ಸಿದ್ದಬಸವೇಶ್ವರ ಜಾತ್ರೆ ಅಖಾಡದಲ್ಲಿ ಗೆಲುವಿಗಾಗಿ ಕುಸ್ತಿಪಟುಗಳ ಕಾದಾಟ
ಕಲಬುರಗಿ: ಕಪ್ಪು ಮಣ್ಣಿನ ಅಖಾಡ.. ಆ ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಕುಸ್ತಿಪಟುಗಳ ಕಾಳಗ. ಇಲ್ಲಿ ಎಲ್ಲರ ಮನಸ್ಸಿನಲ್ಲಿ ಇರೋದು ಒಂದೇ.. ಎದುರಾಳಿ ನೆಲೆಕಚ್ಚುವಂತೆ ಮಾಡಿ ತಾನೇ ಗೆಲ್ಲ ಬೇಕು ಅನ್ನೋದು. ರಣಕಣದಲ್ಲಿ ಗೇಲುವಿಗಾಗಿ ಕುಸ್ತಿಪಟುಗಳು ಹೋರಾಟ ಮಾಡುತ್ತಿದ್ರೆ ಸುತ್ತಾ ನಿಂತು ಕೇಕೆ ಸಿಳ್ಳೇ ಚೆಪ್ಪಾಳೆ ಹಾಕಿ ಸಂಭ್ರಮಿಸುತ್ತಿರುವ ಜನ. ಸಿದ್ದಬಸವೇಶ್ವರ ಜಾತ್ರೆ ಅಂಗವಾಗಿ ಕುಸ್ತಿ ಪಂದ್ಯ: ಕಲಬುರಗಿ ತಾಲೂಕಿನ ಮುತ್ಯಾನ ಬಬಲಾದ ಗ್ರಾಮದಲ್ಲಿರುವ ಸುಪ್ರಸಿದ್ದ ಸಿದ್ದಬಸವೇಶ್ವರರ ಜಾತ್ರೆಯ ಅಂಗವಾಗಿ ಗ್ರಾಮದಲ್ಲಿದು ಕುಸ್ತಿ ಪಂದ್ಯವನ್ನು ಏರ್ಪಡಿಸಲಾಗಿತ್ತು. ಈ ಕುಸ್ತಿಯಲ್ಲಿ ರಾಜ್ಯದ […]
ಕಲಬುರಗಿ: ಕಪ್ಪು ಮಣ್ಣಿನ ಅಖಾಡ.. ಆ ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಕುಸ್ತಿಪಟುಗಳ ಕಾಳಗ. ಇಲ್ಲಿ ಎಲ್ಲರ ಮನಸ್ಸಿನಲ್ಲಿ ಇರೋದು ಒಂದೇ.. ಎದುರಾಳಿ ನೆಲೆಕಚ್ಚುವಂತೆ ಮಾಡಿ ತಾನೇ ಗೆಲ್ಲ ಬೇಕು ಅನ್ನೋದು. ರಣಕಣದಲ್ಲಿ ಗೇಲುವಿಗಾಗಿ ಕುಸ್ತಿಪಟುಗಳು ಹೋರಾಟ ಮಾಡುತ್ತಿದ್ರೆ ಸುತ್ತಾ ನಿಂತು ಕೇಕೆ ಸಿಳ್ಳೇ ಚೆಪ್ಪಾಳೆ ಹಾಕಿ ಸಂಭ್ರಮಿಸುತ್ತಿರುವ ಜನ.
ಸಿದ್ದಬಸವೇಶ್ವರ ಜಾತ್ರೆ ಅಂಗವಾಗಿ ಕುಸ್ತಿ ಪಂದ್ಯ: ಕಲಬುರಗಿ ತಾಲೂಕಿನ ಮುತ್ಯಾನ ಬಬಲಾದ ಗ್ರಾಮದಲ್ಲಿರುವ ಸುಪ್ರಸಿದ್ದ ಸಿದ್ದಬಸವೇಶ್ವರರ ಜಾತ್ರೆಯ ಅಂಗವಾಗಿ ಗ್ರಾಮದಲ್ಲಿದು ಕುಸ್ತಿ ಪಂದ್ಯವನ್ನು ಏರ್ಪಡಿಸಲಾಗಿತ್ತು. ಈ ಕುಸ್ತಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಮಹಾರಾಷ್ಟ್ರದ ಅನೇಕ ಜಿಲ್ಲೆಗಳಿಂದ ನೂರಾರು ಕುಸ್ತಿಪಟುಗಳು ಆಗಮಿಸಿ, ತಮ್ಮ ತಾಖತ್ತನ್ನು ತೋರಿಸಿದರು. ಮಕ್ಕಳಿಂದ ಹಿಡಿದು, ನಲವತ್ತು ವರ್ಷದವರಿಗಿನ ಅನೇಕರು ಕಪ್ಪು ಮಣ್ಣಿನಲ್ಲಿ ತೊಡೆ ತಟ್ಟಿ, ಎದುರಾಳಿ ಜೊತೆ ಸೆಣಸಾಡಿದ್ರು. ಅಖಾಡದಲ್ಲಿ ನಡೆಯುತ್ತಿದ್ದ ಕುಸ್ತಿಯನ್ನ ನೋಡಿ ನೆರೆದಿದ್ದವರು ಫುಲ್ ಎಂಜಾಯ್ ಮಾಡಿದ್ರು.
ಗ್ರಾಮೀಣ ಭಾಗದಲ್ಲಿರುವ ಪೈಲ್ವಾನರಿಗೆ ತಮ್ಮ ಶಕ್ತಿಯನ್ನು ತೋರಿಸಲು ಸೂಕ್ತ ವೇದಿಕೆ ಸಿಗದೇ ಇರುವದರಿಂದ ಈ ಜಾತ್ರೆಯಲ್ಲಿ ತಮ್ಮ ತಾಕತ್ತನ್ನು ತೋರಿಸಿದ್ರು. ಇಲ್ಲಿ ಗೆದ್ದವರಿಗೆ ಐನೂರು ರೂಪಾಯಿಯಿಂದ ಪ್ರಾರಂಭವಾಗಿ ಹನ್ನೊಂದು ಸಾವಿರ ರೂಪಾಯಿವರಗೆ ಬಹುಮಾನವನ್ನು ಮತ್ತು ಬೆಳ್ಳಿ ವಸ್ತುಗಳನ್ನ ನೀಡಲಾಯ್ತು. ಈ ಕುಸ್ತಿಪಂದ್ಯದಲ್ಲಿ 400 ಹೆಚ್ಚು ಪೈಲ್ವಾನರು ಅಖಾಡಕ್ಕಿಳಿದು ಗೆಲುವಿಗಾಗಿ ಹೋರಾಟ ಮಾಡಿದ್ರು.
ಕುಸ್ತಿಯಂತಹ ದೇಸಿ ಕ್ರೀಡೆಗಳು ಗ್ರಾಮೀಣ ಭಾಗದಲ್ಲಿ ಇನ್ನು ಕೂಡಾ ಜೀವಂತವಾಗಿವೆ. ಅವುಗಳನ್ನು ಉಳಿಸುವ ಕೆಲಸ ಸರ್ಕಾರದಿಂದ ಆಗಬೇಕಿದೆ. ಒಟ್ನಲ್ಲಿ ಮುತ್ಯಾನ ಬಬಲಾದ ಗ್ರಾಮದಲ್ಲಿ ನಡೆದ ಕುಸ್ತಿಪಂದ್ಯ ನೆರೆದಿದ್ದವರಿಗೆ ಸಖತ್ ಕಿಕ್ ನೀಡಿದ್ದು ಮಾತ್ರ ಸುಳ್ಳಲ್ಲ.
Published On - 10:11 am, Sat, 18 January 20