ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮೆಟ್ರೋ ಬ್ರಿಡ್ಜ್ ಬ್ರಿಕ್ಸ್! ಹೊಸ ಕಾರಿನ ಗ್ಲಾಸ್ ಪುಡಿಪುಡಿ
ರಾಜ್ಯ ಸರ್ಕಾರ ಬೆಂಗಳೂರನ್ನು ಬ್ರ್ಯಾಂಡ್ ಮಾಡುವುದಕ್ಕೆ ಹೊರಟಿದೆ. ಆದ್ರೆ, ದಿನದಿಂದ ದಿನಕ್ಕೆ ಬ್ಯಾಡ್ ಬೆಂಗಳೂರು ಆಗುತ್ತಿದೆ. ಸೇಫ್ ಸಿಟಿಯಾಗಿದ್ದ ಸಿಲಿಕಾನ್ ಸಿಟಿ, ಈಗ ಡೇಂಜರ್ ಸಿಟಿಯಾಗಿದೆ. ಯಾವಾಗ ಎಲ್ಲಿ ಮರ ಬೀಳುತ್ತೋ, ಯಾವಾಗ ಗುಂಡಿ ಬೀಳುತ್ತೋ ಗೊತ್ತಿಲ್ಲ ಎನ್ನುವಂತಾಗಿದೆ. ಈಗ ಈ ಸಾಲಿಗೆ ನಮ್ಮ ಮೆಟ್ರೋ ಕೂಡ ಸೇರಿದೆ.
ಬೆಂಗಳೂರು, (ನವೆಂಬರ್ 26): ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇಪ್ ಇಲ್ವೇನೋ ಅನ್ನೋ ಭಯ ಶುರುವಾಗಿದೆ. ಮೊನ್ನೆ ಮೊನ್ನೆ ಪಾರ್ಕ್ನಲ್ಲಿ ಮಲಗಿದ್ದ ಚಾಲಕನ ಮೇಲೆ ಮರದ ಕೊಂಬೆ ಬಿದ್ದು ಮೃತಪಟ್ಟಿದ್ದ. ಮರ ಬೀಳೋದು, ಗುಂಡಿಯಿಂದ ಅಪಘಾತವಾಗಳು ಸಂಭವಿಸುತ್ತಲೇ ಇವೆ. ಈಗ ನಮ್ಮ ಮೆಟ್ರೋದಲ್ಲೂ ಇಂತಹದ್ದೇ ಅನೇಕ ಅವಘಡಗಳು ನಡೆಯುತ್ತಲೇ ಇದೆ. ಹೌದು… ನಿನ್ನೆ (ನವೆಂಬರ್ 25) ಮೆಟ್ರೋ ಬ್ರಿಡ್ಜ್ ನ ಸಿಮೆಂಟ್ ಬ್ರಿಕ್ಸ್ ಕಾರಿನ ಮೇಲೆ ಬಿದ್ದಿದೆ. ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393-394 ನಡುವೆ ಈ ಘಟನೆ ನಡೆದಿದೆ. ಅದೇ ಕಲ್ಲು ವಾಹನ ಸವಾರರ ಮೇಲೆ ಬಿದ್ದಿದ್ರೆ ಪ್ರಾಣವೇ ಹೋಗುತ್ತಿತ್ತು.
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಸಿಮೆಂಟ್ ಬ್ರಿಕ್ಸ್..!
ನಿನ್ನೆ (ನವೆಂಬರ್ 26) ಬೆಳಗ್ಗೆ ಮೈಸೂರು ರೋಡ್ ನಲ್ಲಿ ಕಾರು ಹೋಗುತ್ತಿದ್ದಾಗ ಏಕಾಏಕಿ ಮೆಟ್ರೋ ಬ್ರಿಡ್ಜ್ ನಿಂದ ಸಿಮೆಂಟ್ ಕಲ್ಲು ಕಳಚಿ ಬಿದ್ದಿದೆ. ಯಲಹಂಕದ ಬಾಗಲೂರಿನಿಂದ ಮೈಸೂರಿಗೆ ಕಾರ್ಯಕ್ರಮಕ್ಕೆ ನವೀನ್ ರಾಜ್ ಮತ್ತು ಕುಟುಂಬ ಹೋಗುತ್ತಿದ್ದಾಗ ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393-394 ನಡುವೆ ಈ ಘಟನೆ ನಡೆದಿದೆ. ಪರಿಣಾಮ ಇನ್ನೂ ಒಂದು ತಿಂಗಳು ಕೂಡ ಆಗದ ಹೊಸ ಎಸ್ಯುವಿ 700 ಕಾರಿನ ಫ್ರಂಟ್ ಗ್ಲಾಸ್ ಮತ್ತು ರೂಫ್ ಡ್ಯಾಮೇಜ್ ಆಗಿದೆ. ಇನ್ನು ಕಲ್ಲು ಬಿದ್ದ ಫೋರ್ಸ್ ಗೆ ಕಾರ್ ನಲ್ಲಿದ್ದವರು ಕ್ಷಣಕಾಲ ಭಯಗೊಂಡು ಏನ್ ಆಗಿಬಿಡ್ತು ಅನ್ನೋ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪಾರ್ಕ್ನಲ್ಲಿ ಮಲಗಿದ್ದಾಗ ಮರ ಬಿದ್ದು ವ್ಯಕ್ತಿ ದುರ್ಮರಣ!
ಈ ಘಟನೆ ನಡೆದ ತಕ್ಷಣ ನವೀನ್ ರಾಜ್ ಸೋದರ ನಾಗೇಂದ್ರ, ಮೆಟ್ರೋ ಕಾಲ್ ಸೆಂಟರ್ ಗೆ ಕಾಲ್ ಮಾಡಿದ್ದಾರೆ. ಈ ವೇಳೆ ಮೆಟ್ರೋದವರು ನಮ್ಮ ಹೆಡ್ ಆಫೀಸ್ ಗೆ ಕಾಲ್ ಮಾಡಿ, ಇಮೇಲ್ ಮಾಡಿ ಆ ಮೇಲ್ ನಲ್ಲಿ ಘಟನೆ ನಡೆದಿರುವ ಸಮಯ, ಕಾರ್ ಡ್ಯಾಮೇಜ್ ಆಗಿರುವ ಫೋಟೋ ಕಳಿಸಿ ಎಂದು ಕೈ ತೊಳೆದು ಕೊಂಡಿದ್ದಾರೆ. ಇನ್ನು ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಈ ಬಗ್ಗೆ ಕಾರಿನ ಮಾಲೀಕ ನವೀನ್ ರಾಜ್ ಪ್ರತಿಕ್ರಿಯಿಸಿದ್ದು, ನಾನು ಕೂಡ್ಲೇ ಬಿಎಂಆರ್ ಸಿ ಎಲ್ ಅಧಿಕಾರಿಗಳನ್ನ ಸಂಪರ್ಕ ಮಾಡೋ ಪ್ರಯತ್ನ ಮಾಡಿದೆ… ಬಳಿಕ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಮಗೆ ಇದಕ್ಕೆ ಪರಿಹಾರ ಬೇಕು. ಕಾರು ತಗೆದುಕೊಂಡು ಇನ್ನೂ ಒಂದು ತಿಂಗಳು ಸಹ ಆಗಿಲ್ಲ, ನಮ್ಮ ಮೆಟ್ರೋದವರು ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಕಾರು ಮೇಲೆಬಿದ್ದ ಆ ಸಿಮೆಂಟ್ ಕಲ್ಲು ಯಾರ ಮೇಲಾದ್ರೂ ಬಿದ್ದಿದ್ರೇ ಏನ್ ಗತಿ? ಇದಕ್ಕೆ ಶಾಶ್ವತವಾದ ಪರಿಹಾರವನ್ನ, ಮತ್ತು ಸರಿಯಾದ ರೀತಿಯ ನಿರ್ವಹಣೆಯನ್ನ ನಮ್ಮ ಮೆಟ್ರೋ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:37 pm, Tue, 26 November 24