ಬೆಂಗಳೂರು, ಜುಲೈ 12: ಮುಡಾ ಪ್ರಕರಣಕ್ಕೆ (Muda Case) ಸಂಬಂಧಿಸಿದಂತೆ ವಿಶೇಷ ವಿಮಾನ, ಹೆಲಿಕಾಪ್ಟರ್ನಲ್ಲಿ ನಾನೇನಾದರೂ ದಾಖಲೆ ತಂದಿದ್ದರೆ ರಾಜೀನಾಮೆ ಕೊಡುತ್ತೇನೆ. ಇಲ್ಲ ಅಂದರೆ ಅವರು ಏನು ಮಾಡುತ್ತಾರೆ ಕೇಳಿ ಎಂದು ಸಚಿವ ಭೈರತಿ ಸುರೇಶ್ (Byrathi Suresh) ಸವಾಲು ಹಾಕಿದ್ದಾರೆ. ವಿಶೇಷ ವಿಮಾನ, ಹೆಲಿಕಾಪ್ಟರ್ನಲ್ಲಿ ದಾಖಲೆ ತಂದಿದ್ದಾರೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಭೈರತಿ ಸುರೇಶ್ ಕಿಡಿಕಾರಿದ್ದು, ಯಾರು ದಾಖಲೆ ತರಲು ಆಗುತ್ತಾ ಎಂದು ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 20 ವರ್ಷದಿಂದ ತಪ್ಪುಗಳಾಗುತ್ತಾ ಬಂದಿದೆ. 2005ರವರೆಗಿನ ಎಲ್ಲ ವಿಚಾರ ತನಿಖೆಗೆ ಕೊಡಲು ಪ್ಲ್ಯಾನ್ ಮಾಡುತ್ತಿದ್ದೇನೆ. ಸುಮ್ಮ ಸುಮ್ಮನೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲು ಆಗುತ್ತಾ? ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತನಿಖಾಧಿಕಾರಿನಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಮುಡಾದವರೇ 62 ಕೋಟಿ ರೂ. ಹಣ ಕೊಡಬೇಕಂತೆ: ಹೆಚ್ಡಿ ಕುಮಾರಸ್ವಾಮಿ
ಮುಡಾ ಪ್ರಕರಣ ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಐಎಎಸ್ಅಧಿಕಾರಿಗಳಿಗೆ ಕೊಡದೆ ಬಿಜೆಪಿಗರಿಗೆ ಕೊಡಬೇಕಾ? ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಮುಚ್ಚಿ ಹಾಕಲ್ಲ, ಸರ್ಕಾರ ಯಾರನ್ನೂ ಬಿಡಲ್ಲ. ಸ್ವಲ್ಪ ದಿನ ಕಾಯಿರಿ ಎಲ್ಲ ಗೊತ್ತಾಗುತ್ತೆ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಹೆಲಿಕಾಪ್ಟರ್ನಲ್ಲಿ ಅವಸರದಿಂದ ಬಂದ ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಹೊತ್ತೊಯ್ದರು? ಕುಮಾರಸ್ವಾಮಿ
ಮುಡಾದಲ್ಲಿ ಹಗರಣವೇ ನಡೆದಿಲ್ಲ ಎಂದು ಇತ್ತೀಚಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದರು. ಹಗರಣ ನಡೆದಿಲ್ಲ ಎನ್ನುವುದಾದರೆ ಅಧಿಕಾರಿಗಳನ್ನು ಇಟ್ಟು ಯಾಕೆ ತನಿಖೆ ನಡೆಸುತ್ತಿದ್ದೀರಿ. ಹೆಲಿಕಾಷ್ಟರ್ನಲ್ಲಿ ಹೋಗಿ ಯಾವ ದಾಖಲೆ ತುಂಬಿಕೊಂಡು ಬಂದಿರಿ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಭೈರತಿ ಸುರೇಶ್ ವಿರುದ್ಧ ವಾಗ್ದಾಳಿ ಮಾಡಿದ್ದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಇಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜನಾಮೆಗೆ ಆಗ್ರಹಿಸಿ ಘೋಷಣೆಗಳನ್ನೇ ಕೂಗಿದ್ದಾರೆ. ಮಹಾರಾಜ ಕಾಲೇಜು ಮೈದಾನದಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಮುಡಾ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಮುಂದಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 pm, Fri, 12 July 24