ತಾಯಿ, ನವಜಾತ ಶಿಶುಗಳ ಆರೋಗ್ಯಕ್ಕಾಗಿ ಯೋಜನೆ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಜೊತೆ ಇಸ್ಫೋಸಿಸ್ ಒಪ್ಪಂದ
ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯಕ್ಕಾಗಿ ಯೋಜನೆ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ಜೊತೆ ಇನ್ಫೋಸಿಸ್ ಒಪ್ಪಂದ ಮಾಡಿಕೊಂಡಿದೆ. ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮ್ಮುಖದಲ್ಲಿ ಒಂದಕ್ಕೆ ಸಹಿ ಹಾಕಲಾಗಿದೆ. C-camp ಮತ್ತು ಆರೋಗ್ಯ ಇಲಾಖೆ ಜೊತೆ ಒಪ್ಪಂದ ಮಾಡಿದ್ದೇವೆ. ತಾಯಿ ಹಾಗೂ ನವಜಾತ ಶಿಶುವಿನ ಆರೋಗ್ಯದ ಬಗ್ಗೆ ಕಾಳಜಿಗಾಗಿ ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 21: ತಾಯಿ ಮತ್ತು ನವಜಾತ ಶಿಶುಗಳ ಆರೋಗ್ಯದ ಕಾಳಜಿ ಯೋಜನೆ ಅನುಷ್ಠಾನಕ್ಕಾಗಿ ಆರೋಗ್ಯ ಇಲಾಖೆ ಮತ್ತು ರಾಜ್ಯದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಇನ್ಫೋಸಿಸ್ ಒಡಂಬಡಿಕೆ ಮಾಡಿಕೊಂಡಿದೆ. ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, C-ಕ್ಯಾಂಪ್ ಮತ್ತು ಆರೋಗ್ಯ ಇಲಾಖೆ ಜೊತೆ ಒಪ್ಪಂದ ಮಾಡಿದ್ದೇವೆ. ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯದ ಕಾಳಜಿಗಾಗಿ ಹೊಸ ತಂತ್ರಜ್ಞಾನ ಬಳಸಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ.
ಗರ್ಭದಲ್ಲಿರುವ ಮಗುವಿನ ಹೃದಯ ಬಡಿತ ಬಗ್ಗೆ ತಂತ್ರಜ್ಞಾನ ತಿಳಿಸುತ್ತದೆ. ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ 8 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ತರ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಗುಡ್ ನ್ಯೂಸ್
ಇತ್ತೀಚೆಗೆ ಇನ್ಫೋಸಿಸ್ ಜೊತೆಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಒಡಂಬಡಿಕೆ ಮಾಡಿಕೊಂಡಿತ್ತು. ಒಡಂಬಡಿಕೆಯ ಅನುಸಾರ ಈ ವಿಶೇಷ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಂಸ್ಥೆ ಒಟ್ಟು 13 ಸಾವಿರ ಕೋರ್ಸ್‌ಗಳನ್ನು ಉಚಿತವಾಗಿ ಕಲಿಸಲಾಗಿದೆ.
ಇದನ್ನೂ ಓದಿ: ಉತ್ತರ ಕನ್ನಡ: ಗೌರಿ ನಾಯ್ಕ್ಗೆ ಬಾವಿ ತೋಡಲು ಅನುಮತಿ ನೀಡಿದ ಜಿಲ್ಲಾಡಳಿತ
ಕೋರ್ಸ್‌ಗಳ ಕಲಿಕೆಗೆ ಇನ್ಪೋಸಿಸ್ ಸಂಸ್ಥೆ ಜೊತೆಗೆ ವಿಟಿಯು ಮತ್ತು ಇತರೆ ವಿವಿಗಳು ಒಡಂಬಡಿಕೆ ಮಾಡಿಕೊಂಡಿತ್ತು. ಇನ್ಪೋಸಿಸ್ ಸಂಸ್ಥೆಯ ಸ್ಪ್ರಿಂಗ್ ಬೋರ್ಡ್ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಕಾರ್ಯಕ್ರಮದಲ್ಲಿ ಸಚಿವ ಡಾ. ಅಶ್ವತ್ ನಾರಾಯಣ್, ಇನ್ಫೋಸಿಸ್ ಉನ್ನತಾಧಿಕಾರಿ ತಿರುಮಲ ಆರೋಹಿ ಮತ್ತು ವಿವಿ ಕುಲಪತಿಗಳು ಭಾಗಿಯಾಗಿದ್ದರು.
ನವಜಾತ ಶಿಶು ಮಾರಾಟ: ಐವರ ಬಂಧನ
ಹುಟ್ಟಿದ ಒಂದೇ ದಿನಕ್ಕೆ ನವಜಾತ ಶಿಶು ಮಾರಾಟ ಮಾಡಲಾಗಿರುವ ಘಟನೆ ಹಾಸನದಲ್ಲಿ ನಡೆದಿತ್ತು. ಈ ಪ್ರಕರಣ ಸಂಬಂಧ ಐವರನ್ನ ಬಂಧಿಸಲಾಗಿತ್ತು. ಸಕಲೇಶಪುರದ ಬ್ಯಾಕರಹಳ್ಳಿಯಲ್ಲಿ ಒಂದು ದಿನದ ಗುಂಡು ಮಗುವನ್ನ ಮಾರಾಟ ಮಾಡಿದ ಆರೋಪದಡಿ ಐವರನ್ನ ಬಂಧಿಸಲಾಗಿತ್ತು. ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗು ಖರೀದಿಸಿದ ಮಹಿಳೆ ಉಷಾ, ಶ್ರೀಕಾಂತ್, ಸುಬ್ರಮಣ್ಯ ಅನ್ನೋರನ್ನ ಬಂಧಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Wed, 21 February 24