲ್ಲಿ ಅಲ್ಪ ಸಂಖ್ಯಾತ ನಾಯಕರ ಜೊತೆ ಸಭೆಯಲ್ಲಿ ಭಾಗವಹಿಸಿದ್ದರೆ

ನನಗೆ ಯಾವುದೇ ನೋಟಿಸ್ ಬಂದಿಲ್ಲ, ಡಿ.ಕೆ.ಶಿವಕುಮಾರ್​ ದೊಡ್ಡವರು: ಜಮೀರ್ ಅಹ್ಮದ್
Jameer Ahmed
TV9kannada Web Team

| Edited By: ಅಕ್ಷಯ್​ ಕುಮಾರ್​​

Jul 26, 2022 | 3:45 PM

ದಾವಣಗೆರೆ: ಕಾಂಗ್ರೆಸ್​ ಪಕ್ಷದಿಂದ ಈವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಸಾರ್ವಜನಿಕವಾಗಿ ಪದೇ ಪದೇ ಹೇಳಿಕೆ ನೀಡುತ್ತಿರುವ ಜಮೀರ್ ಅಹ್ಮದ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಜಮೀರ್ ಮಾತನಾಡಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಕಾಂಗ್ರೆಸ್ ಹಾಗೂ ಡಿಕೆ ಶಿವಕುಮಾರ್ ವಿರುದ್ಧ ಪದೇ ಪದೇ ಕಿಡಿ ಕಾರುತ್ತಿದ್ದು, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುತ್ತಾ ತಿರುಗುತ್ತಿದ್ದಾರೆ.  ಡಿ.ಕೆ.ಶಿವಕುಮಾರ್​ ದೊಡ್ಡವರು, ನಮ್ಮ ಪಕ್ಷದ ಅಧ್ಯಕ್ಷರು, ನಾನು ಅವರ ಬಗ್ಗೆ ಮಾತಾಡುವುದಿಲ್ಲ ಎಂದರು.

ದಾವಣಗೆರೆಯಲ್ಲಿ ಖಾಸಗಿ ಸಮುದಾಯ ಭವನದಲ್ಲಿ ಅಲ್ಪ ಸಂಖ್ಯಾತ ನಾಯಕರ ಜೊತೆ ಸಭೆಯಲ್ಲಿ ಭಾಗವಹಿಸಿದ್ದರೆ, ಈ ಸಭೆಯಲ್ಲಿ ಜಿಲ್ಲಾ ಅಲ್ಪ ಸಂಖ್ಯಾತ ಮುಖಂಡರು ಭಾಗಿಯಾಗಿದ್ದಾರೆ.

ಸಿದ್ದರಾಮೋತ್ಸವಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಭಾಗಿಯಾಗಬೇಕು ಆಗಸ್ಟ್ 3 ರಂದು ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮದ ಹಿನ್ನಲೆ ರಾಜ್ಯಾದ್ಯಂತ ಪ್ರವಾಸ ಮಾಡಿ ಅಲ್ಪ ಸಂಖ್ಯಾತರನ್ನ ಒಗ್ಗೂಡಿಸುತ್ತೇನೆ ಎಂದಿದ್ದಾರೆ.

ದಾವಣಗೆರೆಯ ಖಾಸಗಿ ಸಮುದಾಯ ಭವನದಲ್ಲಿ ಮಾತನಾಡಿದ  ಶಾಸಕ ಜಮೀರ್ ಅಹ್ಮದ್ ಸಿದ್ದರಾಮಯ್ಯ ಯಾವತ್ತೂ ಕೂಡ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿಲ್ಲ, ಹಾಗಾಗಿ ಅಭಿಮಾನಿಗಳು ಒತ್ತಾಯಕ್ಕೆ  75ನೇ ವರ್ಷದ ಸೆಲೆಬ್ರೇಷನ್ ಮಾಡಲು ಬಯಸಿದ್ದರೆ, ಇದು ನಮಗೆ ಹಬ್ಬದಂತೆ ರಂಜಾನ್ ಹಾಗೂ ಯುಗಾದಿ ಹಬ್ಬವನ್ನ ಯಾವ ರೀತಿ ಸಂಭ್ರಮದಿಂದ ಆಚರಿಸುತ್ತಾರೊ ಅದೇ ರೀತಿ ಆಚರಿಸಲಾಗುವುದು ಎಂದುರು.

ಸಿದ್ದರಾಮಯ್ಯ ಒಬ್ಬರೇ ಅಲ್ಪಸಂಖ್ಯಾತರ ಪರ ನಿಂತಿರುವ ನಾಯಕ, ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಹೊಂದಿರುವ ಏಕೈಕ ನಾಯಕ ಸಿದ್ದರಾಮಯ್ಯ,  ಆಹಾರ ಪದ್ಧತಿ ವಿಚಾರವಾಗಿ ದೇಶಾದ್ಯಂತ ಸಾಕಷ್ಟು ವಿವಾದವಾಗಿತ್ತು.  ಮುಸ್ಲಿಂ ಸಮುದಾಯದ ಪರ ನಿಂತಿದ್ದು ಸಿದ್ದರಾಮಯ್ಯನವರು ಮಾತ್ರ,  ಸಿದ್ದರಾಮಯ್ಯ ವಕ್ಫ್​ಗೆ ಕೊಟ್ಟ ಕೊಡುಗೆ ಬಹಳ ದೊಡ್ಡದು,  ಶಾದಿ ಭಾಗ್ಯ, ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದು ಸಿದ್ದರಾಮಯ್ಯ ಎಂದು ಹೇಳಿದರು.

ಮುಸ್ಲಿಂ ಸಮುದಾಯಕ್ಕೆ 200 ಕೋಟಿ ಅನುದಾನದಿಂದ 3,200 ಕೋಟಿಗೆ ಹೆಚ್ಚಳ ಮಾಡಿದ್ದರು,  ಹೀಗಾಗಿ ಮುಸ್ಲಿಂ ಸಮುದಾಯ ಸಿದ್ದರಾಮಯ್ಯ ಋಣ ತೀರಿಸಬೇಕಿದೆ.  ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ ವಕ್ಫ್​ ಬೋರ್ಡ್​ ಜಾಗದಲ್ಲಿ  ಮನೆ ನಿರ್ಮಾಣ ಮಾಡಿಕೊಡುತ್ತೇನೆಂದು ಸಿದ್ದರಾಮಯ್ಯ ಹೇಳಿದ್ದಾರೆ.  ಅಲ್ಪಸಂಖ್ಯಾತರಿಗಾಗಿ 5,000 ಕೋಟಿ ಮೀಸಲಿಡುವುದಾಗಿ ಹೇಳಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅನುದಾನ ಕೇಳಿದರೆ ನಿರಾಕರಿಸಿದ್ದರು,  ರೈತರ ಸಾಲಮನ್ನಾ ಮಾಡಬೇಕು ಮುಂದಿನ ವರ್ಷ ನೋಡೋಣ ಅಂದಿದ್ರು, ನಾನು ಅಧಿಕಾರದಲ್ಲಿದ್ದಾಗ ನೀನು ಬಂದಿದ್ದರೆ 5 ಸಾವಿರ ಕೋಟಿ ಕೊಡ್ತಿದ್ದೆ, ಅಲ್ಪಸಂಖ್ಯಾತರಿಗೆ 5 ಸಾವಿರ ಕೋಟಿ ಅನುದಾನ ನೀಡುತ್ತಿದ್ದೆ ಅಂದಿದ್ದರು,  ಇಂತಹ ಮನುಷ್ಯನನ್ನು ನಾವು ಕಳೆದುಕೊಳ್ಳಬೇಕಾ?

ಸಿದ್ದರಾಮಯ್ಯ ಹೊರತುಪಡಿಸಿ ಬೇರೆ ಯಾರೇ ಸಿಎಂ ಆದರೂ  ಈ ಕೆಲಸಗಳು ಆಗೋದಿಲ್ಲ, ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಬೆಳವಣಿಗೆ ಆಗುವುದಿಲ್ಲ.

ಇದು ಸಿದ್ದರಾಮಯ್ಯ ಬರ್ತ್​ಡೇ ಅಲ್ವೇ ಅಲ್ಲಾ, ಇದು ನಮ್ಮ ಬರ್ತ್​ಡೇ, ಸಿದ್ದರಾಮಯ್ಯ ಶೇರ್​ ಇದ್ದಂತೆ, ಟಿಪ್ಪು ಜಯಂತಿ ಮಾಡಿದ್ದು ಇವರೇ,  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ ನಮಗೇ ಬಿಟ್ಟುಕೊಟ್ಟಿದ್ದರು.

ಈಗ ಸಮಯ ಬಂದಿದೆ, ಅಲ್ಪಸಂಖ್ಯಾತರು ಸಿದ್ದರಾಮಯ್ಯ ಪರ ನಿಲ್ಲಬೇಕು.  ಮುಸ್ಲಿಮರು ಸಾಮೂಹಿಕವಾಗಿ ಮತ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು, ಸಿದ್ದರಾಮಯ್ಯರನ್ನು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಮಾಡಬೇಕಿದೆ ಎಂದು ಸಭೆಯಲ್ಲಿ ಹೇಳಿದರು.

ಹೈಕಮಾಂಡ್​ ಏನೆಲ್ಲ ಕ್ರಮಕೈಗೊಳ್ಳಬೇಕೋ ಕೈಗೊಳ್ಳಲಿದೆ: ಡಿಕೆಶಿ

ಜಮೀರ್​ಗೆ ವಾರ್ನಿಂಗ್​ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ ಎಂದು  ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.  ಜಮೀರ್​ಗೆ ಎಚ್ಚರಿಕೆ ಕೊಟ್ಟಿರುವ ಮಾಹಿತಿ ನನಗೂ ಬಂದಿದೆ.  ಹೈಕಮಾಂಡ್​ ಏನೆಲ್ಲ ಕ್ರಮಕೈಗೊಳ್ಳಬೇಕೋ ಕೈಗೊಳ್ಳಲಿದೆ. ಯಾರ ಮೇಲೆ ಏನೆಲ್ಲ ಕ್ರಮ ಕೈಗೊಳ್ಳಬೇಕೋ ಕೈಗೊಳ್ಳುತ್ತೆ ಎಂದು ಹೇಳಿದರು.

ಸೋನಿಯಾ ಗಾಂಧಿಯವರ ವಿಚಾರಣೆ ನಡೆಯುತ್ತಿದೆ.  ಅವರನ್ನು ವಾಪಸ್ ಕಳಿಸೋವರೆಗೂ ಇಂದು ಪ್ರತಿಭಟನೆ ಮಾಡ್ತೀವಿ,  ಈಗಾಗಲೇ ಪ್ರತಿಭಟನೆಗೆ ಎಲ್ಲ ನಾಯಕರು ಬರಲು ಸೂಚನೆ ಕೊಡಲಾಗಿದೆ. ಮೌನವಾಗಿ ಪ್ರತಿಭಟನೆ ಮಾಡ್ತೀವಿ, ಇದೀಗ ದೆಹಲಿಯಲ್ಲೂ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ವೈಯಕ್ತಿಕವಾಗಿ ಮಾತನಾಡೋದು ಸರಿಯಲ್ಲ: ನಲಪಾಡ್

ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಜಮೀರ್ ಗೆ ಬೆಂಗಳೂರಿನಲ್ಲಿ ಪರೋಕ್ಷವಾಗಿ ಟಾಂಗ್ ನೀಡಿದ್ದರೆ, ವೈಯಕ್ತಿಕವಾಗಿ ಮಾತನಾಡೋದು ಸರಿಯಲ್ಲ, ಇನ್ಮುಂದೆ ಯಾವುದು ಸಮಸ್ಯೆಯಾಗೋದಿಲ್ಲ, ಎಲ್ಲರೂ ಒಗ್ಗಟಿನಿಂದ ಇರುತ್ತೇವೆ. ಈ ಬಗ್ಗೆ ನಮ್ಮ ಹೈಕಮಾಂಡ್ ಕೂಡ ಸೂಚನೆ ನೀಡಿದೆ ಎಂದರು.  ಯಾವುದೇ ಒಂದು ಸಮುದಾಯದಿಂದ ಯಾರೂ ಕೂಡ ಸಿಎಂ ಆಗೋಕೆ ಆಗಲ್ಲ, ಡಿಕೆ ಶಿವಕುಮಾರ್ ತಮ್ಮ ಕ್ಷೇತ್ರದಲ್ಲಿ ಒಕ್ಕಲಿಗರು ಬೆಂಬಲ ಕೊಡಿ ಅಂತಾ ಹೇಳಿರೋದು ಅಷ್ಟೇ, ಅವರ ಮೈಂಡ್ ಸೆಟ್ ಏನೋ ಅನ್ನೋದು ನಮಗೆ ಗೊತ್ತು, ನಮ್ಮಲ್ಲಿ ಯಾವುದೇ ಗೊಂದಲ ಸಂಘರ್ಷವಿಲ್ಲ, ಮುಸ್ಲಿಂ ಸಮುದಾಯದಿಂದ ಜಮೀರ್ ಸಿಎಂ ಆಗಬೇಕು ಅನ್ನೋದರ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ನಾನು ಏನಿದ್ರು ಯೂತ್ ಕಾಂಗ್ರೆಸ್ ಬಗ್ಗೆ ಅಷ್ಟೇ ಮಾತನಾಡುತ್ತೇನೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada