ಶಿಕ್ಷೆ ಮುಗಿದರೂ ಜೈಲಲ್ಲೇ ಇದ್ದ ಕೈದಿಯ ಬಿಡುಗಡೆಗೆ ನೆರವಾದ ಜೈಲಾಧಿಕಾರಿ! ಕಲಬುರಗಿಯಲ್ಲೊಂದು ಅಪರೂಪದ ವಿದ್ಯಮಾನ
ಕಲಬುರಗಿ ಜೈಲಾಧಿಕಾರಿಗಳ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಬಿಡುಗಡೆಯಾಗಿದ್ದರೂ ದಂಡ ಕಟ್ಟಲು ಹಣವಿಲ್ಲದೆ ಜೈಲಿನಲ್ಲೇ ಉಳಿದಿದ್ದ ದುರ್ಗಪ್ಪ ಎಂಬುವರಿಗೆ ಜೈಲಾಧಿಕಾರಿಗಳು ನೆರವಾಗಿದ್ದಾರೆ. ಇದು ಮಾನವೀಯತೆಯ ಅದ್ಭುತ ಉದಾಹರಣೆಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೈಲಾಧಿಕಾರಿಗಳು ಮಾಡಿದ ಸಹಾಯವೇನು? ಈ ಸ್ಟೋರಿ ಓದಿ

ಕಲಬುರಗಿ, ಫೆಬ್ರವರಿ 05: ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದರೂ ಜೈಲಿನಲ್ಲೇ ಇದ್ದ ಕೈದಿಗೆ ಜೈಲಾಧಿಕಾರಿಗಳು (Jailer) ಸಹಾಯ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ದುರ್ಗಪ್ಪ ಎಂಬುವರು ಕೊಲೆ ಪ್ರಕರಣದಲ್ಲಿ 2013ರಲ್ಲಿ ಜೈಲು ಸೇರಿದ್ದರು. ಬಳಿಕ, ಪ್ರಕರಣ ಸಾಬೀತಾಗಿ ದುರ್ಗಪ್ಪ ಜೀವಾವಧಿ ಶಿಕ್ಷಕೆಗೆ ಒಳಗಾಗಿದ್ದರು. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿದ್ದರು.
ಬಳಿಕ, 2023ರ ನವೆಂಬರ್ನಲ್ಲಿ ದುರ್ಗಪ್ಪರನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಆದರೆ, ನ್ಯಾಯಾಲಯ ವಿಧಿಸಿದ್ದ 1 ಲಕ್ಷ ರೂ. ದಂಡ ಕಟ್ಟಬೇಕಾಗಿತ್ತು. ಆದರೆ, ದುರ್ಗಪ್ಪರ ಬಳಿ ಅಷ್ಟೊಂದು ಹಣವಿರಲಿಲ್ಲ. ಹೀಗಾಗಿ, ಹಣವಿಲ್ಲದೆ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದರು.
ಜೈಲಾಧಿಕಾರಿಗಳು ದುರ್ಗಪ್ಪರ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಆದರೆ, ದುರ್ಗಪ್ಪ ಸಂಬಂಧಿಕರು ಕ್ಯಾರೆ ಎನ್ನಲಿಲ್ಲ. ಅಲ್ಲದೇ, ಕೆಲ ಎನ್ಜಿಓಗಳನ್ನೂ ಸಂರ್ಪಕ ಮಾಡಿದ್ದ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ದುರ್ಗಪ್ಪರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಅದರೂ, ಅಲ್ಲಿಂದಲೂ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.
ಆದರೆ, ವಯೊವೃದ್ದರಾಗಿದ್ದ ದುರ್ಗಪ್ಪರಿಗೆ ಜೈಲಿನಿಂದ ಬಿಡುಗಡೆಯಾಗುವ ಹಂಬಲವಿತ್ತು. ಅದರೆ, ಕಿತ್ತು ತಿನ್ನುವ ಬಡತನ ದುರ್ಗಪ್ಪರ ಆಸೆಗೆ ತಣ್ಣಿರೆಚಿತ್ತು. ಮದುವೆಯಾಗದ ದುರ್ಗಪ್ಪರಿಗೆ ಆಸ್ತಿ ಮನೆ ಯಾವುದು ಇರಲಿಲ್ಲ. ಆದರೆ, ಲಿಂಗಸೂರಿನಲ್ಲಿ ಸಂಬಂಧಿಕರಿದ್ದರೂ ಕೂಡಾ ಸಹಾಯ ಮಾಡಿರಲಿಲ್ಲ. ಆಗ, ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯ ಅಧಿಕ್ಷಕಿ ಡಾ.ಅರ್ ಅನಿತಾ ಅವರು ದುರ್ಗಪ್ಪರ ನೆರವಾಗಿದ್ದಾರೆ.
ದುರ್ಗಪ್ಪ ಜೈಲಿನಲ್ಲಿದ್ದಾಗ ಮಾಡಿದ್ದ ಕೂಲಿ ಕೆಲಸದ ಹಣ ಇರುವುದನ್ನು ಪತ್ತೆ ಹಚ್ಚಿದ್ದರು. ದುರ್ಗಪ್ಪರ ಬ್ಯಾಂಕ್ ಖಾತೆ ಇದಿದ್ದು ಲಿಂಗಂಸೂರಿನಲ್ಲಿ. ಕೊನೆಗೆ ತಮ್ಮ ಸಿಬ್ಬಂದಿಯನ್ನು ದುರ್ಗಪ್ಪರ ಜೊತೆಗೆ ಕಳಹುಸಿ ಹಣ ಡ್ರಾ ಮಾಡಿಸಿಕೊಂಡು ಬರಲು ಅನುವು ಮಾಡಿಕೊಟ್ಟಿದ್ದರು. ಕೊನೆಗೆ ಜೀವಾವಧಿ ಶಿಕ್ಷೆಯ ತೀರ್ಪಿನಲ್ಲಿ ನ್ಯಾಯಾಲಯ ವಿಧಿಸಿದ್ದ ದಂಡದ ಮೊತ್ತ 1 ಲಕ್ಷ ರೂ. ಪಾವತಿ ಮಾಡಿದು. ಜೈಲಿಗೂ ಮಾನವೀಯ ಮುಖವಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.
ಏಕೆಂದರೆ ಇದೇ ಅಧೀಕ್ಷಕಿ ಡಾ.ಅನಿತಾ ಅವರು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧಿಕ್ಷಕಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಹಲವು ವಿಡಿಯೋ ರಿಲೀಸ್ ಆಗಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಅವರ ಮೇಲೆ ಷಡ್ಯಂತ್ರ ಮಾಡಿ ಕೆಲ ಕೈದಿಗಳು ಕಾರು ಸ್ಫೋಟಿಸುವುದಾಗಿ ಬೆದರಿಕೆ ಕೂಡಾ ಹಾಕಿದ್ದರು. ಬಳಿಕ ಎಲ್ಲ ಷಡ್ಯಂತ್ರ ಬಯಲಾಗಿ ವಿವಾದ ಮುಕ್ತವಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:04 am, Wed, 5 February 25