AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ರಾಜ್ಯೋತ್ಸವದಂದೇ ಮೊಳಗಿದ ಪ್ರತ್ಯೇಕ ರಾಜ್ಯದ ಕೂಗು, ಕಲಬುರಗಿಯಲ್ಲಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ

ಇಂದು ಕರ್ನಾಟಕ ರಾಜ್ಯೋತ್ಸವ ಸಂಭ್ರಮ. ನಾಡ ಹಬ್ಬ ಆಚರಣೆಗೆ ಇಡೀ ರಾಜ್ಯದೆಲ್ಲೆಡೆ ಹಬ್ಬಿದೆ. ಇದರ ನಡುವೆ ಕಲಬುರಗಿಯಲ್ಲಿ ಮತ್ತೆ ಮೊಳಗಿದ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ ನಡೆದಿದೆ.

ಕನ್ನಡ ರಾಜ್ಯೋತ್ಸವದಂದೇ ಮೊಳಗಿದ ಪ್ರತ್ಯೇಕ ರಾಜ್ಯದ ಕೂಗು, ಕಲಬುರಗಿಯಲ್ಲಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ರಮೇಶ್ ಬಿ. ಜವಳಗೇರಾ|

Updated on: Nov 01, 2023 | 8:18 AM

Share

ಕಲಬುರಗಿ, (ನವೆಂಬರ್ 01): ಇಂದು ನವೆಂಬರ್‌ 1. ಕರ್ನಾಟಕದಲ್ಲಿ ಕನ್ನಡದ ಕಂಪುಮೊಳಗುತ್ತಿದೆ. 68ನೇ ರಾಜ್ಯೋತ್ಸವ(Kannada rajyotsava) ಸಂಭ್ರಮ ಮನೆ ಮಾಡಿದ್ದು, ನಾಡ ಹಬ್ಬ ಆಚರಣೆಗೆ ಇಡೀ ರಾಜ್ಯದೆಲ್ಲೆಡೆ ಹಬ್ಬಿದೆ. ಇದರ ನಡುವೆ ಕಲಬುರಗಿಯಲ್ಲಿ(Kalaburagi) ಮತ್ತೆ ಮೊಳಗಿದ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ. ಅಲ್ಲದೇ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನ ನಡೆದಿದೆ. ಸರ್ಧಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಇಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯು ಪ್ರತ್ಯೇಕ ಧ್ವಜಾರೋಹಣಕ್ಕೆ ಯತ್ನಿಸಿದೆ.

ಇದನ್ನೂ ಓದಿ: Kannada Rajyotsava 2023 Live: ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ರಾಜ್ಯದೆಲ್ಲೆಡೆ ನಾಡಹಬ್ಬ ಆಚರಣೆ

ಸಮಿತಿ ಅಧ್ಯಕ್ಷ ಎಮ್‌ಎಸ್ ಪಾಟೀಲ್ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ 20 ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಯಾವುದೇ ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.