ನಕಲಿ ಪಿಸ್ತೂಲ್ ಹಿಡಿದು ಹುಚ್ಚುಚ್ಚು ರೀಲ್ಸ್; ಇಬ್ಬರು ಯುವಕರ ವಿರುದ್ಧ ದಾಖಲಾಯ್ತು ಎಫ್‌ಐಆರ್
ಯುವಕರೇ ಸೋಷಿಯಲ್ ಮೀಡಿಯಾದಲ್ಲಿ ಹುಚ್ಚುಚ್ಚು ರೀಲ್ಸ್‌ಗಳನ್ನ ಮಾಡುವ ಮುನ್ನ ತಪ್ಪದೇ ಈ ಸ್ಟೋರಿ ಓದಿ. ಅಷ್ಟಕ್ಕೂ ಇಲ್ಲಿ ಇಬ್ಬರು ಯುವಕರು ನಕಲಿ ಗನ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹವಾ ಮೆಂಟೈನ್ ಮಾಡುವುದಕ್ಕೆ ಹೋಗಿ ಯುವಕರ ಪಿಸ್ತೂಲ್ ಶೋಕಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದಂತಹ ಘಟನೆ ನಡೆದಿದೆ.
ಕಲಬುರಗಿ, ಮಾ.29: ಜಿಲ್ಲೆಯ ಸೇಡಂ(Sedam) ಪಟ್ಟಣದ ಮೂಲದವರಾದ ಮಹೇಶ್ ಮತ್ತು ಬಸವರಾಜ್ ಎಂಬ ಯುವಕರು ಸೇರಿಕೊಂಡು ನಕಲಿ ಪಿಸ್ತೂಲ್ ಹಿಡಿದು ರೀಲ್ಸ್(Reels) ಜೊತೆಗೆ ಫೋಟೋ ಶೂಟ್ ಮಾಡಿ ಫೆಸ್‌ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಹವಾ ಮೆಂಟೈನ್ ಮಾಡಲು ಪೋಸ್ಟ್ ಮಾಡಿದ್ದಾರೆ. ಪಿಸ್ತೂಲ್ ಹಿಡಿದು ರೀಲ್ಸ್ ಮಾಡಿದ ವಿಡಿಯೋಗಳನ್ನ ನೋಡಿದ ಸಾರ್ವಜನಿಕರು, ಯುವಕರ ಹುಚ್ಚಾಟ ಕಂಡು ಅಕ್ಷರಶಃ ಬೆಚ್ಚಿಬಿದ್ದಿದ್ದರು. ಇದನ್ನ ನೋಡಿದ ಪೊಲೀಸರು, ರೀಲ್ಸ್ ಮಾಡಿದ ಮಹೇಶ್ ಮತ್ತು ಬಸವರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಇನ್ನೂ ಸೇಡಂ ಪಟ್ಟಣದ ಇಂದಿರಾನಗರ ಬಡಾವಣೆಯ ನಿವಾಸಿಗಳಾದ ಮಹೇಶ್ ಮತ್ತು ಬಸವರಾಜ್ ಕಾಲೇಜು ಮುಗಿಸಿ, ಕೆಲಸ ಹುಡುಕದೇ ಬಿಡಾಡಿ ಥರ ಓಡಾಡಿಕೊಂಡು ಶೋಕಿ ಜೀವನ ಸಾಗಿಸುತ್ತಿದ್ದರು. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಲು ಹೋಗಿದ್ದ ಈ ಯುವಕರನ್ನ ಠಾಣೆಗೆ ಕರೆಯಿಸಿ ಪೊಲೀಸರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ಇಬ್ಬರು ಯುವಕರ ವಿರುದ್ಧ ಎಫ್‌ಐಆರ್ ದಾಖಲಿಸಿ ಮುಂದೆ ಈ ರೀತಿಯಲ್ಲಿ ಹುಚ್ಚುಚ್ಚು ರೀಲ್ಸ್ ಮಾಡಿದ್ರೆ ಜೈಲೂಟ ಗ್ಯಾರಂಟಿ ಎಂದು ಖಡಕ್ ಆಗಿ ವಾರ್ನ್ ಮಾಡಿ ಕಳುಹಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಪಿಯು ಪರೀಕ್ಷೆಯಲ್ಲಿ ತಂಗಿಗೆ ನಕಲು ಮಾಡಲು ಬಿಡದ ಪೊಲೀಸ್ ಮೇಲೆ ಅಣ್ಣನಿಂದ ಹಲ್ಲೆ
ಅದೆನೇ ಇರಲಿ ಇತ್ತೀಚೆಗೆ ಯುವಕರು ಶೋಕಿ ಜೀವನಕ್ಕೆ ದಾಸರಾಗಿ ಸೋಷಿಯಲ್ ಮೀಡಿಯಾದಲ್ಲಿ ಹವಾ ಮೆಂಟೈನ್ ಮಾಡಲು ರೀಲ್ಸ್‌ಗಳನ್ನ ಮಾಡುತ್ತಿರುವುದು ದುರಂತವೇ ಸರಿ. ಇನ್ನಾದರೂ ಯುವ ಪಿಳಿಗೆ ಇಂತಹ ದುಷ್ಕೃತ್ಯಗಳಿಗೆ ಬಲಿಯಾಗದಿರಲಿ ಎನ್ನುವುದೇ ನಮ್ಮ ಆಶಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ