Border Dispute: ಮಹಾರಾಷ್ಟ್ರದ ಗಡಿನಾಡ ಕನ್ನಡಿಗರ ಮನವೊಲಿಸಲು ಮುಂದಾದ “ಮಹಾ” ಸಚಿವರು
ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ಸೇರುತ್ತೇವೆ ಎಂದು ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಕನ್ನಡಿಗರ ಮನವೊಲಿಸಲು ಸಚಿವರು ಮುಂದಾಗಿದ್ದಾರೆ.
ವಿಜಯಪುರ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Karnataka-Mharashtra border dispute) ಬುಗಿಲೇಳುತ್ತಿದ್ದಂತೆ, ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಕನ್ನಡಿಗರು (Kannadiga) ಕರ್ನಾಟಕಕ್ಕೆ ಸೇರುತ್ತೇವೆ ಎಂದು ಇಂಗಿತ ವ್ಯಕ್ತಪಡಿಸಿದ್ದರು. ಇದಾದ ಬೆನ್ನಲ್ಲೇ ಕರ್ನಾಟಕದಿಂದ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ನೀರು ಹರಿ ಬಿಡಲಾಯ್ತು. ಇದು ಮಹಾರಾಷ್ಟ್ರ ಸರ್ಕಾರಕ್ಕೆ ಕಸಿ ವಿಸಿ ಉಂಟು ಮಾಡಿತ್ತು. ಹೀಗಾಗಿ ಇಂದು (ಡಿ. 5) ಮಹಾರಾಷ್ಟ್ರದ ಸಾಂಗ್ಲಿ (Sangli) ಜಿಲ್ಲೆ ಜತ್ ತಾಲೂಕಿನ ತಿಕ್ಕುಂಡಿ ಗ್ರಾಮಕ್ಕೆ ಮಹಾರಾಷ್ಟ್ರದ ಉದ್ಯೋಗ ಮಂತ್ರಿ ಉದಯ್ ಸಾವಂತ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಮುಂದಾಗಿದರು.
ದಿಢೀರ್ ಭೇಟಿ ನೀಡಿದ ಮಹಾರಾಷ್ಟ್ರ ಸಚಿವರು ಮತ್ತು ಅಧಿಕಾರಿಗಳು, ಗ್ರಾಮದ ಹಿರಿಯರು, ಕನ್ನಡ ಪರ ಸಂಘಟನೆಗಳ ಮುಖಂಡರು, ಯುವಕರೊಂದಿಗೆ ಚರ್ಚೆ ನಡೆಸಿ ಗ್ರಾಮದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ರಾಜ್ಯಕ್ಕೆ ಬರಲು ಬಿಡಲ್ಲ: ಆರ್. ಅಶೋಕ
ಕರ್ನಾಟಕಕ್ಕೆ ಹೋಗಲು ಅನುಮತಿ ಕೊಡಿ
ಉದ್ಯೋಗ ಮಂತ್ರಿ ಉದಯ್ ಸಾವಂತ್ ಜತ್ ತಾಲೂಕಿನ ಸಂಖ, ತಿಕ್ಕುಂಡಿ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಸಚಿವರ ಸಮ್ಮುಖದಲ್ಲಿ ನಮ್ಮ ಬೇಡಿಕೆ ಈಡೇರಿದಿದ್ದರೆ ನಮಗೆ ಕರ್ನಾಟಕಕ್ಕೆ ಹೋಗಲು ಅನುಮತಿ ಕೊಡಿ ಎಂದು ಕನ್ನಡಿಗರು ಒತ್ತಾಯಿಸಿದರು. ಈ ವೇಳೆ ಕರ್ನಾಟಕದ ಮಾಜಿ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲರನ್ನು ಹಾಡಿ ಹೊಗಳಿದರು. ಹಾಗೇ ಕರ್ನಾಟಕ ಸರ್ಕಾರದ ಬಗ್ಗೆಯೂ ಹೊಗಳಿದರು. ಇದು ಸಚಿವ ಸಾವಂತ್ಗೆ ಇರುಸು ಮುರಿಸು ಉಂಟಾಯಿತುಯ/
ಕನ್ನಡ ಧ್ವಜಾರೋಹಣ
ಇನ್ನೂ ಗಡಿನಾಡಿನ ಕನ್ನಡಿಗರು ಇತ್ತೀಚೆಗೆ ಗ್ರಾಮದಲ್ಲಿ ಕನ್ನಡ ಧ್ವಜಾರೋಹಣ ಮಾಡಿದ್ದರು. ತಿಕ್ಕುಂಡಿ ಗ್ರಾಮದ ದ್ವಾರ ಬಾಗಿಲು ಮೇಲೆ ಕನ್ನಡದ ಬಾವುಟ ಹಾರಿಸಿದ್ದರು. ಅಲ್ಲದೇ ಗ್ರಾಮಸ್ಥರು ಸಿಎಂ ಬೊಮ್ಮಾಯಿ ಭಾವಚಿತ್ರದ ಬ್ಯಾನರ್ ಹಾಕಿದ್ದರು.
ನಮಗೆ ನೀರು ಕೊಡಿ ಇಲ್ಲವಾದರೇ ಕರ್ನಾಟಕಕ್ಕೆ ಹೋಗುತ್ತೇವೆ ಎಂದ ಜತ್ ಜನರು
ಕಳೆದ ಕೆಲವು ದಿನಗಳ ಹಿಂದೆ ಜತ್ ತಾಲೂಕಿನ ಜನರು ನಮಗೆ ನೀರು ಕೊಡಿ ಇಲ್ಲವಾದರೆ ಕರ್ನಾಟಕಕ್ಕೆ ಹೋಗುತ್ತೇವೆಂದು ತಾಲೂಕಿನ ಉಮದಿ ಗ್ರಾಮದ ಜನ ಆಕ್ರೋಶ ಹೊರ ಹಾಕಿದ್ದರು. ಜತ್ ತಾಲೂಕು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಜತ್ ತಾಲೂಕಿನ 42 ಹಳ್ಳಿಗಳ ಜನರು ಉಮದಿ ಗ್ರಾಮದಲ್ಲಿ ಸಭೆ ಸೇರಿದ್ದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ನೀರು ಪೂರೈಕೆ
ಡಿಸೆಂಬರ್ 2 ರಂದು ಕರ್ನಾಟಕದಿಂದ, ಮಹಾರಾಷ್ಟ್ರಕ್ಕೆ ನೀರು ಹರಿಸಲಾಗಿತ್ತು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 28 ಹಳ್ಳಿಗಳಿಗೆ ಕೃಷ್ಣಾ ನದಿಯ ನೀರು ಹರಿಸಲಾಗಿದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ಜತ್ ತಾಲೂಕಿಗೆ ನೀರು ಹರಿ ಬಿಡಲಾಗಿದೆ.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:54 pm, Mon, 5 December 22