ಆಟೋ ಸೈಡ್‌ಗೆ ಹಾಕಿ ಎಂದ ಅಣ್ತಾಮ್ಮಾಸ್ ಮೇಲೆ ಸೈಯದ್ ಜಮೀರ್ ಸಹೋದರರಿಂದ ಮಾರಣಾಂತಿಕ ಹಲ್ಲೆ

ಸಾರ್ವಜನಿಕವಾಗಿ ಓಡಾಡುವವನಿಗೆ ತಾಳ್ಮೆ ಇರಬೇಕು. ಸ್ವಲ್ಪ ತಾಳ್ಮೆ ಕೆಡಿಸಿಕೊಂಡರೇ ಏನೇನೋ ಆಗುತ್ತವೆ. ಅದರಂತೆ ಕಲಬುರಗಿಯಲ್ಲಿ ರಸ್ತೆ ಮೇಲೆ ನಿಲ್ಲಿಸಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಹಾಕಿ ಎಂದಿದ್ದಕ್ಕೆ ಸಹೋದರರು ಸೇರಿಕೊಂಡು ದೊಣ್ಣೆಯಿಂದ ಮನಸ್ಸೋ ಇಚ್ಛೆ ಹೊಡೆದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ನಮ್ಮ ಕಾರು ಹೋಗಲು ತೊಂದರೆಯಾಗ್ತಿದೆ. ಸ್ವಲ್ಪ ಸೈಡಿಗೆ ಸರಿಸಿ ಎಂದಿದ್ದೇ ತಡ ಸ್ಥಳ ರಣರಂಗವಾಗಿ ಹೋಗಿದೆ.

ಆಟೋ ಸೈಡ್‌ಗೆ ಹಾಕಿ ಎಂದ ಅಣ್ತಾಮ್ಮಾಸ್ ಮೇಲೆ ಸೈಯದ್ ಜಮೀರ್ ಸಹೋದರರಿಂದ ಮಾರಣಾಂತಿಕ ಹಲ್ಲೆ
Bhimalli Fighting
Edited By:

Updated on: Apr 25, 2026 | 7:35 PM

ಕಲಬುರಗಿ, (ಏಪ್ರಿಲ್ 25): ಸಹೋದರಿಬ್ಬರು ತಮ್ಮ ಸಹೋದರಿಯನ್ನ ಬಿಡಲು ಆಕೆಯ ಗಂಡನ ಊರಿಗೆ ಹೋಗಿದ್ದು, ಈ ವೇಳೆ ರಸ್ತೆ ಮೇಲೆ ನಿಲ್ಲಿಸಲಾಗಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಸರಿಸಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಕಲಬುರಗಿ (Kalaburagi) ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ನಡೆದಿದೆ. ತೋಟೆಂದ್ರ ಮತ್ತು ಸುನಿಲ್ ಸಹೋದರ ಮೇಲೆ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರಾದ ಸೈಫಾಬ್ ಒಂಟಿ, ಆರಿಫ್, ಆಸಿಫ್, ಇಮ್ರಾನ್ ಸೇರಿಕೊಂಡು ಕಟ್ಟಿಗೆಯಿಂದ ಮನಸ್ಸೋ ಇಚ್ಛೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸ್ತೆಯಲ್ಲಿ ನಿಲ್ಲಿಸಲಾಗಿದ್ದ ಆಟೋಗಳನ್ನು ಸ್ವಲ್ಪ ಸೈಡಿಗೆ ಹಾಕಿ ಎಂದಿದ್ದಾರೆ. ಇಷ್ಟು ಹೇಳಿದ್ದೇ ತಡ ರಣರಂಗವಾಗಿದೆ.

ಆಟೋ ಸೈಡಿಗೆ ಹಾಕಿ ಅಂದಿಕ್ಕೆ ಹಲ್ಲೆ

ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ ತೋಟೆಂದ್ರ ಮತ್ತು ಸುನಿಲ್ ಸಹೋದರರು ತಮ್ಮ ಸಹೋದರಿಯನ್ನ ಬಿಡಲು ಗಂಡನ ಮನೆ ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಬಂದಿದ್ದಾರೆ.. ಕಾರಿನಲ್ಲಿ ಸಹೋದರಿಯನ್ನ ಬಿಟ್ಟು ವಾಪಸು ಹೋಗೋವಾಗ, ಗ್ರಾಮದ ರಸ್ತೆ ಮೇಲೆಯೇ ಆಟೋ ನಿಲ್ಲಿಸಲಾಗಿತ್ತು. ಆಟೋ ಸೈಡಗೆ ಹಾಕಿ ನಮ್ಮ ಕಾರು ಹೋಗೊಕೆ ಸಾಧ್ಯವಾಗ್ತಿಲ್ಲ ಎಂದು ಮನವಿ ಮಾಡಿದ್ದಾರೆ. ಇಷ್ಟೇ ಅಂದಿದ್ದೇ ತಡ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರಾದ ಸೈಫಾಬ್ ಒಂಟಿ, ಆರಿಫ್, ಆಸಿಫ್, ಇಮ್ರಾನ್ ಸೇರಿಕೊಂಡು ಇಬ್ಬರು ಸಹೋದರರ ಮೇಲೆ ಮುಗಿಬಿದ್ದು, ಕಟ್ಟಿಗೆಯಿಂದ ಹೊಡೆದಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ತೋಟೆಂದ್ರ ಮತ್ತು ಸುನಿಲ್ ಕುಟುಂಬಸ್ಥರುಗ್ಗೆ ಕಲಬುರಗಿ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಲಾಡ್ಲೆ ಮಶಾಕ್ ದರ್ಗಾ ಕೇಸ್​​ ಮತ್ತೆ ಮುನ್ನೆಲೆಗೆ: ಯುಟಿ ಖಾದರ್​​ ಪತ್ರಕ್ಕೆ ಹಿಂದೂ ಸಂಘಟನೆಗಳು ಸಿಡಿದಿದ್ದೇಕೆ?

ಹಲ್ಲೊಗೊಳಗಾದವರು ನೀಡಿದ ದೂರಿನಲ್ಲೇನಿದೆ?

ಆಳಂದ ತಾಲೂಕಿನ ಗೋಳಾ ಗ್ರಾಮದಲ್ಲಿನ ಲಕ್ಕಮ್ಮದೇವಿ ದೇವಸ್ಥಾನದಲ್ಲಿ ದೇವರ ಕಾರ್ಯ ಏರ್ಪಡಿಸಲಾಗಿತ್ತು.. ಕಾರ್ಯವನ್ನ ಮುಗಿದ ಬಳಿಕ ತಮ್ಮ ಸಹೋದರಿಯನ್ನ ಗೋಳಾ ಗ್ರಾಮದಿಂದ ಭೀಮಳ್ಳಿ ಗ್ರಾಮಕ್ಕೆ ಕರೆತಂದು ಬಿಡಲು ಬಂದಿದ್ದು, ವಾಪಾಸ್ ಹೋಗೋವಾಗ ಸಹೋದರಿ ಮನೆ ಬಳಿ ರಸ್ತೆ ಮೇಲೆ ನಿಲ್ಲಿಸಲಾಗಿದ್ದ ಎರಡು ಆಟೋಗಳನ್ನ ಸೈಡ್‌ಗೆ ಹಾಕಿ ಅಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಇನ್ನು ಗಲಾಟೆ ಬಿಡಿಸಲು ಬಂದಂತ ತಾಯಿ ಮತ್ತು ಸಹೋದರಿ ಮಕ್ಕಳ ಮೇಲೆಯೋ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದಲ್ಲದೇ ಬಾಯಿಗೆ ಬಂದಹಾಗೇ ಬೈಯ್ದು ನಿಮ್ಮನ್ನ ಈ ಊರಿನಿಂದ ಆಚೆ ಹೋಗೊಕೆ ಬಿಡೋದಿಲ್ಲ ಅಂತಾ ಧಮ್ಕಿ ಹಾಕಿದ್ದು, ತಮಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಹಲ್ಲೆಗೊಳಗಾದ ತೋಟೆಂದ್ರ ಮತ್ತು ಸುನೀಲ್ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಹಲ್ಲೆ ಮಾಡಿದ ಆಟೋ ಮಾಲೀಕ ಸೈಯದ್ ಜಮೀರ್ ಹಾಗೂ ಆತನ ಸಹೋದರರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದತ್ತಾತ್ರೇಯ ಪಾಟೀಲ, ಕಲಬುರಗಿ

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us