Chittapur RSS March: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್

Chittapur RSS Route March on November 16: ರಾಜ್ಯಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚನ ವಿಚಾರವಾಗಿ ಮಹತ್ವದ ನಿರ್ಧಾರ ಹೊರಬಿದ್ದಿದೆ. RSS​ ಪಥಸಂಚಲನಕ್ಕೆ ಕಲಬುರಗಿ ಜಿಲ್ಲಾಡಳಿತ ಅನುಮತಿ ನೀಡಿದ್ದು, ಒಟ್ಟು 325 ಜನರು ಮಾತ್ರ ಭಾಗಿಯಾಗಲು ಅವಕಾಶ ನೀಡಿರೋದಾಗಿ ತಿಳಿಸಿದೆ.

Chittapur RSS March: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್
RSS ಪಥಸಂಚಲನ
Updated By: ಪ್ರಸನ್ನ ಹೆಗಡೆ

Updated on: Nov 13, 2025 | 3:49 PM

ಕಲಬುರಗಿ, ನವೆಂಬರ್​ 13: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಪಥಸಂಚಲನಕ್ಕೆ ಅನುಮತಿ ನೀಡಿರುವ ಬಗ್ಗೆ ಹೈಕೋರ್ಟ್​ಗೆ ಜಿಲ್ಲಾಡಳಿತ ಮಾಹಿತಿ ನೀಡಿದ್ದು, ನ.16ರ ಮಧ್ಯಾಹ್ನ 3.30ರಿಂದ ಸೂರ್ಯಾಸ್ತದವರೆಗೆ ಅವಕಾಶ ನೀಡಲಾಗಿದೆ. ಪಥಸಂಚಲನದಲ್ಲಿ 300 ಕಾರ್ಯಕರ್ತರು ಹಾಗೂ 25 ಬ್ಯಾಂಡ್ ವಾದಕರಿಗೆ ಅವಕಾಶ ನೀಡಲಾಗಿದ್ದು, ಒಟ್ಟು 325 ಜನ ಮಾತ್ರ ಭಾಗಿಯಾಗಬೇಕು ಎಂದು ತಿಳಿಸಿದೆ.

ಷರತ್ತುಬದ್ಧ ಅನುಮತಿ

 

ನವೆಂಬರ್​ 7ರಂದು ಇದೇ ವಿಚಾರವಾಗಿ ಕಲಬುರಗಿ ವಿಭಾಗೀಯ ಪೀಠದಲ್ಲಿ ನಡೆದಿದ್ದ ವಿಚಾರಣೆ ವೇಳೆ, ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ಜಿಲ್ಲಾಡಳಿತಕ್ಕೆ ನಾವು ನಮ್ಮ ಪ್ರಸ್ತಾವನೆ ನೀಡಿದ್ದೇವೆ. ಸರ್ಕಾರದ ನಿರ್ಧಾರವನ್ನು ಅಡ್ವೊಕೆಟ್ ಜನರಲ್ ತಿಳಿಸಬೇಕು ಎಂದು ಹೇಳಿದ್ದರು. ಜಿಲ್ಲಾಡಳಿತ ಪರವಾಗಿ ವಾದ ಮಾಡಿದ್ದ ಅಡ್ವೊಕೆಟ್ ಜನರಲ್ ಶಶಿಕರಣ್​ ಶೆಟ್ಟಿ, ಪಥಸಂಚನಲಕ್ಕಾಗಿ 11 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳನ್ನು ಪರಿಶೀಲಿಸಲಾಗಿದ್ದು, ಪ್ರತಿಯೊಬ್ಬರಿಗೂ ಪ್ರತ್ಯೇಕ ದಿನ ಅವಕಾಶ ನೀಡಲು ಚಿಂತಿಸಲಾಗಿದೆ. ಇದಕ್ಕಾಗಿಒಂದು ವಾರ ಕಾಲಾವಕಾಶ ನೀಡುವಂತೆ ನ್ಯಾಯಾಲಕ್ಕೆ ಮನವಿ ಮಾಡಿದ್ದರು. ನ. 13 ಅಥವಾ 16ರಂದು ಕಾರ್ಯಕ್ರಮಕ್ಕೆ ಕಲ್ಯಾಣ ಮಂಟಪ ಲಭ್ಯವಿದೆ . ಹೀಗಾಗಿ ಅದೇ ದಿನಾಂಕದಲ್ಲಿ ಅನುಮತಿ ನೀಡಿ ಎಂದು ಈ ವೇಳೆ ಅರ್ಜಿದಾರು ಮನವಿ ಮಾಡಿದ್ದು, ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಎಜಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಈಗ ಅರ್ಜಿದಾರರ ಮನವಿಯಂತೆ ನ.16ರಂದು ಪಥಸಂಸಲನಕ್ಕೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ.

ಇದನ್ನೂ ಓದಿ: RSS ಚಟುವಟಿಕೆ ನಿರ್ಬಂಧಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ, ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಎರಡು ಬಾರಿ ನಡೆದಿದ್ದ ಶಾಂತಿ ಸಭೆ

ಚಿತ್ತಾಪುರದಲ್ಲಿ RSS ಪಥಸಂಚಲನ ವಿಚಾರ ಸಂಬಂಧ ಎರಡು ಬಾರಿ ಶಾಂತಿ ಸಭೆ ನಡೆದಿತ್ತು. ಮೊದಲ ಬಾರಿಗೆ ಅ.28ರಂದು ಜಿಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆದಿತ್ತು. ಈ ಸಭೆ ವಿಫಲವಾಗಿದ್ದ ಹಿನ್ನಲೆ ಕೋರ್ಟ್​ ಸೂಚನೆಯಂತೆ 2ನೇ ಬಾರಿ ಶಾಂತಿ ಸಭೆಯನ್ನ ಬೆಂಗಳೂರಿನ‌ ಅಡ್ವೊಕೇಟ್ ಜನರಲ್ (ಎಜಿ) ಕಚೇರಿಯಲ್ಲಿ ನವೆಂಬರ್​ 5ರಂದು ನಡೆಸಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 3:22 pm, Thu, 13 November 25