ಕಲಬುರಗಿ: ಮಹಾರಾಷ್ಟ್ರ, ಗಡಿ ವಿಚಾರವಾಗಿ ಕರ್ನಾಟಕದ ಜೊತೆ ಪದೆ ಪದೆ ಕ್ಯಾತೆ ತೆಗೆಯುತ್ತಿರುತ್ತದೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Karnataka-Maharashtra Border Dispute) ಪ್ರಾರಂಭವಾದ ಬೆನ್ನಲ್ಲೇ ವಿಜಯಪುರ (Vijapura) ಮತ್ತು ಕಲಬುರಗಿ (Kalaburgi) ಗಡಿನಾಡ ಕನ್ನಡಿಗರು ಮೂಸೌಕರ್ಯ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಮಹಾರಾಷ್ಟ್ರದ ಶಾಸಕರು ಕನ್ನಡ ಭಾಷಿಕರೇ ಹೆಚ್ಚಾಗಿರುವ ಊರುಗಳಿಗೆ ಭೇಟಿ ನೀಡಿ, ಮೂಲಸೌಕರ್ಯ ಒದಗಿಸುವುದಗಿ ಭರವಸೆ ನೀಡಿದ್ದರು. ಆದರೆ ಇದೀಗ ಮಹಾರಾಷ್ಟ್ರ ಸರ್ಕಾರ ಗಡಿನಾಡ ಕನ್ನಡಿಗರ ವಿರುದ್ಧ ಸೇಡಿನ ರಾಜಕಾರಣ ಮಾಡಲು ಮುಂದಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ 11 ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನಡಿಗರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದೆ ಇದ್ದರೇ ಕರ್ನಾಟಕಕ್ಕೆ ಸೇರುತ್ತೇವೆ ಅಂತ ಠರಾವು ಹಾಕಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರದ ಗಡಿನಾಡ ಕನ್ನಡಿಗರ ಮನವೊಲಿಸಲು ಮುಂದಾದ “ಮಹಾ” ಸಚಿವರು
ಇದೀಗ 11 ಗ್ರಾಮ ಪಂಚಾಯತಿಗಳಿಗೆ ಸೊಲ್ಲಾಪುರ ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದಾರೆ. ನೀವು ಮಹಾರಾಷ್ಟ್ರದಲ್ಲಿಯೇ ಇರುತ್ತೇವೆ, ಕರ್ನಾಟಕಕ್ಕೆ ಹೋಗುವುದಿಲ್ಲ ಅಂತ ಬರೆದುಕೊಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿ ವಿಸರ್ಜನೆ ಮಾಡೋದಾಗಿ ಡಿಸೆಂಬರ್ 12 ರಂದು ನೋಟಿಸ್ ನೀಡಿದ್ದಾರೆ. ಈ ರೀತಿ 17 ಜನರಿಗೆ ನೋಟಿಸ್ ನೀಡಿದ್ದಾರೆ. ಪರವಾನಗಿ ಪಡೆಯದೆ ಯಾರು ಹೋರಾಟ ಮಾಡಬಾರದು. ಒಂದ ವೇಳೆ ಮಾಡಿದರೇ ಕ್ರಮ ಕೈಗೊಳ್ಳುತ್ತೇವೆ ಹಾಗೇ ರಾಜದ್ರೋಹ ಕೇಸ್ ಹಾಕುತ್ತೇವೆ ಅಂತ ಪೊಲೀಸರು ಬೆದರಿಕೆ ಹಾಕಿದ್ದಾರೆ.
ಬೆಳಗಾವಿ: ಎಂಇಎಸ್ನ ಮಹಾಮೇಳಾವ್ಗೆ ಬ್ರೇಕ್ ಹಿನ್ನೆಲೆ ಮಹಾರಾಷ್ಟ್ರದ ಶಿನ್ನೊಳ್ಳಿ ಬಳಿ ಶಿವಸೇನೆ, ಎಂಇಎಸ್ ಪುಂಡರು ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಎಂಇಎಸ್ ಪುಂಡರು ಬೈಕ್ ಸವಾರರ ಮೇಲೆ ಮುಗಿಬಿದ್ದಿದ್ದಾರೆ. ಬೈಕ್ ಸವಾರರನ್ನು ತಡೆದು ವಾಪಸ್ ಬೆಳಗಾವಿಯತ್ತ ಕಳುಹಿಸುತ್ತಿದ್ದಾರೆ. ಏಕಾಏಕಿ ರಸ್ತೆ ಬಂದ್ ಹಿನ್ನೆಲೆ ಪ್ರಯಾಣಿಕರು, ವಾಹನ ಸವಾರರ ಪರದಾಡುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ.
Published On - 3:09 pm, Mon, 19 December 22