Kannada Rajyotsava Essay: ಕನ್ನಡ ರಾಜ್ಯೋತ್ಸವಕ್ಕೆ ಪ್ರಬಂಧ ಬರೆಯಲು ಇಲ್ಲಿದೆ ಟಿಪ್ಸ್

ಈ ವರ್ಷ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಬನ್ನಿ ನಾವಿಂದು ಕನ್ನಡ ರಾಜ್ಯೋತ್ಸವಕ್ಕೆ ಪ್ರಬಂಧ (Essay) ಬರೆಯುವುದು ಹೇಗೆ ಎನ್ನುವುದನ್ನು ತಿಳಿಸಿಕೊಡುತ್ತೇವೆ. ಪ್ರಬಂಧ ಆರಂಭಿಸುವ ಮುನ್ನ ರಾಷ್ಟ್ರಕವಿ ಕುವೆಂಪು, ನೃಪತುಂಗ, ಜಿ . ಪಿ . ರಾಜರತ್ನಂನಂತಹ ಮಹಾತ್ಮರು ಕನ್ನಡದ ಬಗ್ಗೆ ಬರೆದ ಬಂದೆರಡು ಸಾಲುಗಳನ್ನು ಪ್ರಸ್ತಾಪಿಸಿ. ಕನ್ನಡ ಕೇವಲ ಭಾಷೆಯಲ್ಲ ನಮ್ಮ ಭಾವನೆ ಎಂಬುದನ್ನು ತಿಳಿಸಿ.

Kannada Rajyotsava Essay: ಕನ್ನಡ ರಾಜ್ಯೋತ್ಸವಕ್ಕೆ ಪ್ರಬಂಧ ಬರೆಯಲು ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Oct 31, 2023 | 8:36 AM

ಕರ್ನಾಟಕದ ಜನರಿಗೆ ನವೆಂಬರ್ 1 ಹೆಮ್ಮೆಯ ದಿನ. ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ಶಾಲೆ-ಕಾಲೇಜುಗಳಲ್ಲಿ ಭಾಷಣ, ಪ್ರಬಂಧ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. ಸರ್ಕಾರದ ವತಿಯಿಂದ ಕೋಟಿ ಕಂಠ ಗಾಯನ ಎನ್ನುವ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗುತ್ತೆ. ಸದ್ಯ ನಾವು ಈ ವರ್ಷ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಬನ್ನಿ ನಾವಿಂದು ಕನ್ನಡ ರಾಜ್ಯೋತ್ಸವಕ್ಕೆ ಪ್ರಬಂಧ (Essay) ಬರೆಯುವುದು ಹೇಗೆ ಎನ್ನುವುದನ್ನು ತಿಳಿಸಿಕೊಡುತ್ತೇವೆ.

ಸಾಮಾನ್ಯವಾಗಿ ಕನ್ನಡ ರಾಜ್ಯೋತ್ಸವಕ್ಕೆ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ ಇಡಲಾಗುತ್ತೆ. ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿ ತನಗೆ ಅನಿಸಿದ್ದು ಬರೆದರೆ ಸಾಕಾಗಲ್ಲ. ವಿಷಯದ ಕುರಿತು ಸ್ಪಷ್ಟತೆ ಇರಬೇಕು. ಇತಿಹಾಸ, ಆಚರಣೆ, ದಿನದ ಮಹತ್ವದ ಬಗ್ಗೆ ತಿಳಿದಿರಬೇಕು. ಅದನ್ನು ಬರವಣಿಗೆ ಮೂಲಕ ಸ್ಪಷ್ಟವಾಗಿ ಪ್ರೆಸೆಂಟ್ ಮಾಡಬೇಕು. ಪ್ರಬಂಧ ಆರಂಭಿಸುವ ಮುನ್ನ ರಾಷ್ಟ್ರಕವಿ ಕುವೆಂಪು, ನೃಪತುಂಗ, ಜಿ . ಪಿ . ರಾಜರತ್ನಂನಂತಹ ಮಹಾತ್ಮರು ಕನ್ನಡದ ಬಗ್ಗೆ ಬರೆದ ಬಂದೆರಡು ಸಾಲುಗಳನ್ನು ಪ್ರಸ್ತಾಪಿಸಿ. ಕನ್ನಡ ಕೇವಲ ಭಾಷೆಯಲ್ಲ ನಮ್ಮ ಭಾವನೆ ಎಂಬುದನ್ನು ತಿಳಿಸಿ.

ಕನ್ನಡ ರಾಜ್ಯೋತ್ಸವದ ಇತಿಹಾಸ

ಕರ್ನಾಟಕ ರಾಜ್ಯಕ್ಕೆ ಮೊದಲು ಇದ್ದ ಹೆಸರು ಮೈಸೂರು ರಾಜ್ಯ. 1905ರಲ್ಲಿ ಕರ್ನಾಟಕ ಏಕೀಕರಣ ಚಳುವಳಿ ಆರಂಭವಾಯಿತು. 1950 ರಲ್ಲಿ ಭಾರತವು ಗಣರಾಜ್ಯವಾಯಿತು. ಬಳಿಕ ಅಲ್ಲಲ್ಲಿ ಚದುರಿದ್ದ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ವಿವಿಧ ರಾಜ್ಯಗಳನ್ನು ರಚನೆ ಮಾಡಲಾಯಿತು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. 1956 ರ ನವೆಂಬರ್ 1 ರಂದು, ಮದ್ರಾಸ್, ಬಾಂಬೆ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು “ಮೈಸೂರು” ಹೆಸರನ್ನು ಉಳಿಸಿಕೊಂಡರು. 1973ರ ನವೆಂಬರ್‌ 1ರಂದು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು. ಕರ್ನಾಟಕ ರಾಜ್ಯ ರೂಪುಗೊಂಡಾಗ ಒಟ್ಟು 19 ಜಿಲ್ಲೆಗಳನ್ನು ಒಳಗೊಂಡಿತ್ತು. ಇದೀಗ ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ. ಅಂದಿನಿಂದ ನವೆಂಬರ್ 1 ನ್ನು ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

ಇದನ್ನೂ ಓದಿ: Happy Karnataka Rajyotsava 2023: ಕನ್ನಡ ರಾಜ್ಯೋತ್ಸವದಂದು ಈ ವಿಶೇಷ ಸಾಲುಗಳ ಮೂಲಕ ಶುಭಾಶಯ ತಿಳಿಸಿ

ಕರ್ನಾಟಕ ಎಂಬ ಹೆಸರು ಬಂದದ್ದು ಹೇಗೆ?

ನಮ್ಮ ಕರ್ನಾಟಕವನ್ನು ಕನ್ನಡ ನಾಡು, ಕರುನಾಡು, ಶ್ರಿಗಂಧದ ನಾಡು ಎಂದೂ ಕರೆಯಲಾಗುತ್ತದೆ. ಕರ್ನಾಟಕ ಪದದ ಮೂಲದ ಬಗ್ಗೆ ಹಲವು ಅಭಿಪ್ರಾಯಗಳಿವೆ. “ಕರು” ಮತ್ತು “ನಾಡು” ಸೇರಿ “ಎತ್ತರದ ಭೂಮಿ” ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ ಎನ್ನಲಾಗಿದೆ. ಕರು ಎಂದರೆ ಕಪ್ಪು, ನಾಡು ಎಂದರೆ ಪ್ರದೇಶ ಎಂದು ಅರ್ಥೈಸಿಕೊಂಡರೆ ಬಯಲು ಸೀಮೆಯ ಕಂಡು ಕಪ್ಪು ಹತ್ತಿ ಮಣ್ಣಿನಿಂದಾಗಿ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಕೃಷ್ಣಾ ನದಿಯ ದಕ್ಷಿಣಕ್ಕೆ ಎರಡೂ ಕಡೆ ಜಲಾವೃತವಾದ ಪ್ರದೇಶವಾಗಿರುವುದರಿಂದ ಬ್ರಿಟೀಷರ ಕಾಲದಲ್ಲಿ ಕಾರ್ನಾಟಿಕ್ ಅಥವಾ ಕರ್ನಾಟಕ ಹೆಸರು ಬಳಕೆಗೆ ಬಂತು.

ಕನ್ನಡದ ಹೋರಾಟಗಾರರಾದ ಎಂ ರಾಮಮೂರ್ತಿ ಅವರು ಹಳದಿ ಹಾಗೂ ಕೆಂಪು ಬಣ್ಣ ಬಳಸಿ ಕನ್ನಡದ ಬಾವುಟವನ್ನು ಸಿದ್ದಪಡಿಸಿದ್ದಾರೆ.ಹಳದಿ ಬಣ್ಣವು ಶಾಂತಿ ಮತ್ತು ಸೌಹಾರ್ದತೆ ಸೂಚಿಸುತ್ತದೆ. ಕೆಂಪು ಬಣ್ಣವು ಕ್ರಾಂತಿಯ ಸಂಕೇತವಾಗಿದೆ. ಹಾಗೆಯೇ ಇದು ಕನ್ನಡಾಂಬೆ ಭುವನೇಶ್ವರಿಯ ಅರಿಶಿನ-ಕುಂಕುಮದ ಸಂಕೇತವೂ ಆಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್
ವೀಕೆಂಡ್‌ನಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ
ವೀಕೆಂಡ್‌ನಲ್ಲಿ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ