ಗಾಂಜಾ ದಂಧೆಕೋರರಿಂದ ಪೊಲೀಸ್ ಮೇಲೆ ಹಲ್ಲೆ: ಸ್ಥಿತಿ ಗಂಭೀರ, ಆಸ್ಪತ್ರೆಗೆ ಎಸ್​​ಪಿ ಇಶಾ ಪಂತ್ ಭೇಟಿ

ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುತ್ತಿದ್ದ ಗ್ಯಾಂಗ್ ಪತ್ತೆ ಮಾಡಲು ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ಹೋಗಿದ್ದರು. ಈ ವೇಳೆ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ದಿಢೀರನೆ ನಲವತ್ತು ಜನರ ತಂಡ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ದಾಳಿ ಮಾಡಿದ್ದಾರೆ.

ಗಾಂಜಾ ದಂಧೆಕೋರರಿಂದ ಪೊಲೀಸ್ ಮೇಲೆ ಹಲ್ಲೆ: ಸ್ಥಿತಿ ಗಂಭೀರ, ಆಸ್ಪತ್ರೆಗೆ ಎಸ್​​ಪಿ ಇಶಾ ಪಂತ್ ಭೇಟಿ
ಎಸ್​​ಪಿ ಇಶಾ ಪಂತ್
TV9kannada Web Team

| Edited By: Ayesha Banu

Sep 24, 2022 | 12:40 PM

ಕಲಬುರಗಿ: ಗಾಂಜಾ ದಂಧೆಕೋರರು ಪೊಲೀಸರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾರೆ. ಕಲಬುರಗಿ ಗ್ರಾಮೀಣ ಠಾಣೆ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಸಿಪಿಐ ಶ್ರೀಮಂತ ಇಲ್ಲಾಳ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ. ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಾಂಜಾ ಮಾರಾಟಗಾರ ಸಂತೋಷ್​ನನ್ನು ಎರಡು ದಿನದ ಹಿಂದೆ ಪೊಲೀಸರು ಬಂಧಿಸಿದ್ದರು. ಆರೋಪಿಯ ಮಾಹಿತಿ ಮೇರೆಗೆ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುತ್ತಿದ್ದ ಗ್ಯಾಂಗ್ ಪತ್ತೆ ಮಾಡಲು ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ಹೋಗಿದ್ದರು. ಈ ವೇಳೆ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ದಿಢೀರನೆ ನಲವತ್ತು ಜನರ ತಂಡ ಸಿಪಿಐ ಶ್ರೀಮಂತ ಇಲ್ಲಾಳ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಶ್ರೀಮಂತ ಇಲ್ಲಾಳ ಅವರ ಸ್ಥಿತಿ ಗಂಭೀರವಾಗಿದೆ. ಇನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಎಸ್​​ಪಿ ಇಶಾ ಪಂತ್ ಭೇಟಿ ನೀಡಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಪಿಐ ಶ್ರೀಮಂತ್ ಇಲ್ಲಾಳ್ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಮನಮೋಹನ್ ಸಿಂಗ್ ಅಸಾಧಾರಣ ವ್ಯಕ್ತಿ, ಆದರೂ ಭಾರತದ ಆರ್ಥಿಕತೆ ಸ್ಥಗಿತಗೊಂಡಿತು; ಇನ್​ಫೋಸಿಸ್ ನಾರಾಯಣಮೂರ್ತಿ ವಿಷಾದ

ಈ ವೇಳೆ ಮಾತನಾಡಿದ ಪೊಲೀಸ್​ ವರಿಷ್ಠಾಧಿಕಾರಿ ಇಶಾ ಪಂತ್, ಗಾಂಜಾ ಜಪ್ತಿ​​ ಮಾಡಲು ಹೋಗಿದ್ದಾಗ ದಾಳಿ ನಡೆದಿದೆ. ಮಹಾರಾಷ್ಟ್ರದ ಗಡಿ ಉಮ್ಮರ್ಗಾ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಆಗಿದೆ. 30ಕ್ಕೂ ಹೆಚ್ಚು ಜನರು ದಿಢೀರ್​​ ಅಟ್ಯಾಕ್ ಮಾಡಿದ್ದಾರೆ. ಸಿಪಿಐ ಆರೋಗ್ಯದ ಕುರಿತು ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಏರ್​ಲಿಫ್ಟ್​ ಮಾಡಿ ಬೇರೆಡೆ ಚಿಕಿತ್ಸೆ ಕೊಡಿಸುವ ಬಗ್ಗೆ ಚಿಂತನೆ ನಡೆದಿದೆ. ಗೃಹಸಚಿವರು, ಎಲ್ಲ ಹಿರಿಯ ಅಧಿಕಾರಿಗಳು ಮಾತಾಡಿದ್ದಾರೆ ಎಂದರು.

ಇನ್ನು ಶ್ರೀಮಂತ ಇಲ್ಲಾಳ ಅವರಿಗೆ ಡಾ.ಸುದರ್ಶನ್ ಲಾಖೆ, ಡಾ.ರಾಕೇಶ್ ನೇತ್ರತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಮಾಧ್ಯಮಗಳಿಗೆ ಆಸ್ಪತ್ರೆಯ ವೈದ್ಯ ಡಾ ಸುದರ್ಶನ ಆರೋಗ್ಯ ಸಂಬಂಧ ಮಾಹಿತಿ ನೀಡಿದ್ದಾರೆ. ಸದ್ಯ ಶ್ರೀಮಂತ್ ಇಲ್ಲಾಖ್ ಕಂಡೀಷನ್ ಕ್ರಿಟಿಕಲ್ ಇದೆ. ದೇಹದ ವಿವಿದೆಡೆ ಗಾಯಗಳಾಗಿವೆ. ಪಕ್ಕೆಲಬು, ಮುಖದ ಎಲಬುಗಳು ಮುರಿದಿವೆ. ಮೆದುಳಿನ ಕೆಲ ಭಾಗಕ್ಕೆ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವ ಕೂಡಾ ಆಗಿದೆ. ಮುಂಜಾನೆ ನಾಲ್ಕು ಗಂಟೆಗೆ ಆಸ್ಪತ್ರೆಗೆ ಬಂದಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ಎಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೆಂಟಿಲೇಟರ್ ನಲ್ಲಿದ್ದಾರೆ ಎಂದರು.

ರಾಯಚೂರಿನಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್​ ದಂಧೆ ಆರೋಪ: ಅಬಕಾರಿ ಅಧಿಕಾರಿಗಳಿಂದ 8 ಕಡೆ ದಾಳಿ

ರಾಯಚೂರು: ಮಕ್ಕಳು ಇಷ್ಟಪಟ್ಟು ತಿನ್ನುವ ಚಾಕೊಲೇಟ್​ನಲ್ಲಿ ಗಾಂಜಾ ಮಿಶ್ರಣ(Ganja Mixed Chocolate) ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಗಾಂಜಾ ಮಿಶ್ರಿತ ಚಾಕೊಲೇಟ್​ ದಂಧೆ ಆರೋಪ ಹಿನ್ನೆಲೆ ರಾಯಚೂರು ನಗರದ 8 ಕಡೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಾನ್ ಶಾಪ್​, ಕಿರಾಣಿ ಸ್ಟೋರ್​, ಬೇಕರಿ ಸೇರಿ 8 ಕಡೆ ರೇಡ್​​ ಮಾಡಿದ್ದಾರೆ. ಆದ್ರೆ ಸರ್ಚ್​ ವಾರಂಟ್​ ಇಲ್ಲದೇ ಶೋಧ ನಡೆಸಿದ್ದಾರೆಂದು ಅಂಗಡಿ ಮಾಲೀಕರು ಹಾಗೂ ಅಬಕಾರಿ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.

ನಗರದಲ್ಲಿ ಚಾಕೊಲೇಟ್ ಮಾದರಿಯಲ್ಲೇ ಗಾಂಜಾ ಮಿಶ್ರಿತ ಚಾಕೊಲೇಟ್ ತಯಾರಿ ಮಾಡಲಾಗುತ್ತಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ. ಹೀಗಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಆಪರೇಷನ್ ನಡೆಸಿದ್ದಾರೆ. ಇನ್ನು ಇತ್ತೀಚೆಗಷ್ಟೇ ಯಾದಗಿರಿಯಲ್ಲಿ ಇದೇ ಮಾದರಿಯ ಗಾಂಜಾ ಚಾಕೊಲೇಟ್ ಸೀಜ್ ಮಾಡಲಾಗಿತ್ತು. ಈ ಹಿನ್ನೆಲೆ ರಾಯಚೂರಿನಲ್ಲಿ ದಂಧೆಕೋರರು ಅಲರ್ಟ್ ಆಗಿದ್ದಾರೆ. ಹಾಗೂ ಸರ್ಚ್ ವೇಳೆ ಅಂಗಡಿ ಮಾಲೀಕರಿಗೂ ಅಬಕಾರಿ ಸಿಬ್ಬಂದಿ ನಡುವೆ ಟಾಕ್ ವಾರ್ ನಡೆದಿದೆ. ತಮ್ಮ ಸಮುದಾಯ ಟಾರ್ಗೆಟ್ ಮಾಡಿ ದಾಳಿ ಮಾಡಲಾಗುತ್ತಿದೆ ಎಂದು ವ್ಯಾಪಾರಸ್ಥರು ಆರೋಪ ಮಾಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada