ನಡೆದುಕೊಂಡು ಆಸ್ಪತ್ರೆಗೆ ಬಂದ ಕೆಲವೇ ಕ್ಷಣಗಳಲ್ಲಿ ವ್ಯಕ್ತಿಯ ಮೆದುಳು ನಿಷ್ಕ್ರಿಯ! ಹೊಸಕೋಟೆಯಲ್ಲಿ ಅಚ್ಚರಿಯ ಘಟನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಎದೆ ನೋವು ಅಂತ ಆಸ್ಪತ್ರೆಗೆ ನಡೆದುಕೊಂಡು ಬಂದ ವ್ಯಕ್ತಿಯ ಮೆದುಳು ಕೆಲವೇ ನಿಮಿಷಗಳಲ್ಲಿ ನಿಷ್ಕ್ರಿಯಗೊಂಡಿದೆ. ವ್ಯಕ್ತಿ ಆಸ್ಪತ್ರೆಗೆ ನಡೆದುಕೊಂಡು ಬರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ದೇವನಹಳ್ಳಿ, ಜುಲೈ 02: ಆಸ್ವತ್ರೆಗೆ ನಡೆದುಕೊಂಡು ಬಂದ ವ್ಯಕ್ತಿಯ ಮೆದುಳು ಕೆಲವೆ ನಿಮಿಷಗಳಲ್ಲಿ ನಿಷ್ಕ್ರಿಯವಾಗಿರುವಂತಹ (brain dead) ಅಚ್ಚರಿ ಘಟನೆಯೊಂದು ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ. ಹೊಸಕೋಟೆಯ ನಿವಾಸಿ ಕೋನಪ್ಪ (52) ಬ್ರೈನ್ ಡೆಡ್ ಆದ ವ್ಯಕ್ತಿ. ಇತ್ತ ಬ್ರೈನ್ ಡೆಡ್ ವಿಷಯ ತಿಳಿದ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ನಡೆದದ್ದೇನು?
ಬೆಳಗ್ಗೆಯಿಂದ ಕೂಡ ಲವಲವಿಕೆಯಿಂದಲ್ಲೇ ಇದ್ದ ಕೋನಪ್ಪ, ಏಕಾಏಕಿ ಎದೆ ನೋವು ಅಂತ ನಡೆದುಕೊಂಡು ಸಿಲಿಕಾನ್ ಸಿಟಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ವೈದ್ಯರು ಚಿಕಿತ್ಸೆ ನೀಡಲು ಮುಂದಾಗುತ್ತಿದ್ದಂತೆ ಕಾರ್ಡಿಯಾಕ್ ಅರೆಸ್ಟ್ನಿಂದ ಕುಸಿದು ಬಿದಿದ್ದಾರೆ. ತಕ್ಷಣ ಮತ್ತೊಂದು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲು ಮುಂದಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಮೆದುಳು ನಿಷ್ಕ್ರಿಯಗೊಂಡಿದೆ.
ಇದನ್ನೂ ಓದಿ: ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರದ ಢೋಂಗಿ ಸಮೀಕ್ಷೆ: ಮನೆ ಬಾಗಿಲಿಗೆ ಸ್ಟಿಕ್ಕರ್ ಅಂಟಿಸುವುದರ ವಿರುದ್ಧ ಜೆಡಿಎಸ್ ವಾಗ್ದಾಳಿ
ಇನ್ನು ಈ ಬಗ್ಗೆ ವೈದ್ಯರು ಹೇಳಿದೆನೆಂದರೆ ಇತ್ತೀಚೆಗೆ ಕಾರ್ಡಿಯಾಕ್ ಅರೆಸ್ಟ್ನಿಂದ ಇಂತಹ ಘಟನೆಗಳು ಹೆಚ್ಚಾಗುತ್ತಿವೆ ಎನ್ನುತಾರೆ. ಕೋನಪ್ಪ ಆಸ್ಪತ್ರೆಗೆ ನಡೆದುಕೊಂಡು ಬರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಟಿವಿ9 ಗೆ ಲಭ್ಯವಾಗಿದೆ. ಕೆಲವೇ ನಿಮಿಷಗಳಲ್ಲಿ ಆದ ಬ್ರೈನ್ ಡೆಡ್ನಿಂದ ಸದ್ಯ ಕೋನಪ್ಪ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಬ್ರೈನ್ ಡೆಡ್ ಎಂದರೇನು?
ಬ್ರೈನ್ ಡೆಡ್ ಎಂದರೆ ಮೆದುಳು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಎಂದರ್ಥ. ಮೆದುಳಿನಲ್ಲಿ ಉಂಟಾದ ಗಂಭೀರ ಗಾಯ, ಆಮ್ಲಜನಕದ ಕೊರತೆ ಮತ್ತು ಅತಿಯಾದ ರಕ್ತದ ಹರಿವಿನಂತಹ ಪ್ರಮುಖ ಅಂಶಗಳು ಈ ಸ್ಥಿತಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಚಾಮರಾಜನಗರ: ಕೊಡಸೋಗೆ ರಸ್ತೆಯಲ್ಲಿ 20ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆ, ವಿಷಪ್ರಾಶನ ಶಂಕೆ
ವ್ಯಕ್ತಿ ಮೆದುಳು ನಿಷ್ಕ್ರಿಯಗೊಂಡಾಗ ಮೆದುಳು ಹೊರತುಪಡಿಸಿ ಇಡೀ ದೇಹ ಕೆಲಸ ಮಾಡುತ್ತೆ. ಒಂದು ರೀತಿಯಲ್ಲಿ ಮನುಷ್ಯ ಬದುಕಿದ್ದು ಸತ್ತ ಸ್ಥಿತಿ. ರೋಗಿಯು ಉಸಿರಾಡದ ಕಾರಣ, ಕೃತಕ ಉಸಿರಾಟ ಅಂದರೆ ವೆಂಟಿಲೇಟರ್ನಲ್ಲಿ ಇರಿಸಲಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:54 am, Wed, 2 July 25







