ಕಲಬುರಗಿ: 11 ತಿಂಗಳು ಶಾಲೆಗೆ ಗೈರಾಗಿದ್ದರೂ ಶಿಕ್ಷಕನಿಗೆ ವೇತನ ಬಿಡುಗಡೆ: ಮೂವರಿಗೆ ಕಡ್ಡಾಯ ನಿವೃತ್ತಿ

Kalaburagi News: ಜಿಲ್ಲೆಯ ಆಳಂದ ತಾಲೂಕಿನ ಅಂಬಲಗಾ ಪ್ರಾಥಮಿಕ ಶಾಲೆ ಶಿಕ್ಷಕ 11 ತಿಂಗಳು ಶಾಲೆಗೆ ಗೈರಾಗಿದ್ದರೂ ವೇತನ ಬಿಡುಗಡೆ ಮಾಡಿರುವ ಬಿಇಒ ಹಾಗೂ ಇಬ್ಬರು ಎಫ್‌ಡಿಎಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಇಲಾಖಾ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಕಲಬುರಗಿ: 11 ತಿಂಗಳು ಶಾಲೆಗೆ ಗೈರಾಗಿದ್ದರೂ ಶಿಕ್ಷಕನಿಗೆ ವೇತನ ಬಿಡುಗಡೆ: ಮೂವರಿಗೆ ಕಡ್ಡಾಯ ನಿವೃತ್ತಿ
ನಿವೃತ್ತಿಗೊಂಡವರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Nov 26, 2023 | 4:43 PM

ಕಲಬುರಗಿ, ನವೆಂಬರ್​ 26: 11 ತಿಂಗಳು ಶಾಲೆಗೆ ಗೈರಾಗಿದ್ದರೂ ಶಿಕ್ಷಕ (teacher) ನಿಗೆ ವೇತನ ಬಿಡುಗಡೆ ಮಾಡಿರುವ ಬಿಇಒ ಹಾಗೂ ಇಬ್ಬರು ಎಫ್‌ಡಿಎಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಬಿಇಒ ಆಗಿದ್ದ ಚಿತ್ರಶೇಖರ ದೇಗುಲಮಡಿ, ಎಫ್​ಡಿಎಗಳಾದ ಲೋಕಪ್ಪ ಜಾಧವ್, ಗುರುರಾಜರಾವ್ ಕುಲಕರ್ಣಿಯನ್ನ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಲಾಗಿದೆ.

2011ರ ಅಕ್ಟೋಬರ್‌ನಿಂದ 2012ರ ಆಗಸ್ಟ್‌ವರೆಗೂ ಶಾಲೆಗೆ ಗೈರಾಗಿದ್ದರು. ಶಾಲೆಗೆ ಸತತ ಗೈರಾಗಿದ್ದ ಶಿಕ್ಷಕ ರೇಣುಕಾಚಾರ್ಯಗೆ ವೇತನ ನೀಡಲಾಗಿತ್ತು. ಶಿಕ್ಷಕ ರೇಣುಕಾಚಾರ್ಯ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಸಹೋದರಾಗಿದ್ದು, ಜಿಲ್ಲೆಯ ಆಳಂದ ತಾಲೂಕಿನ ಅಂಬಲಗಾ ಪ್ರಾಥಮಿಕ ಶಾಲೆ ಶಿಕ್ಷಕ. ಇಲಾಖಾ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮೂರುವರೆ ತಿಂಗಳಿನಿಂದ ವೇತನವಿಲ್ಲ: ಶಾಲಾ ಶಿಕ್ಷಕರು, ಸಿಬ್ಬಂದಿಯಿಂದ ಪ್ರತಿಭಟನೆ 

ಹಾವೇರಿ: ನಗರದ ಲಯನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಕಳೆದ ಮೂರುವರೆ ತಿಂಗಳಿನಿಂದ ವೇತನವಾಗಿಲ್ಲವೆಂದು ಶಾಲೆಯ ಮುಂದೆ ಇತ್ತೀಚೆಗೆ ಪ್ರತಿಭಟನೆ ಮಾಡಿದ್ದರು. ಶಾಲೆಯ ಚೇರಮನ್, ಸಿಬ್ಬಂದಿ ಹಾಗೂ ಶಿಕ್ಷಕರ ಜೊತೆಗೆ ಅನುಚಿತ ವರ್ತನೆ ಖಂಡಿಸಿ ಶಿಕ್ಷಕರು ಶಾಲೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: ಗುಲ್ಬರ್ಗ ವಿವಿಯಿಂದ ಮತ್ತೊಂದು ಎಡವಟ್ಟು: ಪರೀಕ್ಷಾ ಮೌಲ್ಯಮಾಪನದಲ್ಲಿ ಅಕ್ರಮ ಆರೋಪ

84 ಕ್ಕೂ ಅಧಿಕ ಶಿಕ್ಷಕರಿಗೆ ವೇತನ ಆಗಿಲ್ಲ. ಆಡಳಿಯ ಮಂಡಳಿ ಹಾಗೂ ಸದಸ್ಯರ ತಿಕ್ಕಾಟದಲ್ಲಿ ನಮ್ಮ ಬಡಪಾಯಿ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಬಿಇಓ ಮೌನೇಶ ಬಡಿಗೇರ್ ಮತ್ತು ಕಾರ್ಮಿಕ ಇಲಾಖೆಯ ಉಪನಿರ್ದೇಶಕರು ಆಗಮಿಸಿ, ಶಿಕ್ಷಕರ ಜೊತೆಗೆ ಮಾತುಕತೆ ನಡೆಸಿದ್ದರು.

ಜೊತೆಗೆ ಶಾಲೆಯ ಚೇರಮನ್ ಶಿವಬಸಪ್ಪ ಮುದಗಲ್ ಕರೆಸಿದ್ದರು. ಚೇರಮನ್ ಶಾಲೆಯ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಅಧ್ಯಕ್ಷನ್ನ ತರಾಟೆಗೆ ತೆಗೆದುಕೊಂಡಿದ್ದರು.

ಆರ್ಡರ್ ಕಾಪಿಗಾಗಿ ಹೊಸತಾಗಿ ನೇಮಕಗೊಂಡ ಶಿಕ್ಷಕರ ಪರದಾಟ

ರಾಯಚೂರು: ಹೊಸ ನೇಮಕಾತಿಯಾಗಿ ಸೇವೆ ಸಲ್ಲಿಸಲು ತುದಿಗಾಲಲ್ಲಿ ನಿಂತಿರುವ ನೂರಾರು ಶಿಕ್ಷಕರ ಫೈಲ್​ಗಳೇ ಮಿಸ್ಸಿಂಗ್ ಆಗಿವೆ ಎನ್ನುವ ಆರೋಪ ಕೇಳಿಬಂದಿದೆ. ಈ ಮಧ್ಯೆ ಆರ್ಡರ್ ಕಾಪಿ ಪಡೆಯಲು ಶಿಕ್ಷಕರು ಪರದಾಡುತ್ತಿರುವ ಪರಿಸ್ಥಿತಿ ರಾಯಚೂರಿನಲ್ಲಿ ಕಂಡುಬಂದಿದೆ. ರಾಯಚೂರು ಜಿಲ್ಲೆಯೊಂದರಲ್ಲೇ ಸುಮಾರು 741 ಜನ ಹೊಸತಾಗಿ ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಬಿಸಿಯೂಟದ ಸಾಂಬರ್​ ಪಾತ್ರೆಗೆ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ ಪ್ರಕರಣ: ಶಾಲಾ ಮುಖ್ಯ ಶಿಕ್ಷಕಿ ಅಮಾನತು

ಇದೇ ನ. 6 ರಿಂದ ಹೊಸ ಶಿಕ್ಷಕರಿಗೆ ಕೌನ್ಸಲಿಂಗ್ ಕರೆದು ಆರ್ಡರ್ ಕಾಪಿ ಪಡೆಯಲು ಸೂಚಿಸಲಾಗಿತ್ತು. ಹೀಗಾಗಿ ಭವಿಷ್ಯದ ಆಸೆ ಹೊತ್ತು ಆರ್ಡರ್ ಕಾಪಿ ಪಡೆಯಲು ಹೊಸದಾಗಿ ನೇಮಕಗೊಂಡಿರುವ ಶಿಕ್ಷಕ ಶಿಕ್ಷಕಿಯರು ರಾಯಚೂರು ನಗರದ ಡಿಡಿಪಿಐ ಕಚೇರಿಗೆ ಆಗಮಿಸಿದ್ದರು. ಆದೇಶದಲ್ಲಿ ಸೂಚಿಸಲಾದಂತೆ ನಿಯಮದನುಸಾರದಲ್ಲೇ ಕೌನ್ಸಲಿಂಗ್ ನಡೆಯುತ್ತಿದೆ.

ಒಂದೇ ದಿನದಲ್ಲಿ ಸಿಗಬೇಕಿದ್ದ ಆರ್ಡರ್ ಕಾಪಿ ವಾರವಾದರೂ ಸಿಗ್ತಿಲ್ಲ. ಹತ್ತು ದಿನವಾದರೂ ಸಿಗ್ತಿಲ್ಲವಂತೆ. ಆರ್ಡರ್ ಪ್ರತಿ ಪಡೆಯಲು ಬರೋರು ಬೆಳಿಗ್ಗೆಯಿಂದ ಸಂಜೆವರೆಗೂ ಡಿಡಿಪಿಐ ಕಚೇರಯಲ್ಲೇ ಠಿಕಾಣಿ ಹೂಡಿದರು ಏನೂ ಪ್ರಯೋಜನವಾಗಿಲ್ಲ. ಅಲ್ಲಿರುವ ಸಿಬ್ಬಂದಿ ಬಹುತೇಕರಿಂದ ಫೈಲ್​ ಮಿಸ್ಸಿಂಗ್ ಅಂತ ಹೇಳ್ತಿದ್ದಾರಂತೆ. ಇದರಿಂದ ಹೊಸದಾಗಿ ನೇಮಕಗೊಂಡ ಶಿಕ್ಷಕರು ಕಂಗಾಲಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:06 pm, Sun, 26 November 23

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ