ಎಸ್​ಐಟಿ ವರದಿ ಸಲ್ಲಿಕೆಯಾದ್ರೆ ಜಾರಕಿಹೊಳಿಯನ್ನು ಬಚಾವು ಮಾಡಬಹುದು; ಹಾಲಿ ಸಿಜೆ ನೇತೃತ್ವದಲ್ಲಿ ತನಿಖೆಯಾಗಲಿ -ಸಿದ್ದರಾಮಯ್ಯ

ಸಿಡಿ ಕೇಸ್ ತನಿಖೆ ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆಯಾಗ್ಬೇಕು ಎಂದು ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಎಸ್​ಐಟಿ ತನಿಖೆ ಮಾಡಲಿ, ಆದ್ರೆ ಸಿಜೆ ಮೇಲುಸ್ತುವಾರಿ ವಹಿಸಲಿ. ಕೇಸ್ ತಾರ್ಕಿಕ ಅಂತ್ಯಕ್ಕೆ ಹೋಗಲು ನಿಷ್ಪಕ್ಷಪಾತ ತನಿಖೆ ಅನಿವಾರ್ಯವಿದೆ.

ಎಸ್​ಐಟಿ ವರದಿ ಸಲ್ಲಿಕೆಯಾದ್ರೆ ಜಾರಕಿಹೊಳಿಯನ್ನು ಬಚಾವು ಮಾಡಬಹುದು; ಹಾಲಿ ಸಿಜೆ ನೇತೃತ್ವದಲ್ಲಿ ತನಿಖೆಯಾಗಲಿ -ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Mar 24, 2021 | 12:04 PM

ಬೆಂಗಳೂರು: ಮಾರ್ಚ್ 23ರಂದು ನಡೆದ ವಿಧಾನಪರಿಷತ್​ನಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಭಾರಿ ಚರ್ಚೆಯಾಗಿತ್ತು. ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಸಿಡಿ ಪ್ರದರ್ಶಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಈ ವೇಳೆ ಈ ಸಂಬಂಧ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ.. ಎಸ್​ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಈ ಪ್ರಕರಣವನ್ನು ಮುಚ್ಚುಹಾಕೋಕೆ ನೋಡ್ತಿದ್ದಾರೆ. ಅದನ್ನ ಫೇಕ್ ಸಿಡಿ ಎಂದು ಸಾಬೀತು ಮಾಡೋಕೆ ಹೊರಟಿದ್ದಾರೆ. ಹೆಣ್ಮಕ್ಕಳಿಗೆ ರಕ್ಷಣೆ ಇಲ್ಲದ ಮೇಲೆ ನಾವೂ ಯಾಕೆ ಅಸೆಂಬ್ಲಿಗೆ ಬರಬೇಕು. ಹೈಕೋರ್ಟ್ ಹಾಲಿ ನ್ಯಾಯಾಧೀಶರೊಬ್ಬರನ್ನ ನೇಮಿಸಬೇಕು. ಹೈಕೋರ್ಟ್​ನ ಹಾಲಿ ಸಿಜೆ ನೇತೃತ್ವದಲ್ಲಿ ಈ ತನಿಖೆ ನಡೆಸಿದರೆ ಆ ಹೆಣ್ಣುಮಗಳಿಗೆ ನ್ಯಾಯ ಸಿಗುತ್ತೆ ಎಂದು ಆಗ್ರಹಿಸಿದ್ದರು. ಈಗ ಸಿದ್ದರಾಮಯ್ಯ ಸರ್ಕಾರದ ಮುಂದೆ ಐದು ಬೇಡಿಕೆಯನ್ನು ಇಟ್ಟಿದ್ದಾರೆ.

ಯಾಕೆ ಸಿದ್ದರಾಮಯ್ಯ ಹೈಕೋರ್ಟ್ ಸಿಜೆ ಮೇಲುಸ್ತುವಾರಿಗೆ ಒತ್ತಾಯಿಸ್ತಿದ್ದಾರೆ? ಸಿಡಿ ಕೇಸ್ ತನಿಖೆ ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆಯಾಗ್ಬೇಕು ಎಂದು ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. ಎಸ್​ಐಟಿ ತನಿಖೆ ಮಾಡಲಿ, ಆದ್ರೆ ಹಾಲಿ ಸಿಜೆ ಮೇಲುಸ್ತುವಾರಿ ವಹಿಸಲಿ. ಕೇಸ್ ತಾರ್ಕಿಕ ಅಂತ್ಯಕ್ಕೆ ಹೋಗಲು ನಿಷ್ಪಕ್ಷಪಾತ ತನಿಖೆ ಅನಿವಾರ್ಯವಿದೆ. ಸಿಜೆ ಮೇಲುಸ್ತುವಾರಿ ವಹಿಸಿದ್ರೆ ಸರ್ಕಾರ ತಲೆ ಹಾಕಲು ಆಗಲ್ಲ. ಸ್ವತಂತ್ರ ತನಿಖೆಗೆ ಅವಕಾಶ ಇರುತ್ತೆ, ಆಗ ಸತ್ಯ ಬಯಲಾಗುತ್ತೆ.

ಸರ್ಕಾರಕ್ಕೆ ಎಸ್​ಐಟಿ ವರದಿ ಸಲ್ಲಿಕೆಯಾದ್ರೆ ರಮೇಶ್ ಜಾರಕಿಹೊಳಿ ಬಚಾವ್ ಆಗುವ ಸಾಧ್ಯತೆ ಇದೆ. ಕೇವಲ ಸಿಡಿ ರೆಡಿ ಮಾಡಿದವರ ತನಿಖೆ ಮಾತ್ರ ನಡೆಯಬಹುದು. ಪ್ರಕರಣದ ಹಿಂದೆ ಸಿಡಿ ಷಡ್ಯಂತ್ರ ಮಾಡಿದವರು ತಪ್ಪಿಸಿಕೊಳ್ಳಬಹುದು. ಹಾಲಿ ಸಿಜೆ ಮೇಲುಸ್ತುವಾರಿಯಲ್ಲಿ ತನಿಖೆ ನಡೆದರೆ ತಾರ್ಕಿಕ ಅಂತ್ಯವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸಿಜೆ ಮೇಲುಸ್ತುವಾರಿಯ ತನಿಖೆಗೆ ಕಾಂಗ್ರೆಸ್ ಒತ್ತಾಯಿಸಿದೆ.

ವಿಡಿಯೋದಲ್ಲಿ ಹೇಳಿಕೆ ನೀಡಿರುವ ಯುವತಿ ಪತ್ತೆಗೆ ಒತ್ತಾಯ ಸಿದ್ದರಾಮಯ್ಯ ಯುವತಿಯ ಪತ್ತೆಗೆ ಒತ್ತಾಯಿಸಿದ್ದಾರೆ. ‘ತನ್ನನ್ನು ಬಳಸಿಕೊಂಡಿದ್ದಾರೆ’ ಎಂದು ಆಕೆ ಹೇಳಿದ್ದರ ಅರ್ಥ ಏನು? ಈ ಪ್ರಶ್ನೆಯನ್ನು ಪದೇಪದೆ ಕೇಳುತ್ತಿರುವ ಸಿದ್ದರಾಮಯ್ಯ ಇದು ರೇಪ್​ ಕೇಸ್ ಆಗುತ್ತೆ ಎಂದು ವಾದ ಮಾಡಿದ್ದಾರೆ. ರಮೇಶ್ ಜಾರಕಿಹೊಳಿಯನ್ನ ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್ ರೂಪಿಸಲಾಗಿದ್ದು ರೇಪ್ ಕೇಸ್ ಹಾಕಿದ್ರೆ ರಮೇಶ್​ ವಿರುದ್ಧ ಗಂಭೀರ ಕೇಸ್​ ದಾಖಲಾಗುತ್ತೆ. ಪರಿಸ್ಥಿತಿಗೆ ಅನುಗುಣವಾಗಿ ಅರೆಸ್ಟ್ ಮಾಡಬೇಕಾಗಬಹುದು. ಸಿಡಿ ಕೇಸ್​ನಲ್ಲಿ ನಿಜವಾದ ತಪ್ಪಿತಸ್ಥರ ಹುಡುಕಾಟಕ್ಕೆ FIR ಅತ್ಯಗತ್ಯ. ಹೀಗಾಗಿ ರೇಪ್​ಕೇಸ್ ಹಾಕಲು ಸಿದ್ದರಾಮಯ್ಯ ಡಿಮ್ಯಾಂಡ್ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಿ ಕಾಂಗ್ರೆಸ್ 3ನೇ ಬೇಡಿಕೆಯೇ ರೇಪ್ ಕೇಸ್ ಹಾಕಬೇಕು ಅನ್ನೋದು. ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು. ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಿಸಬೇಕು. ತನ್ನನ್ನು ಬಳಸಿಕೊಂಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಕೆಲಸ ಕೊಡಿಸುವುದಾಗಿ ಹೇಳಿ ಬಳಸಿಕೊಂಡಿದ್ದಾರೆ ಎಂದಿದ್ದಾಳೆ. ಇದು ರೇಪ್ ಕೇಸ್ ಆಗುತ್ತೆ ಎಂದು ಸಿದ್ದರಾಮಯ್ಯ ಸದನದಲ್ಲಿ ವಾದ ಮಾಡಿದ್ದಾರೆ.

ಇನ್ನು ಸಿದ್ದರಾಮಯ್ಯ ರೇಪ್ ಆರೋಪಕ್ಕೆ ಬಾಲಚಂದ್ರ ಜಾರಕಿಹೊಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಬೇಡಿಕೆಗೆ ತಿರುಗೇಟು ಕೊಟ್ಟ ಬಾಲಚಂದ್ರ ಜಾರಕಿಹೊಳಿ ‘ರೇಪ್’ ಅನ್ನೋ ಪದ ಬಳಸಬಾರದು ಅಂತಾ ಗರಂ ಆಗಿದ್ದಾರೆ. ಅಲ್ಲದೆ ಯುವತಿ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಬಾರದು. ಸರ್ಕಾರಕ್ಕೆ ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ಆರು ಸಚಿವರೂ ರಾಜೀನಾಮೆ ನೀಡಲಿ ಕೆ.ಸುಧಾಕರ್​, ಭೈರತಿ ಬಸವರಾಜ್​, ಕೆ.ಸಿ.ನಾರಾಯಣ ಗೌಡ, ಬಿ.ಸಿ.ಪಾಟೀಲ್, ಸೋಮಶೇಖರ್​, ಹೆಬ್ಬಾರ್​ ತಲೆದಂಡಕ್ಕೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಕೋರ್ಟ್​​ ಹೋಗಿ ತಡೆಯಾಜ್ಞೆ ತಂದವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ತಡೆಯಾಜ್ಞೆ ತಂದವರು ಸಚಿವರಾಗಿ ಮುಂದುವರಿಯಲೇಬಾರದು. ನೈತಿಕವಾಗಿ ಸಚಿವರಾಗಿ ಮುಂದುವರಿಯುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಸದನದಲ್ಲಿ 6 ಸಚಿವರ ಉತ್ತರ ಬಹಿಷ್ಕರಿಸಿದ್ದಾರೆ.

ಸಿಡಿಲೇಡಿ ರಕ್ಷಣೆಗೆ ಸಿದ್ದರಾಮಯ್ಯ ಒತ್ತಾಯ ಸಿಡಿಲೇಡಿಯ ರಕ್ಷಣೆಯಾಗಬೇಕೆಂದು ಸಿದ್ದರಾಮಯ್ಯ ಸರ್ಕಾರಕ್ಕೆ 5ನೇ ಡಿಮ್ಯಾಂಡ್ ಹಾಕಿದ್ದಾರೆ. ವಿಡಿಯೋದಲ್ಲಿರುವ ಯುವತಿ ರಕ್ಷಣೆ ಕೊಡಿ ಎಂದಿದ್ದಾಳೆ. ಜೀವ ಬೆದರಿಕೆಯಿದೆ ಅಂತಿದ್ದಾಳೆ, ಯುವತಿಗೆ ರಕ್ಷಣೆ ಕೊಟ್ಟಿಲ್ಲ. ಯುವತಿಯ ರಕ್ಷಣೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. ಯುವತಿಯನ್ನ ಪತ್ತೆಹಚ್ಚುವಲ್ಲಿ ವಿಫಲವಾಗಿದೆ. ಯುವತಿಯನ್ನ ಪತ್ತೆ ಮಾಡುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಸಚಿವ ಸುಧಾಕರ್ ಪ್ರಶ್ನೆ

Published On - 12:02 pm, Wed, 24 March 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ