ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಢೋಂಗಿ ಸಮೀಕ್ಷೆ: ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸುವುದರ ವಿರುದ್ಧ ಜೆಡಿಎಸ್ ವಾಗ್ದಾಳಿ

ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿ ಗಣತಿಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಪ್ರತಿಪಕ್ಷ ಜೆಡಿಎಸ್ ವಾಗ್ದಾಳಿ ನಡೆಸಿದೆ. ಅಧಿಕಾರಿಗಳು ಸಮೀಕ್ಷೆ ಮಾಡದೆ ಮನೆಗಳಿಗೆ ಸ್ಟಿಕ್ಕರ್ ಅಂಟಿಸಿ ಹೋಗುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಇದು ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಢೋಂಗಿ ಸಮೀಕ್ಷೆ ಎಂದು ಜೆಡಿಎಸ್ ಕಿಡಿ ಕಾರಿದೆ.

ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಢೋಂಗಿ ಸಮೀಕ್ಷೆ: ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸುವುದರ ವಿರುದ್ಧ ಜೆಡಿಎಸ್ ವಾಗ್ದಾಳಿ
ಸಮೀಕ್ಷೆ ಮಾಡದೆ ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸಿ ತೆರಳಿರುವ ಅಧಿಕಾರಿಗಳು

Updated on: Jul 02, 2025 | 10:55 AM

ಬೆಂಗಳೂರು, ಜುಲೈ 2: ಈ ಹಿಂದಿನ ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ (Karnataka Congress) ಸರ್ಕಾರ ಮತ್ತೆ ಕರ್ನಾಟಕದಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಮುಂದಾಗಿದೆ. ಸಮೀಕ್ಷಾ ಕಾರ್ಯ ಆರಂಭವೂ ಆಗಿದೆ. ಆದರೆ, ಈ ಬಾರಿಯ ಸಮೀಕ್ಷೆಯಾದರೂ (Caste Census) ವೈಜ್ಞಾನಿಕವಾಗಿ ಆಗುತ್ತಿದೆಯೇ? ಇಲ್ಲ ಎಂಬುದಕ್ಕೆ ಹಲವು ನಿದರ್ಶನಗಳು ದೊರೆತಿವೆ. ಅಧಿಕಾರಿಗಳು ಸರಿಯಾಗಿ ಮಾಹಿತಿ ಕಲೆ ಹಾಕದೆ, ಸಮೀಕ್ಷೆ ಪೂರ್ಣಗೊಳಿಸಿರುವುದಾಗಿ ಮನೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿಕೊಂಡು ಬರುತ್ತಿರುವುದಾಗಿ ದೂರುಗಳು ಕೇಳಿಬಂದಿವೆ. ಬೆಂಗಳೂರಿನ ಅನೇಕ ಕಡೆಗಳಲ್ಲಿ ಈ ರೀತಿ ನಡೆದಿದ್ದು, ಇತರ ಕಡೆಗಳಲ್ಲೂ ಆರೋಪಗಳು ಕೇಳಿಬಂದಿವೆ. ಇದೀಗ ಈ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಜೆಡಿಎಸ್ (JDS) ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ವಾಗ್ದಾಳಿ ನಡೆಸಿದ್ದು, ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಢೋಂಗಿ ಸಮೀಕ್ಷೆ ಎಂದು ಜರೆದಿದೆ.

ಇದು ದಲಿತ ವಿರೋಧಿ ಕರ್ನಾಟಕ ಕಾಂಗ್ರಸ್ ಸರ್ಕಾರದ ಢೋಂಗಿ ಸಮೀಕ್ಷೆ. ಪರಿಶಿಷ್ಟರ ಉದ್ಧಾರ ಮಾಡುತ್ತೇವೆ ಎಂದು ಬೊಗಳೆ ಬಿಡುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಮನೆ ಮಾಲಿಕರ/ವಾಸವಿರುವವರ ಬಳಿ ಮಾಹಿತಿಯನ್ನು ಪಡೆಯದೇ ಕದ್ದು ಮುಚ್ಚಿ ಮನೆಗಳಿಗೆ ಚೀಟಿ ಅಂಟಿಸುವುದು ಯಾವ ಮಾದರಿಯ ಸಮೀಕ್ಷೆ ಎಂದು ಜೆಡಿಎಸ್ ಪ್ರಶ್ನಿಸಿದೆ.

ಇದನ್ನೂ ಓದಿ
ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ 18 ಕೋತಿಗಳ ಶವ ಪತ್ತೆ
ಕಾನೂನು ಸಚಿವರ ಊರಲ್ಲೇ ಕಿರಾಣಿ ಅಂಗಡಿ, ಹೋಟೆಲ್, ಮನೆಗಳಲ್ಲೂ ಮದ್ಯ ಮಾರಾಟ!
ಮೆಟ್ರೋ ಯೆಲ್ಲೋ ಲೈನ್ ವಿಳಂಬದಿಂದ ಬಿಎಂಟಿಸಿಗೆ ಲಾಭ!
ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು

ಜೆಡಿಎಸ್ ಎಕ್ಸ್ ಸಂದೇಶ


ಲಂಚಗುಳಿತನ, ಭ್ರಷ್ಟಾಚಾರ, ಅಧಿಕಾರ ದಾಹ, ಕುರ್ಚಿ ಕಿತ್ತಾಟದಲ್ಲಿ ಮಗ್ನರಾಗಿರುವ ಸಿಎಂ, ಡಿಸಿಎಂ ನಿಮ್ಮ ರಾಜಕೀಯ ಮೇಲಾಟಗಳಿಗಾಗಿ ಕನ್ನಡಿಗರ  ತೆರಿಗೆ ಹಣವನ್ನು ಪೋಲು ಮಾಡಬೇಡಿ ಎಂದು ಜೆಡಿಎಸ್ ಕಿಡಿ ಕಾರಿದೆ.

ಸಮೀಕ್ಷೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿ ತೆರಳುತ್ತಿರುವ ಬಗ್ಗೆ ಜೂನ್ 28 ರಂದು ‘ಟಿವಿ9 ಕನ್ನಡ ಡಿಜಿಟಲ್’ ವರದಿ ಮಾಡಿತ್ತು. ಸಮೀಕ್ಷೆ ಮಾಡದೆ ಸ್ಟಿಕ್ಕರ್ ಅಂಟಿಸಿ ಹೋಗುತ್ತಿರುವ ಬಗ್ಗೆ ಸಾರ್ವಜನಿಕರೇ ಫೋಟೊ ಸಹಿತ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು!

ಕೆಲವು ದಿನಗಳ ಹಿಂದೆ ಬೆಂಗಳೂರಿನ ಶ್ರೀನಗರದ ಮನೆಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಯಾವುದೇ ಮಾಹಿತಿ ಸಂಗ್ರಹಿಸದೆ, ‘‘ಈ ಮನೆಯ ಸಮೀಕ್ಷೆ ಪೂರ್ಣಗೊಳಿಸಲಾಗಿದೆ’’ ಎಂದು ಸ್ಟಿಕ್ಕರ್‌ ಅಂಟಿಸಿ ತೆರಳಿದ್ದರು. ಇದೀಗ ಬೆಂಗಳೂರಿನ ಅನೇಕ ಕಡೆಗಳಲ್ಲಿ ಇಂಥ ಆರೋಪಗಳು ಕೇಳಿಬಂದಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಅನೇಕರು ಈ ವಿಚಾರದ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 am, Wed, 2 July 25