Karnataka weather: ಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ, ಮೈಕೊರೆಯುವ ಮಾಗಿಯ ಚಳಿ

Karnataka weather forecast: ಕರ್ನಾಟಕ ರಾಜ್ಯದಾದ್ಯಂತ ತೀವ್ರ ಚಳಿ ಅನುಭವವಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ತಾಪಮಾನ ಗಣನೀಯವಾಗಿ ಇಳಿದಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಚಳಿಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

Karnataka weather: ಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ, ಮೈಕೊರೆಯುವ ಮಾಗಿಯ ಚಳಿ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Nov 27, 2024 | 7:31 AM

ಕರ್ನಾಟಕದಲ್ಲಿ ಚಳಿ ಜೋರಾಗಿದೆ. ಸಂಜೆಯಾಗುತ್ತಿದ್ದಂತೆ ಶುರುವಾದ ಚಳಿ ಬೆಳಗಿನ ಜಾವ ಸೂರ್ಯೋದಯ ತನಕ ಬಿಡುವುದಿಲ್ಲ. ಬೆಳಗಿನಲ್ಲಿ ಮನೆಯ ಹೊಸ್ತಿಲು ದಾಟಿ ಹೊರ ಬಂದರೆ ಸಾಕು ಗಡಗಡ ಮೈ ನಡುಗಿಸಿ ಹಲ್ಲು ಗಟಿಯೂರುವಂತೆ ಮಾಡುವ ಮಾಗಿಯ ಮೈಕೊರೆಯುವ ಚಳಿಗೆ ಜನರು ಬೆಂಕಿ ಹಚ್ಚಿ ಮೈ ಕಾಯಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸಂಜೆಯವ ವೇಳೆಗೆ ಹೆಚ್ಚಿನ ಚಳಿ ಇರಲಿದೆ. ತಾಪಮಾನ ಕಡಿಮೆಯಾಗುವ ಸಾಧ್ಯತೆ ಇದೆ. ಜೊತೆಗೆ ಮಳೆಯಾಗುವ ಸಾಧ್ಯತೆಯೂ ಇದೆ.

ಬುಧವಾರ (ನ.27) ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್​ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್​ ಇರಲಿದೆ. ಮಂಗಳೂರಿನಲ್ಲಿ ಗರಿಷ್ಠ 31 ಮತ್ತು ಕನಿಷ್ಠ 24, ಶಿವಮೊಗ್ಗದಲ್ಲಿ ಗರಿಷ್ಠ 29 ಮತ್ತು ಕನಿಷ್ಠ 18, ಬೆಳಗಾವಿಯಲ್ಲಿ ಗರಿಷ್ಠ 28 ಮತ್ತು ಕನಿಷ್ಠ 17, ಮೈಸೂರಿನಲ್ಲಿ ಗರಿಷ್ಠ 26 ಮತ್ತು ಕನಿಷ್ಠ 20, ಮಂಡ್ಯದಲ್ಲಿ ಗರಿಷ್ಠ 27 ಮತ್ತು ಕನಿಷ್ಠ 20 ಮತ್ತು ಹುಬ್ಬಳ್ಳಿಯಲ್ಲಿ ಗರಿಷ್ಠ 29 ಕನಿಷ್ಠ 17 ಇರಲಿದೆ.

ಬೆಂಗಳೂರಿನಲ್ಲಿ ವಾಡಿಕೆಯಂತೆ ಡಿಸೆಂಬರ್​ ​ಎರಡನೇ ವಾರ ಚಳಿ ತೀವ್ರವಾಗುತ್ತಿತ್ತು. ಆದರೆ, ಈ ಬಾರಿ ನವೆಂಬರ್​ನಲ್ಲೇ ಚಳಿ‌ಯ ಪ್ರಮಾಣ ಹೆಚ್ಚಳವಾಗಿದೆ. ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.

ಮಳೆ ಎಚ್ಚರಿಕೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮತ್ತು ಚಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕಾರಾವಳಿಗೂ ಮಳೆ ಮುನ್ಸೂಚನೆ ನೀಡಲಾಗಿದೆ. ಆದ್ರೆ ಹವಾಮಾನ ವೈಪರೀತ್ಯ ಕಾರಣ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮೈಕೊರೆಯುವಂತಹ ಚಳಿ ಇರಲಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದೆ. ಜೊತೆಗೆ ದಟ್ಟವಾದ ಮಂಜು ಅವರಿಸಿದ್ದು ರಸ್ತೆಗಳು ಕಾಣದಂತಾಗಿದೆ. ರಾಮನಾಥಪುರಂ, ತಿರುಚಿರಾಪಳ್ಳಿ, ಪೆರಂಬಲೂರು, ಕಲ್ಲಕುರಿಚಿ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ವಿಪರೀತ ಚಳಿಯಿಂದ ಜ್ವರ, ಕೆಮ್ಮು, ಶೀತದಂತಹ ಕಾಯಿಲೆಗಳು ಭಾದಿಸಲಿದ್ದು, ಆರೋಗ್ಯದ ಮೇಲೆ ನಿಗಾ ಇಡುವಂತೆ ವೈದ್ಯರು ಸೂಚಿಸಿದ್ದಾರೆ.

ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ
ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲಾಗದು: ಪ್ರಲ್ಹಾದ್ ಜೋಶಿ
ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ
ಬಣ ಬಡಿದಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ: ಅನ್ನದಾನಿ, ಶಾಸಕ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ
ನಿತ್ಯ ಗಂಡ ಹೆಂಡತಿ ನಡುವಿನ ಕಲಹಕ್ಕೆ ಉಪಾಯವೇನು? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಧನಲಾಭ ನಿಶ್ಚಿತ!
Daily Horoscope: ಈ ರಾಶಿಯವರಿಗೆ ಇಂದು ಧನಲಾಭ ನಿಶ್ಚಿತ!
ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ತಮ್ಮ- ಶಿವಕುಮಾರ್ ನಡುವಿನ ಒಳಒಪ್ಪಂದದ ಬಗ್ಗೆ ಸಿಎಂ ತಿಳಿಸಬೇಕು: ವಿಜಯೇಂದ್ರ
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಚಿರತೆಯ ಕುತ್ತಿಗೆ ಹಿಡಿದು ಪೋಸ್ ಕೊಟ್ಟ ಗ್ರಾಮಸ್ಥರು; ವಿಡಿಯೋ ವೈರಲ್
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಡುಪಿ ಬಳಿ ಕಾರು ಪಲ್ಟಿ; ರಸ್ತೆ ಬದಿ ನಿಂತಿದ್ದ ವೃದ್ಧರಿಗೆ ಗಾಯ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಉಜ್ಜಯಿನಿ ದೇವಸ್ಥಾನದಲ್ಲಿ ದೇವರ ಮುಂದಿಟ್ಟಿದ್ದ ಹಾಲು ಕುಡಿದ ನಾಯಿ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ಅವರು ಮಾಡೋದು ಹೋರಾಟ ಅದರೆ ನಮ್ಮದು ಶಕ್ತಿ ಪ್ರದರ್ಶನವಾ? ಕುಮಾರ ಬಂಗಾರಪ್ಪ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ
ವಕ್ಫ್ ವಿರುದ್ಧ ಹೋರಾಟ ದೇಶಕ್ಕೆ ಮಾದರಿ ಅಂತ ಜೆಪಿಸಿ ಹೇಳಿದೆ: ಜಾರಕಿಹೊಳಿ