ಆರ್​​ಎಸ್​ಎಸ್​ ತತ್ವ ಪ್ರಜಾಪ್ರಭುತ್ವ, ದೇಶ‌ ವಿರೋಧಿಯಾಗಿದೆ: ಸಚಿವ ಪ್ರಿಯಾಂಕ್​ ಖರ್ಗೆ

ಸರ್ಕಾರದ ಶೈಕ್ಷಣಿಕ ಕೇಂದ್ರಗಳಲ್ಲಿ ಕೇಸರಿಕರಣ ನಡೆಯಬಾರದು. ಆರ್​​ಎಸ್​ಎಸ್​ನವರಿಗೆ ಆಸಕ್ತಿ ಇದ್ದರೆ ಖಾಸಗಿಯಾಗಿ ನಡೆಸಲಿ. ಆರ್ಥಿಕ ಸಮಾನತೆ ಇಲ್ಲ, ದೇಶಭಕ್ತಿಯೂ ಇಲ್ಲ. ನಾನು ಆರ್​ಎಸ್​ಎಸ್ ಬಗ್ಗೆ ಮಾತನಾಡಲು ಭಯ ಪಡುವುದಿಲ್ಲ ಎಂದು ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದರು.

ಆರ್​​ಎಸ್​ಎಸ್​ ತತ್ವ ಪ್ರಜಾಪ್ರಭುತ್ವ, ದೇಶ‌ ವಿರೋಧಿಯಾಗಿದೆ: ಸಚಿವ ಪ್ರಿಯಾಂಕ್​ ಖರ್ಗೆ
ಸಚಿವ ಪ್ರಿಯಾಂಕ ಖರ್ಗೆ
Follow us
| Edited By: ವಿವೇಕ ಬಿರಾದಾರ

Updated on:Sep 16, 2023 | 1:15 PM

ಕಲಬುರಗಿ ಸೆ.16: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ​ತತ್ವ ನಂಬಿ ಯಾರು ಉದ್ಧಾರ ಆಗಿದ್ದಾರೆ ತೋರಿಸಿ. ಆರ್​​ಎಸ್​ಎಸ್​ ತತ್ವ ಪ್ರಜಾಪ್ರಭುತ್ವ (Democrocy) ವಿರೋಧಿ, ದೇಶ‌ ವಿರೋಧಿಯಾಗಿದೆ. ಆರ್ಥಿಕ ಸಮಾನತೆ ಇಲ್ಲ, ದೇಶಭಕ್ತಿಯೂ ಇಲ್ಲ. ನಾನು ಆರ್​ಎಸ್​ಎಸ್ ಬಗ್ಗೆ ಮಾತನಾಡಲು ಭಯ ಪಡುವುದಿಲ್ಲ ಎಂದು ಮತ್ತೆ ಆರ್​ಎಸ್​ಎಸ್​ ವಿರುದ್ಧ ಸಚಿವ ಪ್ರಿಯಾಂಕ್​ ಖರ್ಗೆ (Priyank Kharge) ವಾಗ್ದಾಳಿ ಮಾಡಿದರು. ಕಲಬುರಗಿಯಲ್ಲಿ (Kalaburagi) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರ್ಕಾರದ ಶೈಕ್ಷಣಿಕ ಕೇಂದ್ರಗಳಲ್ಲಿ ಕೇಸರಿಕರಣ ನಡೆಯಬಾರದು. ಆರ್​​ಎಸ್​ಎಸ್​ನವರಿಗೆ ಆಸಕ್ತಿ ಇದ್ದರೆ ಖಾಸಗಿಯಾಗಿ ನಡೆಸಲಿ ಎಂದರು.

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು ಆರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಇದೇ ಚೈತ್ರಾ ಕುಂದಾಪುರ ಅಬ್ಬರದ ಭಾಷಣ ಮಾಡಿದ್ದರು. ಚುನಾವಣೆಯಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿದ್ದರು. ಎಲ್ಲರು ಕುಮಾರಕೃಪಾದಿಂದಲೇ ಆಪರೇಟ್ ಆಗಿರೋದು ಎಂದು ತಿಳಿಸಿದರು.

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಿಡಬ್ಲೂಸಿಯಲ್ಲಿ ರಾಷ್ಟಮಟ್ಟದ ವಿಷಯ ಚರ್ಚೆಯಾಗುತ್ತೆ. ರಾಜ್ಯಮಟ್ಟದ ವಿಚಾರಗಳು ಚರ್ಚೆಯಾಗಲ್ಲ. ಹೀಗಾಗಿ ಹರಿಪ್ರಸಾದ ಅವರ ವಿಚಾರ ಚರ್ಚೆಯಾಗಲ್ಲ. ಪಕ್ಷದ ವಿರುದ್ಧ ಇದ್ದವರ ಜೊತೆ ಸಭೆ ಮಾಡಿದ್ದಕ್ಕೆ, ಹರಿಪ್ರಸಾದ ಅವರಿಗೆ ನೋಟಿಸ್ ನೀಡಲಾಗಿದೆ. ಅವರು ಮಾತನಾಡಿರುವ ಬಗ್ಗೆ ನೋಟಿಸ್ ನೀಡಿಲ್ಲ. ಶಾಸಕ ಬಸನಗೌಡ ಪಾಟೀಲ್​​ ಯತ್ನಾಳರಂತೆ ಮಾತನಾಡುವುದಕ್ಕೂ, ನಮ್ಮವರು ಮಾತನಾಡುತ್ತಿರುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದು ಪರೋಕ್ಷವಾಗಿ ಕಾಲೆಳೆದರು.

ಇದನ್ನೂ ಓದಿ: ಕೇರಳದ ಶಾರ್​​ಕ್ಕರ ದೇವಿ ದೇವಸ್ಥಾನದಲ್ಲಿ ಆರ್​ಎಸ್​ಎಸ್​ನ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶವಿಲ್ಲ ಎಂದ ಹೈಕೋರ್ಟ್​

ಮೂವರು ಉಪಮುಖ್ಯಮಂತ್ರಿಗಳನ್ನು ಮಾಡಬೇಕು ಎಂಬ ಸಚಿವ ಕೆನ್​ ರಾಜಣ್ಣ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ರಾಜಣ್ಣ ಅವರದ್ದು ವ್ಯಯಕ್ತಿಕ ಅಭಿಪ್ರಾಯ. ಹೈಕಮಾಂಡ್ ಮುಂದೆ ಈ ರೀತಿಯ ಪ್ರಸ್ತಾವನೆ ಇಲ್ಲ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಹೀಗಾಗಿ ಎಲ್ಲರು ತಮ್ಮ ವಿಚಾರ ಹೇಳಬಹುದು ಎಂದು ಹೇಳಿದರು.

ಜೆಡಿಎಸ್​-ಬಿಜೆಪಿ ಹೊಂದಾಣಿಕೆ ವಿಚಾರವಾಗಿ ಮಾತನಾಡಿದ ಅವರು ಹೊಂದಾಣಿಕೆಯಿಂದ ನಮ್ಮ ಪಕ್ಷದ ಮೇಲೆ ಏನು ಪರಿಣಾಮ ಆಗಲ್ಲ. ಈ ಬಗ್ಗೆ ನಾನು ಗ್ಯಾರಂಟಿ ನೀಡುತ್ತೇನೆ. ಇನ್ನು ತಮ್ಮವಿರುದ್ಧ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ವಾಗ್ದಾಳಿ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು ಭಾಸ್ಕರ ರಾವ್ ಕಾಂಗ್ರೆಸ್ ಟಿಕೆಟ್​ಗೆ ಪ್ರಯತ್ನಿಸಿದ್ದರು. ಆದರೆ ನಮ್ಮಲ್ಲಿ ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಬಿಜೆಪಿಗೆ ಹೋಗಿದ್ದಾರೆ. ನನ್ನ ಪತ್ರಿಕಾಗೋಷ್ಠಿಯನ್ನು ಅವರು ಪೂರ್ತಿ ನೋಡಿಲ್ಲ. ನಾವು ಎಲ್ಲಿ ಕೂಡಾ ಹೊಸ ಕಾಯ್ದೆ ಜಾರಿ ಮಾಡುತ್ತೇವೆ ಅಂತ ಹೇಳಿಲ್ಲ. ಐಟಿ ಕಾಯ್ದೆಯನ್ನು ಜಾರಿಗೆ ತಂದಿದ್ದೆ ಅಮಿತ್ ಶಾ ಅವರು ಎಂದು ಮಾಹಿತಿ ನೀಡಿದರು.

ನನಗೆ ಸಂವಿಧಾನ ಪ್ರತಿ ಕಳಿಸುತ್ತೇನೆ ಅಂತ ಹೇಳಿದ್ದಾರೆ. ಆದರೆ ಅದಕ್ಕೂ ಮೊದಲು ಅವರು ಐಪಿಸಿ ಕಾಯ್ದೆ ಓದಿಕೊಳ್ಳಲಿ. ಸುಳ್ಳು ಸುದ್ದಿಗೆ ಕಡಿವಾಣ ಹಾಕುತ್ತೇವೆ ಅಂತ ಹೇಳಿರುವುದನ್ನು ಮಾಧ್ಯಮದವರು ಸ್ವಾಗತಿಸಿದ್ದಾರೆ. ಆದರೆ ಬಿಜೆಪಿಯವರು ಯಾಕೆ ವಿರೋಧ ಮಾಡುತ್ತಿದ್ದಾರೆ. ಬಿಜೆಪಿಯವರು ಏನು ಸುಳ್ಳು ಸುದ್ದಿಯ ಪ್ಯಾಕ್ಟರಿ ಹೊಂದಿದ್ದಾರಾ ? ಬಿಜೆಪಿಯವರಿಗೆ ಯಾಕೆ ಆತಂಕ ಆಗುತ್ತಿದೆ ಗೊತ್ತಿಲ್ಲ. ನಿಮ್ಮವರು ಯಾರಾದರೂ ಜೈಲಿಗೆ ಹೋಗುತ್ತಾರೆ ಅಂತ ಭಯವಾ? ಸಂವಿಧಾನ ಬದ್ಧವಾಗಿರುವುವವರಿಗೆ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ. ಬಿಜೆಪಿ ಇದೀಗ ಜೆಡಿಎಸ್​​ನ ಬಿ ಟೀಮ್ ಆಗಿದೆ. ಹೆಚ್ಚು ವಿರೋಧ ಪಕ್ಷವಾಗಿ ಜೆಡಿಎಸ್ ನವರೇ ಮಾತನಾಡುತ್ತಿದ್ದಾರೆ. ಬಿಜೆಪಿಯವರು ನಮಗೆ ಸಂವಿಧಾನ ಮತ್ತು ಕಾನೂನು ಬಗ್ಗೆ ಪಾಠ ಹೇಳುವ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:04 pm, Sat, 16 September 23

ತಾಜಾ ಸುದ್ದಿ
ಕಾಂಗ್ರೆಸ್​​ ಸರ್ಕಾರ ಪತನದ ಭವಿಷ್ಯ ನುಡಿದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್
ಕಾಂಗ್ರೆಸ್​​ ಸರ್ಕಾರ ಪತನದ ಭವಿಷ್ಯ ನುಡಿದ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ
ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್
ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್