ಕೆಇಎ ಪರೀಕ್ಷೆ ಅಕ್ರಮದ ಕಿಂಗ್​ಪಿನ್​ RD ಪಾಟೀಲ್​ಗೆ ಸಲಾಂ; ಪೊಲೀಸ್ ಕಾನ್ಸಟೇಬಲ್ ಅಮಾನತು

ಕೆಇಎ ಪರೀಕ್ಷಾ ಅಕ್ರಮ ಪ್ರಕರಣವನ್ನು ಸಿಐಡಿಗೆ ವಹಿಸಿದ ಮೇಲೆ ತನಿಖೆ ಚುರುಕುಗೊಂಡಿದೆ. ಅದರಂತೆ ಪ್ರಕರಣದಲ್ಲಿ ಭಾಗಿಯಾದ ಹಲವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ. ಅದರಂತೆ ಅಕ್ರಮದ ಕಿಂಗ್​ಪಿನ್​ ಆಗಿರುವ ಆರ್​ಡಿ ಪಾಟೀಲ್(RD Patil) ಅವರನ್ನು ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆತಂದಾಗ ಓರ್ವ ಕಾನ್ಸಟೇಬಲ್​ ನಮಸ್ಕಾರ ಮಾಡಿದ ಹಿನ್ನಲೆ ಅಮಾನತು ಮಾಡಲಾಗಿದೆ.

ಕೆಇಎ ಪರೀಕ್ಷೆ ಅಕ್ರಮದ ಕಿಂಗ್​ಪಿನ್​ RD ಪಾಟೀಲ್​ಗೆ ಸಲಾಂ; ಪೊಲೀಸ್ ಕಾನ್ಸಟೇಬಲ್ ಅಮಾನತು
ಆರ್​ಡಿ ಪಾಟೀಲ್​ಗೆ ನಮಸ್ಕಾರ ಮಾಡಿದ ಪೊಲೀಸ್​ ಕಾನ್ಸ್​ಟೇಬಲ್​ ಅಮಾನತು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 18, 2023 | 3:04 PM

ಕಲಬುರಗಿ, ನ.18: ಕೆಇಎ(KEA) ನಡೆಸಿದ ಎಫ್​ಡಿಎ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಸಿಐಡಿ(CID)ಗೆ  ವಹಿಸಲಾಗಿದೆ. ಇನ್ನು ಅಕ್ರಮದ ಕಿಂಗ್​ಪಿನ್​ ಆಗಿರುವ ಆರ್​ಡಿ ಪಾಟೀಲ್(RD Patil) ಅವರನ್ನು ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆತಂದಾಗ ಓರ್ವ ಕಾನ್ಸಟೇಬಲ್​ ನಮಸ್ಕಾರ ಮಾಡಿದ ಹಿನ್ನಲೆ ಅಮಾನತು ಮಾಡಲಾಗಿದೆ.ಆರ್​ಡಿ ಪಾಟೀಲ್​ಗೆ ಸಲಾಂ ಎಂದಿದ್ದ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ಕಾನ್ಸಟೇಬಲ್ ಮಾಳಪ್ಪ ಭಾಸಗಿ ಎಂಬುವವರನ್ನು ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನರವರು ಅಮಾನತಗೊಳಿಸಿ ಆದೇಶಿಸಿದ್ದಾರೆ.

ಚುರುಕುಗೊಂಡ ತನಿಖೆ

ಪ್ರಕರಣವನ್ನು ಸಿಐಡಿಗೆ ವಹಿಸಿದ ಮೇಲೆ ತನಿಖೆ ಚುರುಕುಗೊಂಡಿದೆ. ಅದರಂತೆ ಪ್ರಕರಣದಲ್ಲಿ ಭಾಗಿಯಾದ ಹಲವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಯುತ್ತಿದೆ. ಅದರಂತೆ ಇಂದು ತನಿಖೆಯಲ್ಲಿ ಮತ್ತೊಂದು ವಾಟ್ಸಪ್ ಚಾಟ್ ಬಯಲಾಗಿದೆ. ಕೋಡ್​ವರ್ಡ್ ಮೂಲಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಳುಹಿಸಿದ ಚಾಟ್​​ ಇದಾಗಿದೆ. ಅಕ್ರಮದ ಪ್ರಮುಖ ಆರೋಪಿಯಾದ ಸಿದ್ದರಾಮ ಅಲಿಯಸ್ ಪುಟ್ಟು ಎಂಬುವವರ ಮೊಬೈಲ್​ನಿಂದ, ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಭ್ಯರ್ಥಿಗೆ ಪ್ರಶ್ನೆ ಪತ್ರಿಕೆಯಲ್ಲಿದ್ದ ಅಕ್ಷರಗಳ ಆಧಾರದಲ್ಲಿ ಉತ್ತರಗಳು ಬಂದಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕೆಇಎ ಪರೀಕ್ಷೆ ಅಕ್ರಮ: ಮತ್ತೊಂದು ವಾಟ್ಸ್​ಆ್ಯಪ್ ಚಾಟ್ ಬಯಲು, ಕೋಡ್​ವರ್ಡ್ ಹೇಗಿದೆ ಗೊತ್ತಾ?

ಇನ್ನು ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್​ಪಿನ್ ಆರ್​ಡಿ ಪಾಟೀಲ್​ಗೆ ಆನ್‌ಲೈನ್‌ ಗೇಮ್​ಗಳಲ್ಲಿ ಹಣ ಹೂಡಿಕೆ ಮಾಡಿ ಆಟ ಆಡುವ ಚಾಳಿ ಹೊಂದಿರುವುದು ತಿಳಿದುಬಂದಿದೆ. ಆನ್‌ಲೈನ್ ಗೇಮ್‌ಗಾಗಿ ಮೂರು ಮೊಬೈಲ್ ನಂಬರ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದ ಇತ, ಕೆಲವೇ ತಿಂಗಳಲ್ಲಿ 30 ಲಕ್ಷಕ್ಕೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದನು. ಆ ಮೂಲಕ ಮೂರು ಅಕೌಂಟ್​ಗಳಲ್ಲಿನ ಅಕ್ರಮವಾಗಿ ಬಂದ ಹಣವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡುತ್ತಿದ್ದನು. ಈ ಎಲ್ಲಾ ವಿಚಾರಗಳು ಅಪಾರ್ಟ್ಮೆಂಟ್‌ನಲ್ಲಿ‌ ಸಿಕ್ಕ ಮೊಬೈಲ್‌ ಪರಿಶೀಲನೆ ವೇಳೆ ಬಯಲಿಗೆ ಬಂದಿತ್ತು. ಈ ಮಧ್ಯೆ ಪ್ರಕರಣದ ಆರೋಪಿಗೆ ನಮಸ್ಕಾರ್​ ಮಾಡಿದ ಹಿನ್ನಲೆ ಪೇದೆಯನ್ನು ಅಮಾನತು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
ಮಂಡ್ಯ ಹಿಂಸಾಚಾರ: ನಾಗಮಂಗಲ ಘಟನೆ ಬಗ್ಗೆ ಎಸ್​ಪಿ ಹೇಳಿದ್ದೇನು ನೋಡಿ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ
‘ಕಿರುಕುಳ ಆದಾಗಲೇ ಹೇಳಿ, ಐದು ವರ್ಷ ಬಿಟ್ಟೇಕೆ ಬರುತ್ತೀರಿ’; ನಟಿಯ ಪ್ರಶ್ನೆ