AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಭ್ರಷ್ಟರ ಪಕ್ಷ: ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ – ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನ

Siddaramaiah: ಇಂತಹ ಭ್ರಷ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಅಧಿಕಾರಿಗಳಿಂದ ಲಂಚ ಪಡೆದು ಪೋಸ್ಟಿಂಗ್ ಕೊಡ್ತಾರೆ. ಐಎಎಸ್, ಐಪಿಎಸ್, ಐಆರ್‌ಎಸ್ ಗಳಿಂದ ಲಂಚ ತೆಗೆದುಕೊಂಡು ಪೋಸ್ಟಿಂಗ್ ಕೊಡ್ತಾರೆ. ನಾನು ಇಂಥ ಭ್ರಷ್ಟ ಸರ್ಕಾರವನ್ನ ನೋಡಿಯೇ ಇಲ್ಲಾ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಹಣವೇ ಇಲ್ಲ ಅಂತಾರೆ ಸಿದ್ದರಾಮಯ್ಯ.

ಬಿಜೆಪಿ ಭ್ರಷ್ಟರ ಪಕ್ಷ: ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ - ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನ
ವಿಪಕ್ಷ ನಾಯಕ ಸಿದ್ದರಾಮಯ್ಯ
TV9 Web
| Updated By: ಸಾಧು ಶ್ರೀನಾಥ್​|

Updated on:Jul 24, 2021 | 3:52 PM

Share

ತುಮಕೂರು: ಬಿಜೆಪಿ ಭ್ರಷ್ಟರ ಪಕ್ಷ ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕ ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಆಡಳಿತದಲ್ಲಿ ಇದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ಆಗುತ್ತಿದ್ದಾರೆ. ಆದರೆ ಯಡಿಯೂರಪ್ಪ ಬಳಿಕ ಇನ್ನೊಬ್ಬ ಭ್ರಷ್ಟ ಸಿಎಂ ಬರುತ್ತಾರೆ ಎಂದು ಪ್ರಸ್ತುತ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ವ್ಯಾಖ್ಯಾನ ನೀಡಿದ್ದಾರೆ.

ಇಂತಹ ಭ್ರಷ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಅಧಿಕಾರಿಗಳಿಂದ ಲಂಚ ಪಡೆದು ಪೋಸ್ಟಿಂಗ್ ಕೊಡ್ತಾರೆ. ಐಎಎಸ್, ಐಪಿಎಸ್, ಐಆರ್‌ಎಸ್ ಗಳಿಂದ ಲಂಚ ತೆಗೆದುಕೊಂಡು ಪೋಸ್ಟಿಂಗ್ ಕೊಡ್ತಾರೆ. ನಾನು ಇಂಥ ಭ್ರಷ್ಟ ಸರ್ಕಾರವನ್ನ ನೋಡಿಯೇ ಇಲ್ಲಾ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಹಣವೇ ಇಲ್ಲ. ಮಾತು ಎತ್ತಿದರೆ ಸಾಕು ಕೊರೊನಾ ಎಂದು ಹೇಳುತ್ತಾರೆ. ರಾಜ್ಯವನ್ನು ಉಳಿಸುವುದಕ್ಕೆ ಬಿಜೆಪಿಯನ್ನು ತೆಗೆಯಬೇಕು ಎಂದು ತುಮಕೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಪಂ, ತಾಪಂ ಚುನಾವಣೆ ಯಾವಾಗ ಅಂತಾ ಆಯೋಗ ತೀರ್ಮಾನಿಸುತ್ತದೆ. ಸುರ್ಜೇವಾಲಾ ಅವರು ಪ್ರತಿಯೊಬ್ಬರನ್ನ ಭೇಟಿಯಾಗಿ ಅಭಿಪ್ರಾಯ ಕೇಳ್ತಿದ್ದಾರೆ. ಜಿಲ್ಲೆಯ ಪರಿಸ್ಥಿತಿ ಬಗ್ಗೆ, ಜಿಪಂ, ತಾಪಂ ಚುನಾವಣೆಯ ತಯಾರಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಪಕ್ಷ ಸಕ್ರಿಯಗೊಳಿಸಲು ಏನ್ ಮಾಡ್ಬೇಕು, ಹೊಂದಾಣಿಕೆ ಇಲ್ಲಾ ಅಂದ್ರೇ ಏನ್ ಮಾಡ್ಬೇಕು.. ಹೀಗೆ ಎಲ್ಲವನ್ನೂ ಕೇಳಿ ಎಲ್ಲರ ಅಭಿಪ್ರಾಯಗಳನ್ನ ಅವರು ಸಂಗ್ರಹಿಸುತ್ತಿದ್ದಾರೆ. ತಳಮಟ್ಟ, ಬೂತ್, ವಾರ್ಡ್, ಬ್ಲಾಕ್, ರಾಜ್ಯ ಮಟ್ಟಗಳಲ್ಲಿ ಪಕ್ಷ ಶಕ್ತಿಗೊಳ್ಳಬೇಕು. ಇಂದರಿಂದ ಪಕ್ಷಕ್ಕೆ ಹೆಚ್ಚು ಅನುಕೂಲ ಆಗುತ್ತೆ ಎಂದು ಸಿದ್ದರಾಮಯ್ಯ ತಿಳಿಸಿದರು.

Siddaramaiah: ಸಿದ್ದರಾಮಯ್ಯ ಸಮ್ಮುಖದಲ್ಲೇ ‘ಮುಂದಿನ ಮುಖ್ಯಮಂತ್ರಿ’ ಎಂದು ಪುನರುಚ್ಚರಿಸಿದ ಶಾಸಕ ಜಮೀರ್ ಅಹಮದ್!

(if bs yediyurappa exits from cm post another corrupt candidate will become karnataka cm hints siddaramaiah)

Published On - 3:50 pm, Sat, 24 July 21

ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?
Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?