ಬಗೆದಷ್ಟು ಬಯಲಾಗುತ್ತಿದೆ ಪಾಟೀಲನ ಪರೀಕ್ಷೆ ಅಕ್ರಮ, ಎಕ್ಸಾಂ ಹಿಂದಿನ ದಿನದ ವಾಟ್ಸಾಪ್ ಚಾಟ್ ವೈರಲ್
ಕಿಂಗ್ ಪಿನ್ ಆರ್.ಡಿ. ಪಾಟೀಲ್ ವಾಟ್ಸಾಪ್ ಮೂಲಕವೇ ಎಲ್ಲರನ್ನೂ ಸಂಪರ್ಕಿಸುತ್ತಿದ್ದ. ಸುಳಿವು ಸಿಗಬಾರದೆಂದು ಬರೀ ವಾಟ್ಸಪ್ ಕಾಲ್ ಮಾಡುತ್ತಿದ್ದ. ಸದ್ಯ ಆರ್.ಡಿ. ಪಾಟೀಲ್‌ನ ವಾಟ್ಸಾಪ್ ಚಾಟ್ಸ್ ಮತ್ತು ಕರೆ ಮಾಡಿರುವ ಮೊಬೈಲ್ ಸ್ಕ್ರೀನ್ ಶಾಟ್ಸ್ ವೈರಲ್ ಆಗುತ್ತಿದೆ. KEA ಪರೀಕ್ಷೆ ಅಪ್ಲಿಕೇಷನ್ ಹಾಕುವಂತೆ ಹೇಳಿದ್ದ ವಾಟ್ಸಾಪ್ ಚಾಟ್ ಲಭ್ಯವಾಗಿದೆ.
ಕಲಬುರಗಿ, ನ.16: ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷಾ ಅಕ್ರಮದ (PSI Exam Scam) ನಂತರ ರಾಜ್ಯದಲ್ಲಿ ತೀವ್ರ ಸಂಚಲನ ಹಾಗೂ ತಲ್ಲಣಗೊಳಿಸಿರೋ ಪ್ರಕರಣ ಕೆಇಎ ಎಫ್‌ಡಿಎ ಹುದ್ದೆಗಳ ನೇಮಕಾತಿ ಅಕ್ರಮ (FDA Exam Scam) ಪ್ರಕರಣ. ಈ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಭೇಟೆ ಆರಂಭಿಸಿದ್ದು ಆರ್.ಡಿ. ಪಾಟೀಲ್ (RD Patil) ಅಕ್ರಮ ಬಗೆದಷ್ಟು ಬಯಲಾಗುತ್ತಲೇ ಇದೆ. ಕೆಇಎ ಪರೀಕ್ಷೆ ನಡೆದ ಅಕ್ಟೋಬರ್ 28 ರಂದು ತಾನು ಡೀಲ್ ಮಾಡಿಕೊಂಡಿರುವ ಎಲ್ಲಾ ಅಭ್ಯರ್ಥಿಗಳ ಜೊತೆ ಆರ್.ಡಿ ಪಾಟೀಲ್ ಕಾಲ್ ಮಾಡಿ ಮಾತನಾಡಿದ್ದ. ಅಷ್ಟೇ ಅಲ್ಲದೇ ವಾಟ್ಸಾಪ್ನಲ್ಲೇ ಅಪ್ಲಿಕೇಶನ್ ಹಾಕುವಂತೆ ಚಾಟ್ ಮಾಡಿದ್ದ ಎಂಬ ಸಂಗತಿ ಬಯಲಾಗಿದೆ.
ಕಿಂಗ್ ಪಿನ್ ಆರ್.ಡಿ. ಪಾಟೀಲ್ ವಾಟ್ಸಾಪ್ ಮೂಲಕವೇ ಎಲ್ಲರನ್ನೂ ಸಂಪರ್ಕಿಸುತ್ತಿದ್ದ. ಸುಳಿವು ಸಿಗಬಾರದೆಂದು ಬರೀ ವಾಟ್ಸಪ್ ಕಾಲ್ ಮಾಡುತ್ತಿದ್ದ. ಸದ್ಯ ಆರ್.ಡಿ. ಪಾಟೀಲ್‌ನ ವಾಟ್ಸಾಪ್ ಚಾಟ್ಸ್ ಮತ್ತು ಕರೆ ಮಾಡಿರುವ ಮೊಬೈಲ್ ಸ್ಕ್ರೀನ್ ಶಾಟ್ಸ್ ವೈರಲ್ ಆಗುತ್ತಿದೆ. KEA ಪರೀಕ್ಷೆ ಅಪ್ಲಿಕೇಷನ್ ಹಾಕುವಂತೆ ಹೇಳಿದ್ದ ವಾಟ್ಸಾಪ್ ಚಾಟ್ ಲಭ್ಯವಾಗಿದೆ. ಎಫ್‌ಡಿಎ ಪರೀಕ್ಷೆ ನಡೆಯುವ ಮುನ್ನ ಆರ್.ಡಿ. ಪಾಟೀಲ್ ಎಲ್ಲಾ ಅಭ್ಯರ್ಥಿಗಳಿಗೆ ಕಾಲ್ ಮಾಡಿ ಮಾತನಾಡಿದ್ದ. ಬೆಳಗ್ಗೆ 5ಗಂಟೆ ಇಂದ ಅಭ್ಯರ್ಥಿಗಳ ಜೊತೆ ಸಂಪರ್ಕದಲ್ಲಿದ್ದ. ಬೆಳಗ್ಗೆ 5:18ಕ್ಕೆ ಅಪ್ಪ ಕಾಲೇಜ್ನಲ್ಲಿ ಪರೀಕ್ಷೆ ಬರೆಯುತ್ತಿದ್ದ ತ್ರಿಮೂರ್ತಿಗೆ ಕಾಲ್ ಮಾಡಿದ್ದ. ಪರೀಕ್ಷೆ ನಡೆಯುವ ಅಕ್ಟೋಬರ್ 28 ಕ್ಕೆ ನಿರಂತರ ಟಚ್‌ನಲ್ಲಿದ್ದ.
ಎಲ್ಲ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯುವವರಿಗೆ ಕಾಲ್ ಮಾಡಿ ಗೈಡ್ ಮಾಡ್ತಿದ್ದ. ಅಪ್ಲಿಕೇಶನ್ ಬಿಟ್ಟ ಮೇಲೆ ನಿರಂತರ ತಮ್ಮ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿರುತ್ತಿದ್ದ. ಪರೀಕ್ಷೆಯಲ್ಲಿ ಹೇಗೆ ಅಕ್ರಮ ಎಸಗಬೇಕು ಅಂತ ಮೊದಲೇ ಪ್ಲಾನ್ ಮಾಡಿದ್ದ ಆರ್.ಡಿ. ಪಾಟೀಲ್ ಅದರಂತೆ ಎಲ್ಲರಿಗೂ ತಮ್ಮ ಆಪ್ತರ ಮೂಲಕ ಬ್ಲೂ ಟೂಥ್ ನೀಡಿದ್ದ. ಈ ಎಲ್ಲಾ ಕೆಲವನ್ನೂ ಖುದ್ದು ಆತನೇ ಮುಂದೆ ನಿಂತು ಮಾಡಿದ್ದ. ಸದ್ಯ ಈ ಎಲ್ಲಾ ಮಾಹಿತಿಗಳು ಬಯಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಗತಿಗಳು ಹೊರ ಬೀಳುವ ಸಾಧ್ಯತೆ ಇದೆ.
ಇದನ್ನೂ ಓದಿ: KEA ಅಕ್ರಮ ಪ್ರಕರಣದ ಕಿಂಗ್ ಪಿನ್ ಆರ್‌ಡಿ ಪಾಟೀಲ್ 8 ದಿನ ಸಿಐಡಿ ಕಸ್ಟಡಿಗೆ
ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಸಿಐಡಿ ವಶಕ್ಕೆ ಪಡೆಯುವ ಮುನ್ನ, ಆರ್‌ಡಿ ಪಾಟೀಲ್ ಪರಮಾಪ್ತ ರುದ್ರಗೌಡ, ಶಿವಕುಮಾರ್, ಸಿದ್ದರಾಮ, ರವಿಕುಮಾರ್, ರಹೀನ್ ಚೌಧರಿ ಸೇರಿದಂತೆ ಐವರನ್ನ ಬಂಧಿಸಿದ್ದಾರೆ. ಇನ್ನೂ ಬಂಧಿತ ಆರ್‌ಡಿ ಪಾಟೀಲ್‌ನ ಆಪ್ತ ರುದ್ರಗೌಡ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದವನಾಗಿದ್ದು, ಬೆಳಗಾವಿ ಜಿಲ್ಲೆ ಅಥಣಿಯ ಸಣ್ಣ ನೀರಾವರಿ ಇಲಾಖೆಯಲ್ಲಿ ಎಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಎಇ ರುದ್ರಗೌಡನ ನಿವಾಸದಲ್ಲಿ ಕೆಇಎ ಎಫ್‌ಡಿಎ ಪರೀಕ್ಷಗೆ ಸಂಬಂಧಿಸಿದ 17 ಹಾಲ್‌ಟಿಕೆಟ್‌ಗಳು ಪತ್ತೆಯಾಗಿದ್ದು, ಪರೀಕ್ಷಾ ಅಭ್ಯರ್ಥಿಗಳ ಜೊತೆ ರುದ್ರಗೌಡ ನಿರಂತರ ಸಂಪರ್ಕ ಇಟ್ಟುಕೊಂಡಿದ್ದನು ಎನ್ನಲಾಗಿದೆ. ಹೀಗಾಗಿ ಹಾಲ್‌ಟಿಕೆಟ್ ಪತ್ತೆಯಾದ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರ ಇಲ್ವ, ಪರೀಕ್ಷೆ ಬರೆದಿದ್ದ ಆದಲ್ಲಿ ಎಷ್ಟು ಪ್ರಮಾಣದ ಡಿಲ್ ಆಗಿತ್ತು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕಲಬುರಗಿ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ