AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Breaking News Kannada Highlights: ನಾಳೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಜೊತೆ ಸಿಎಂ ಸಭೆ

Karnataka Breaking News Highlights Updates: ಕರ್ನಾಟಕದಲ್ಲಿ ಬರ ಆವರಿಸಿದ್ದು ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಬೆಳೆಗಳಿಗೆ ನೀರಿಲ್ಲದೆ ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮೈಸೂರಿನಲ್ಲಿ ದಸರಾ ಆಚರಣೆ ಕಳೆಗಟ್ಟಿದೆ. ಮಹಿಷ ದಸರಾ ಆಚರಣೆ ವಿಚಾರವಾಗಿ ಹೈಡ್ರಾಮಾ ನಡೆದಿದ್ದು, ಚಾಮುಂಡಿ ಬೆಟ್ಟದಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಬೆಂಗಳೂರಿನ ಹಲವು ಕಚೇರಿ, ಇಲಾಖೆ ಮತ್ತು ಮನೆಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Karnataka Breaking News Kannada Highlights: ನಾಳೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಜೊತೆ ಸಿಎಂ ಸಭೆ
ಸಿಎಂ ಸಿದ್ದರಾಮಯ್ಯ
ವಿವೇಕ ಬಿರಾದಾರ
ವಿವೇಕ ಬಿರಾದಾರ| Edited By: |

Updated on:Oct 13, 2023 | 10:43 PM

Share

ಕರ್ನಾಟಕದಲ್ಲಿ ಬರ ಆವರಿಸಿದ್ದು ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ನೀರಿನ ಕೊರತೆಯಿಂದ ವಿದ್ಯುತ್​ ಉತ್ಪಾದನೆಗೆ ಅಡಚಣೆ ಉಂಟಾಗಿದ್ದು, ಲೋಡ್​ಶೆಡ್ಡಿಂಗ್​​ ನಡೆಯುತ್ತಿದೆ. ಲೋಡ್​ಶೆಡ್ಡಿಂಗ್​​ನಿಂದ ಪಂಪ್​​ಸೆಟ್​​ಗಳಿಗೆ ಸಮರ್ಪಕವಾಗಿ ವಿದ್ಯುತ್​ ಪೂರೈಕೆಯಾಗುತ್ತಿಲ್ಲ. ಇದರಿಂದ ರೊಚ್ಚಿಗೆದ್ದ ಅನ್ನದಾತರು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಬೆಂಗಳೂರಿನ ಹಲವು ಕಚೇರಿ, ಮನೆ ಮತ್ತು ಅಪಾರ್ಟ್​ಮೆಂಟ್​​ಗಳ ಮೇಲೆ ಐಟಿ ದಾಳಿ ಮಾಡಿದೆ. ಮೈಸೂರಿನಲ್ಲಿ ದಸರಾ ಸಂಭ್ರಮಾಚರಣೆ ಮನೆ ಮಾಡಿದೆ. ಸಾಂಸಕೃತಿಕ ನಗರಿ ಮದುವಣಗಿತ್ತಿಯಂತೆ ಸಜ್ಜಾಗಿದೆ. ಮತ್ತೊಂದಡೆ ಮಹಿಷ ದಸರಾ ಆಚರಣೆ ವಿಚಾರವಾಗಿ ದಲಿತ ಸಂಘಟನೆಗಳು, ಮಹಿಷ ದಸರಾ ಆಚರಣೆ ಸಮಿತಿ ಮತ್ತು ಬಿಜೆಪಿ ಸಂಸದ ಪ್ರತಾಪ್​ ಸಿಂಹ ಮಧ್ಯೆ ಜಟಾಪಟಿ ನಡೆದ್ದು, ಈ ಮಧ್ಯೆ ಜಿಲ್ಲಾಡಳಿತ ಚಾಮುಂಡಿ ಬೆಟ್ಟದಲ್ಲಿ 144 ಸೆಕ್ಷನ್​ ಜಾರಿ ಮಾಡಿದೆ. ಹಾಗೆ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿದೆ. ಇದರೊಂದಿಗೆ ಇಂದಿನ ಲೇಟೆಸ್ಟ್​ ಅಪ್ಡೇಟ್ಸ್​ ಇಲ್ಲಿದೆ.

LIVE NEWS & UPDATES

The liveblog has ended.
  • 13 Oct 2023 10:43 PM (IST)

    Karnataka News Live: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ಕುಸಿದ ಭಾರತ

    ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನಕ್ಕೆ ಭಾರತ ಕುಸಿದೆ. 125 ದೇಶಗಳ ಪೈಕಿ ಭಾರತ 111ನೇ ಸ್ಥಾನಕ್ಕೆ ಕುಸಿದಿದೆ ಎಂದು ಟ್ವೀಟ್ ಮಾಡಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

  • 13 Oct 2023 09:40 PM (IST)

    Karnataka News Live: ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ ಅನ್ನೋದು ಸ್ಪಷ್ಟ: ಕಟೀಲು

    ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ ಅನ್ನೋದು ಸ್ಪಷ್ಟವಾಗಿದೆ. ಭ್ರಷ್ಟಾಚಾರಿಗಳ ಬೆಂಗಾವಲಾದ ಕಲೆಕ್ಷನ್, ಎಟಿಎಂ ಸರ್ಕಾರ ಕಾಂಗ್ರೆಸ್. ಸುಳ್ಳು ಹೇಳಿ ಭರವಸೆ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕರ್ನಾಟಕ ಕತ್ತಲೆಯಲ್ಲಿದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ರೈತರಿಗೆ ವಿದ್ಯುತ್ ಇಲ್ಲ, ನಿದ್ದೆಗೆಟ್ಟರೂ ರೈತರಿಗೆ ಕರೆಂಟ್ ಸಿಗುತ್ತಿಲ್ಲ. ಇದೊಂದು ಭ್ರಷ್ಟಾಚಾರದ ಹಾಗೂ ಪರ್ಸೆಂಟ್‌ ಸರ್ಕಾರ. ಇವತ್ತು ಸಿಕ್ಕಿರುವುದು ಸಂಪೂರ್ಣ ಭ್ರಷ್ಟಾಚಾರದ ಹಣ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಹೇಳಿದ್ದಾರೆ.

  • 13 Oct 2023 09:04 PM (IST)

    Karnataka News Live: ನಾಳೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಜೊತೆ ಸಿಎಂ ಸಭೆ

    ನಾಳೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಲಿದ್ದು, ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ವಿಚಾರವಾಗಿ ಸಿಎಂ ಜೊತೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಚರ್ಚೆ ಮಾಡಲಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಿಗದಿ ಆಗಿದೆ.

  • 13 Oct 2023 08:47 PM (IST)

    Karnataka News Live: ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಪಾಷಾಗೆ ಸಂಪುಟ ದರ್ಜೆ ಸ್ಥಾನಮಾನ

    ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಪಾಷಾಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯ ಶಿಷ್ಟಾಚಾರ ವಿಭಾಗದಿಂದ ಅಧಿಸೂಚನೆ ಹೊರಡಿಸಿದೆ.

  • 13 Oct 2023 08:18 PM (IST)

    Karnataka News Live: ಮುಖ ಮುಚ್ಚಿಕೊಂಡ ಅಂಬಿಕಾಪತಿ ಸೋದರ ಪ್ರದೀಪ್‌

  • 13 Oct 2023 07:58 PM (IST)

    Karnataka News Live: ಲೋಡ್​ ಶೆಡ್ಡಿಂಗ್ ಕುರಿತ ನಡೆಯುತ್ತಿದ್ದ ಸಭೆಯಲ್ಲೇ ಕೈಕೊಟ್ಟ ವಿದ್ಯುತ್

    ಲೋಡ್​ ಶೆಡ್ಡಿಂಗ್ ಕುರಿತ ನಡೆಯುತ್ತಿದ್ದ ಸಭೆಯಲ್ಲೇ ವಿದ್ಯುತ್ ಕೈಕೊಟ್ಟಿದೆ. ಚಾಮರಾಜನಗರದಲ್ಲಿ ರೈತರ ಮುಂದೆ ಕಾಂಗ್ರೆಸ್ ಶಾಸಕರಾದ ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿಗೆ ಇರಿಸು ಮುರಿಸು ಉಂಟಾಗಿದೆ. ಲೋಡ್ ಶೆಡ್ಡಿಂಗ್ ವಿರೋಧಿಸಿ 4 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಬೀಡುಬಿಟ್ಟಿದ್ದಾರೆ.

  • 13 Oct 2023 07:21 PM (IST)

    Karnataka News Live: ರೈತರಿಗೆ ಪ್ರತಿದಿನ 3 ಪಾಳಿಗಳಲ್ಲಿ ವಿದ್ಯುತ್ ಪೂರೈಕೆಗೆ ತೀರ್ಮಾನ: ಸಿಎಂ

    ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದಾರೆ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡುವಂತೆ ಹಾಗೂ ಲೋಡ್‌ ಶೆಡ್ಡಿಂಗ್‌ ಆಗದಂತೆ ಎಚ್ಚರಿಕೆ ವಹಿಸುವಂತೆ ಎಸ್ಕಾಂ ಎಂ.ಡಿ.ಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ಸಿಎಂ ನೇತೃತ್ವದಲ್ಲಿ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ: ರೈತರಿಗೆ ಪ್ರತಿದಿನ 3 ಪಾಳಿಗಳಲ್ಲಿ ವಿದ್ಯುತ್ ಪೂರೈಕೆಗೆ ತೀರ್ಮಾನ

  • 13 Oct 2023 06:08 PM (IST)

    Karnataka News Live: ಇಂಧನಾ ಇಲಾಖೆಯ ಸಭೆಯಲ್ಲಿ ಸಿಎಂ ಖಡಕ್ ಸೂಚನೆ

    ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯಲ್ಲ, ಎಸ್ಕಾಂ MD ಗಳಿಗೆ ಹೊಣೆ ಮಾಡಿ. ಇಂಧನಾ ಇಲಾಖೆಯ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ. ಹಿಂದಿನ ಸರ್ಕಾರ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ಈಗ ಮಳೆ ಇಲ್ಲದೆ ಉತ್ಪಾದನೆ ಕುಂಠಿತ ಆಗಿದೆ ಎನ್ನುವುದನ್ನು ನಮ್ಮ ರೈತರಿಗೆ ಮನವರಿಕೆ ಮಾಡಿ ಎಂದಿದ್ದಾರೆ.

  • 13 Oct 2023 05:34 PM (IST)

    Karnataka News Live: ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡ್ತಿದೆ: ಕಟೀಲು

    ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿ ಆಗಿದೆ. ಕೆಲ ದಿನಗಳ ಹಿಂದೆ 600 ಕೋಟಿ ರೂ. ಬಾಕಿ ಹಣ ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಸಿಕ್ಕ ಹಣ ಕಮಿಷನ್ ಹಣ ಎಂಬ ಮಾಹಿತಿ ಸಿಕ್ಕಿದೆ. ತೆಲಂಗಾಣದ ಚುನಾವಣೆಗೆ ಸಂಗ್ರಹಿಸಲಾದ ಹಣ ಎನ್ನಲಾಗಿತ್ತಿದೆ ಎಂದು ಮಂಗಳೂರಿನಲ್ಲಿ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಹೇಳಿದ್ದಾರೆ.

  • 13 Oct 2023 05:24 PM (IST)

    Karnataka News Live: ರಾಜ್ಯದಲ್ಲಿ ಸಹಜವಾಗಿ ವಿದ್ಯುತ್ ಅಭಾವವಿದೆ ಎಂದ ಸಚಿವ ತಂಗಡಗಿ

    ರಾಜ್ಯದಲ್ಲಿ ಸಹಜವಾಗಿ ವಿದ್ಯುತ್ ಅಭಾವವಿದೆ ಎಂದು ಕೊಪ್ಪಳದಲ್ಲಿ ಕನ್ನಡ&ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಆ ಮೂಲಕ ಲೋಡ್ ಶೆಡ್ಡಿಂಗ್ ಇರುವುದನ್ನು ಒಪ್ಪಿಕೊಂಡಿದ್ದಾರೆ. ನನ್ನ ಕ್ಷೇತ್ರದಲ್ಲಿಯೂ ರೈತರು ಪತ್ರ ಬರೆದಿದ್ದರು ಎಂದು ಹೇಳಿದ್ದಾರೆ.

  • 13 Oct 2023 04:46 PM (IST)

    Karnataka News Live: ನೈತಿಕ ಹೊಣೆಹೊತ್ತು ಸಿದ್ದರಾಮಯ್ಯ, ಡಿಕೆಶಿ ರಾಜೀನಾಮೆ ಕೊಡಬೇಕು

    ಗುತ್ತಿಗೆದಾರ ಸಂಘದವರು ಬಾಕಿ ಬಿಲ್​​ ಬಿಡುಗಡೆಗೆ ಒತ್ತಾಯಿಸಿದ್ದರು. ಸರ್ಕಾರ ಪರ್ಸೆಂಟೇಜ್ ಮಾತಾಡಿ 650 ಕೋಟಿ ರೂ. ಬಿಡುಗಡೆ ಮಾಡಿತ್ತು. 650 ಕೋಟಿ ರೂ. ಪೈಕಿ 42 ಕೋಟಿ ರೂ. ಕಮಿಷನ್ ಹಣ. ನೈತಿಕ ಹೊಣೆಹೊತ್ತು ಸಿದ್ದರಾಮಯ್ಯ, ಡಿಕೆ ಶಿವಕುಮಾರ್​​ ರಾಜೀನಾಮೆ ಕೊಡಬೇಕು ಎಂದು ಪರಿಷತ್ ಬಿಜೆಪಿ ಸದಸ್ಯ ಎನ್​.ರವಿಕುಮಾರ್ ಹೇಳಿದ್ದಾರೆ.

  • 13 Oct 2023 04:15 PM (IST)

    Karnataka News Live: ರಾಜ್ಯ ಸರ್ಕಾರ ಕತ್ತಲೆ ಭಾಗ್ಯ ನೀಡಿದೆ, ಇದು ಆರನೇ ಗ್ಯಾರಂಟಿ

    ರಾಜ್ಯ ಸರ್ಕಾರ ಕತ್ತಲೆ ಭಾಗ್ಯ ನೀಡಿದೆ, ಇದು ಆರನೇ ಗ್ಯಾರಂಟಿ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ವಾಗ್ದಾಳಿ ಮಾಡಿದ್ದಾರೆ. ಪೂರ್ವಾಪರ ಯೋಚನೆ ಇಲ್ಲದೆ 5 ಗ್ಯಾರಂಟಿ ಘೋಷಣೆ ಮಾಡಿದರು. 5 ಗ್ಯಾರಂಟಿ ಯೋಜನೆಗಳನ್ನು ಹೈಕಮಾಂಡ್​ನವರು​ ಘೋಷಿಸಿದರು. ನಮಗೆ ಆಸಕ್ತಿ ಇರಲಿಲ್ಲ ಎಂದು ಕಾಂಗ್ರೆಸ್​ನ ಕೆಲವರು ಹೇಳುತ್ತಿದ್ದಾರೆ. ಮುಂದೆ ರಾಜ್ಯ ಇನ್ನೂ ಕತ್ತಲಿಗೆ ಹೋಗಲಿದೆ‌ ಎಂದು ಕಿಡಿಕಾರಿದ್ದಾರೆ.

  • 13 Oct 2023 03:57 PM (IST)

    Karnataka News Live: ಇಸ್ರೇಲ್​ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಏರ್​ಪೋರ್ಟ್​​ಗೆ ಆಗಮಿಸಿರುವ ವಿಜಯಪುರ ಮೂಲದ ಈರಣ್ಣ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲ್​ನಲ್ಲಿ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.

  • 13 Oct 2023 03:32 PM (IST)

    Karnataka News Live: ಪೌರ ಕಾರ್ಮಿಕರ ಜೊತೆ ಡ್ಯಾನ್ಸ್ ಮಾಡಿದ ಶಾಸಕ

    ಬಿಡದಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ‌ ಹಿನ್ನೆಲೆ ಶಾಸಕ ಎಚ್ ಸಿ ಬಾಲಕೃಷ್ಣ ಡ್ಯಾನ್ಸ್ ಮಾಡಿದ್ದಾರೆ. ಗಾಗಲ್‌ ಹಾಕಿ ಪೌರ ಕಾರ್ಮಿಕರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಶಾಸಕ‌ ಎಚ್ ಸಿ ಬಾಲಕೃಷ್ಣ ಡ್ಯಾನ್ಸ್ ಎಲ್ಲೆಡೆ ವೈರಲ್ ಆಗಿದೆ.

  • 13 Oct 2023 03:19 PM (IST)

    Karnataka News Live: ಸಿಎಂಗೆ ಇದನ್ನು ಲಿಂಕ್ ಮಾಡೋದಕ್ಕೆ ಬಿಜೆಪಿ ಬಳಿ ದಾಖಲೆ ಇದ್ಯಾ?

    ಗುತ್ತಿಗೆದಾರರ ಮೇಲೆ ದಾಳಿ ಆದರೆ ಕಾಂಗ್ರೆಸ್​ಗೆ ಏನು ಸಂಬಂಧ? ಸಿಎಂಗೆ ಇದನ್ನು ಲಿಂಕ್ ಮಾಡೋದಕ್ಕೆ ಬಿಜೆಪಿ ಬಳಿ ದಾಖಲೆ ಇದ್ಯಾ? ಇದು ಬಿಜೆಪಿ ಹಣ, ಜೆಡಿಎಸ್​ನವರ ಹಣ ಅಂತಾ ನಾನು ಹೇಳ್ತೇನೆ. ಸಿದ್ದರಾಮಯ್ಯಗೆ ಲಿಂಕ್ ಇದೆ ಅನ್ನೋದನ್ನು ಸಾಬೀತು ಮಾಡ್ತಾರಾ? ಬಿಜೆಪಿ ಸರ್ಕಾರ ಬಜೆಟ್​ಗಿಂತ ವರ್ಕ್ ಆರ್ಡರ್ ಮಾಡಿ ಹೋಗಿದ್ದಾರೆ. ಕಮಿಷನ್ ಅನ್ನೋದು ಬಿಜೆಪಿ ಹಾಗೂ ಜೆಡಿಎಸ್​ಗೆ ಚೆನ್ನಾಗಿ ಗೊತ್ತಿದೆ. ಕಮಿಷನ್ ಎನ್ನೋದು ಕಾಂಗ್ರೆಸ್​ನದ್ದಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

  • 13 Oct 2023 03:12 PM (IST)

    Karnataka News Live: ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಫಿಲ್ಮ್ ಚೇಂಬರ್ ನಿಯೋಗ

    ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ನೇತೃತ್ವದಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ N.M.ಸುರೇಶ್, ಚೇಂಬರ್ ಹೊಸ ಪದಾಧಿಕಾರಿಗಳು ಡಿಸಿಎಂ ಡಿಕೆ ಭೇಟಿ ಮಾಡಿದ್ದೇವೆ. ಉಪಮುಖ್ಯಮಂತ್ರಿಗಳು ಬ್ಯುಸಿ ಇದ್ದರೂ ನಮ್ಮ ಮನವಿ ಆಲಿಸಿದ್ದಾರೆ. ವ್ಯಾಟ್, ಚಿತ್ರಮಂದಿರದ ಟ್ಯಾಕ್ಸ್​ ಬಗ್ಗೆ ನಾವು ಮನವಿ ಮಾಡಿದ್ದೇವೆ. ಎಲ್ಲಾ ಸಮಸ್ಯೆ ಬಗೆಹರಿಸುವುದಾಗಿ ಶಿವಕುಮಾರ್ ಭರವಸೆ ನೀಡಿದ್ದಾರೆ.

  • 13 Oct 2023 02:47 PM (IST)

    Karnataka News Live: ಬ್ರಾಹ್ಮಣರ ಸಂಪ್ರದಾಯಕ್ಕೆ ಅರ್ಥ ಇಲ್ಲ: ಪ್ರೊ.ಕೆಎಸ್​ ಭಗವಾನ್

    ಅಗ್ನಿ ಪೂಜೆಯ ಯಾಕೆ ಮಾಡುತ್ತಾರೆ. ಅದರಲ್ಲಿ ಏನು ಪ್ರಯೋಜನ ಇಲ್ಲ ಎಂದು ಬುದ್ಧ ತಿಳಿಸಿದ್ದರು. ಹೀಗಾಗಿ ರಾಜ ಮಹಾರಾಜರು ಅಗ್ನಿ ಪೂಜೆಯನ್ನು‌ ನಿಲ್ಲಿಸಿದರು. ಇದಕ್ಕಾಗಿ‌ ಬುದ್ಧರನ್ನು ಕಂಡರೆ ಬ್ರಾಹ್ಮಣರಿಗೆ ಕೋಪ. ಈಗಲೂ ಬ್ರಾಹ್ಮಣರು ಬುದ್ಧರ ಮೇಲೆ ಕೋಪವಿದೆ. ಅವರು ಹೋಮ ಮಾಡುವಾಗ ಬೆಂಕಿಗೆ ಅರಳಿ ಮರದ ಚಕ್ಕೆ ಹಾಕುತ್ತಾರೆ ಎಂದು ಪ್ರೊ.ಕೆಎಸ್​ ಭಗವಾನ್ ಮಾತನಾಡಿದ್ದಾರೆ.

  • 13 Oct 2023 02:32 PM (IST)

    Karnataka News Live: ಇಂಧನ ಸಚಿವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ

    ಇಂಧನ ಸಚಿವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿಕೊಂಡಿದ್ದಾರೆ ಕೈಗಾರಿಕೆಗಳಿಗೆ ಸ್ವಲ್ಪ ಕಷ್ಟ ಆಗಬಹುದು.ಕಷ್ಟ ಆಗದೇ ಇರುವ ತರಹ ನೋಡಿಕೊಳ್ಳುತ್ತೇವೆ. ಎಂಎಸ್ಎಂಇ ಗಳಿಗೆ ಸ್ವಲ್ಪ ಕಷ್ಟ ಆಗಬಹುದು. ಸಮಸ್ಯೆ ಬಗೆಹರಿಸುತ್ತೇವೆ ಎಂದು  ಎಂ.ಬಿ ಪಾಟೀಲ್ ಹೇಳಿದ್ದಾರೆ.

  • 13 Oct 2023 01:21 PM (IST)

    Karnataka News Live: ಗುತ್ತಿಗೆದಾರರ ಶೇಕಡಾ 65ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ; ಡಿಸಿಎಂ

    ಬೆಂಗಳೂರು: ಗುತ್ತಿಗೆದಾರರ ಶೇಕಡಾ 65ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ತನಿಖೆ ಪೆಂಡಿಂಗ್ ಇದ್ದರೂ ಬಿಲ್​ ಬಿಡುಗಡೆಗೆ ಆದೇಶ ಮಾಡಿದ್ದೇವೆ. ಗುತ್ತಿಗೆದಾರರಿಗೆ ಸಹಾಯ ಆಗಬೇಕು ಅಂತಾ ಆದೇಶ ಮಾಡಿದ್ದೇವೆ. ಸೀನಿಯಾರಿಟಿ ಮೇಲೆ ಬಿಲ್ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಾಬರಿಪಡುವ ಅಗತ್ಯವಿಲ್ಲ. ಗುತ್ತಿಗೆದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

  • 13 Oct 2023 12:43 PM (IST)

    Karnataka News Live: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಇದೆ ಹಾಗೂ ಬೇಡಿಕೆ ಹೆಚ್ಚಿದೆ; ಸಿಎಂ

    ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಇದೆ ಹಾಗೂ ಬೇಡಿಕೆ ಹೆಚ್ಚಿದೆ. ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ, ಬೇಡಿಕೆ ಜಾಸ್ತಿ ಇದೆ. ಮಳೆ ಕಡಿಮೆ ಆಗಿರುವುದರಿಂದ ಸಮಸ್ಯೆ ಆಗಿದೆ. ಬೇಸಿಗೆ ತರ ವಿದ್ಯುತ್ ಬೇಡಿಕೆ ಜಾಸ್ತಿ ಆಗಿದೆ. ಕಳೆದ ವರ್ಷ 900 ರಿಂದ 1000 ಸಾವಿರ ಮೆಗಾವ್ಯಾಟ್ ಬಳಕೆ ಆಗಿತ್ತು. ಆದರೆ ಈ ವರ್ಷ 1500 ರಿಂದ 1600 ಮೆಗಾವ್ಯಾಟ್ ಬೇಡಿಕೆ ಇದೆ. ಹೀಗಾಗಿ ಸ್ಪಲ್ಪ ತೊಂದರೆ ಆಗಿದೆ. ಅದಕ್ಕಾಗಿಯೇ ಇವತ್ತು ಸಭೆ ಕರೆದಿದ್ದೇನೆ. ಹೇಗೆ ವಿದ್ಯುತ್‌ನ ಹೊರಗಡೆಯಿಂದ ಖರೀದಿ ಮಾಡಬೇಕು. ವಿದ್ಯುತ್ ಉತ್ಪಾದನೆ ಮಾಡುವರು ಸರ್ಕಾರಕ್ಕೆ ಕೊಡಬೇಕು ಎಂಬ ಆದೇಶ ಮಾಡಿದ್ದೇನೆ. ಖರೀದಿ ಮಾಡಿ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  • 13 Oct 2023 12:26 PM (IST)

    Karnataka News Live: ಒಂದು ತಿಂಗಳಲ್ಲಿ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು; ಕೆಂಪಣ್ಣ

    ಬೆಂಗಳೂರು: ತನಿಖೆ ಹೆಸರಲ್ಲಿ ರಾಜ್ಯ ಸರ್ಕಾರ ಬಾಕಿ ಹಣ ತಡೆಹಿಡಿದಿದೆ. ಕೆಲವು ಇಲಾಖೆಗಳಲ್ಲಿ ಶೇಕಡಾ 7ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ತಮಗೆ ಬೇಕಾದ ಕೆಲ ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಕೆಂಪಣ್ಣ ಆರೋಪ ಮಾಡಿದರು.

  • 13 Oct 2023 11:51 AM (IST)

    Karnataka News Live: ಸರ್ಕಾರದಿಂದ ಇನ್ನೂ 20 ಸಾವಿರ ಕೋಟಿ ಬಾಕಿ ಬರಬೇಕಿದೆ; ಕೆಂಪಣ್ಣ

    ಬೆಂಗಳೂರು: ಬಾಕಿ ಬಿಲ್​ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಅದರೆ ರಾಜ್ಯ ಸರ್ಕಾರ ಇದುವರೆಗೆ ಪಾವತಿ ಮಾಡಿಲ್ಲ. ಹಳೇ ಸಮಸ್ಯೆಗಳ ಜೊತೆ ಹೊಸ ಸಮಸ್ಯೆ ಸಹ ಸೇರ್ಪಡೆಯಾಗಿದೆ. ರಾಜ್ಯ ಸರ್ಕಾರದಿಂದ ಇನ್ನೂ 20 ಸಾವಿರ ಕೋಟಿ ಬಾಕಿ ಬರಬೇಕಿದೆ. ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಿಂದ ಬಾಕಿ ಬರಬೇಕು. ತನಿಖೆ ಹೆಸರಲ್ಲಿ ರಾಜ್ಯ ಸರ್ಕಾರ ಬಾಕಿ ಹಣ ತಡೆಹಿಡಿದಿದೆ. ಕೆಲವು ಇಲಾಖೆಗಳಲ್ಲಿ ಶೇಕಡಾ 7ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆಗ್ರಹಿಸಿದರು.

  • 13 Oct 2023 11:34 AM (IST)

    Karnataka News Live: ಮುರುಘಾಶ್ರೀ ಪೋಕ್ಸೋ ಪ್ರಕರಣದ 3ನೇ ಆರೋಪಿಗೆ ಜಾಮೀನು

    ಚಿತ್ರದುರ್ಗ: ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣಕ್ಕೆ ಸಂಭಂದಿಸಿದಂತೆ ಪ್ರಕರಣದ 3ನೇ ಆರೋಪಿಯಾಗಿರುವ ಮಠದ ಕಾರ್ಯದರ್ಶಿ ಪರಮಶಿವಯ್ಯ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. ಅಕ್ಟೋಬರ್ 17ರಂದು ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಸಾಧ್ಯತೆ ಇದೆ.

  • 13 Oct 2023 11:16 AM (IST)

    Karnataka News Live: ಮಹಿಷ ಉತ್ಸವ; ಮೈಹಿಷಾಸುರ ಚಕ್ರವರ್ತಿ ಪೋಸ್ಟರ್​ ಪ್ರದರ್ಶನ

    ಮೈಸೂರು: ಟೌನ್​​ಹಾಲ್ ಸಮೀಪ ಮಹಿಷ ಉತ್ಸವ ನಡೆಯುತ್ತಿದ್ದು, ಉತ್ಸವದಲ್ಲಿ ‘ಮೈಹಿಷಾಸುರ ಚಕ್ರವರ್ತಿ’ ಪೋಸ್ಟರ್ ಪ್ರದರ್ಶನ ಮಾಡಲಾಗಿದೆ. ಬೈಕ್ ರ್ಯಾಲಿ ಜೊತೆ ಮಹಿಷ ಟ್ಯಾಬ್ಲೋ ಕೂಡ ತರಲಾಗಿದೆ.

  • 13 Oct 2023 10:55 AM (IST)

    Karnataka News Live: ಅಕ್ಟೋಬರ್ 23, 24 ಮತ್ತು 25 ರಂದು ಚೆನ್ನಮ್ಮನ ಕಿತ್ತೂರು ಉತ್ಸವ

    ಬೆಂಗಳೂರು: ಅಕ್ಟೋಬರ್ 23, 24 ಮತ್ತು 25 ರಂದು ಚೆನ್ನಮ್ಮನ ಕಿತ್ತೂರು ಉತ್ಸವ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಜ್ಯೋತಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ವಿಧಾನ ಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಿತ್ತೂರಿನ ಕೋಟೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.

  • 13 Oct 2023 10:24 AM (IST)

    Karnataka News Live: ಅಂಬಿಕಾಪತಿ ಮಗಳ ಮನೆ ಮೇಲೂ ಐಟಿ ದಾಳಿ

    ಬೆಂಗಳೂರು: ಆರ್​​ಟಿ ನಗರದ ವೈಟ್​ ಗೌಸ್​ನಲ್ಲಿರುವ ಅಂಬಿಕಾಪತಿ ಮಗಳ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಒಂದು ಮನೆ ಮತ್ತು ಆರ್​ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ದಾಳಿ ಮಾಡಲಾಗಿದೆ.

  • 13 Oct 2023 09:47 AM (IST)

    Karnataka News Live: ಪಿತೃಪಕ್ಷದ ಆಚರಣೆ, ಶ್ರೀರಂಗಪಟ್ಟಣಕ್ಕೆ ಹರಿದು ಬಂದ ಜನ

    ಮಂಡ್ಯ: ಪಿತೃಪಕ್ಷದ ಆಚರಣೆ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣಕ್ಕೆ ಜನರ ದಂಡು ಹರಿದು ಬಂದಿದೆ. ಕಾವೇರಿ ನದಿ ತಟದಲ್ಲಿ ಅಗಲಿದ ತಮ್ಮ ಕುಟುಂಬದವರಿಗೆ ತಿಲ ತರ್ಪಣ ಬಿಡಲಾಗಿದೆ. ಕಾವೇರಿ ನದಿ ದಡದಲ್ಲಿ ಹೋಮ, ಪಿಂಡ ಪ್ರದಾನ ಮಾಡಿ ಶ್ರಾದ್ದ ಕಾರ್ಯ ನಡೆಯುತ್ತಿದೆ. ಶ್ರೀರಂಗಪಟ್ಟಣದ ಸಂಗಮ, ಪಶ್ಚಿಮವಾಹಿನಿ, ಸ್ನಾನಘಟ್ಟ, ಗೋಸಾಯ್​ಘಾಟ್​ನಲ್ಲಿ ಜನರು‌ ತುಂಬಿ ತುಳುಕುತ್ತಿದ್ದಾರೆ.

  • 13 Oct 2023 09:16 AM (IST)

    Karnataka News Live: ಬೆಂಗಳೂರಲ್ಲಿ ಐಟಿ ದಾಳಿ; ಮಾಜಿ ಕಾರ್ಪೊರೇಟರ್​​ನ ಬಾಮೈದನ ಮನೆಯಲ್ಲಿ 40 ಕೋಟಿ ರೂ. ಪತ್ತೆ

    ಬೆಂಗಳೂರು: ನಗರದಲ್ಲಿ ಐಟಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದ್ದು, ಮಾಜಿ ಕಾರ್ಪೊರೇಟರ್​ ಅಶ್ವತ್ಥಮ್ಮ ಬಾಮೈದ ಪ್ರದೀಪ್ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.  ಅಶ್ವತ್ಥಮ್ಮ ಪತಿ ಅಂಬಿಕಾಪತಿ ಸಹೋದರ ಪ್ರದೀಪ್​ಗೆ ಸೇರಿದ ಫ್ಲ್ಯಾಟ್​ನ ಬೆಡ್​​ ರೂಮ್​ನಲ್ಲಿ 23 ಬಾಕ್ಸ್​​ನಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ. ಐಟಿ ಅಧಿಕಾರಿಗಳು ಪ್ರದೀಪ್​ನನ್ನು ವಿಚಾರಣೆ ನಡೆಸುತ್ತಿದ್ದಾರೆ.

  • 13 Oct 2023 08:56 AM (IST)

    Karnataka News Live: ಮಹಿಷ ದಸರಾ ಬೆಂಬಲಿಸಿ ಮಂಡ್ಯದಿಂದ ಮೈಸೂರುವರೆಗೆ ಬೈಕ್ ರ್ಯಾಲಿ

    ಮಂಡ್ಯ: ಇಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಹಿನ್ನೆಲೆಯಲ್ಲಿ ಮಂಡ್ಯದಿಂದ ಮೈಸೂರುವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮಾನ ಮನಸ್ಕರ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿದ್ದು, ಕಾವೇರಿ ವನದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಬೈಕ್ ರ್ಯಾಲಿ ಮೂಲಕ ಮೈಸೂರಿಗೆ ಆಗಮಿಸಲಿದ್ದಾರೆ.

  • 13 Oct 2023 08:23 AM (IST)

    Karnataka News Live: ಮಹಿಷಾ ದಸರಾ, ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿಕೆ

    ಮೈಸೂರು: ಇಂದು ಮೈಸೂರು ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಯಾವುದೇ ಮೆರವಣಿಗೆ, ರ್ಯಾಲಿಗಳಿಗೆ ಅವಕಾಶ ಇಲ್ಲ. ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಟೌನ್ ಹಾಲ್ ಬಳಿ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆಯೋಜಕರಿಗೆ ಎಲ್ಲಾ ನಿರ್ಬಂಧಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಸುಮಾರು 7 ಸಾವಿರ ಜನ‌ಸೇರುತ್ತಾರೆ ಎಂದು ಆಯೋಜಕರು ಹೇಳಿದ್ದಾರೆ. ಅದಕ್ಕೆ ಬೇಕಾದ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ. ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಬರುತ್ತಿದ್ದಾರೆ. ಬೈಕ್ ರ್ಯಾಲಿ ಮಾಡಲು ಅವಕಾಶ ಇಲ್ಲ. ಆ ರೀತಿ ಬೈಕ್ ರ್ಯಾಲಿ ಮಾಡಿದರೆ ಕ್ರಮ ಕೈಗೊಳ್ಳಲಾಗವುದು ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.

  • 13 Oct 2023 08:19 AM (IST)

    Karnataka News Live: ಮೈಸೂರು ನಗರದಲ್ಲಿ 144 ಸೆಕ್ಷನ್ ಜಾರಿ

    ಮೈಸೂರು: ಇಂದು ಮೈಸೂರು ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟ ಸೇರಿದಂತೆ ಪುರಭವನ ಹಾಲ್ ಹೊರತುಪಡಿಸಿ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. 14 ರ ಬೆಳಗ್ಗೆ 06 ಗಂಟೆಯವರೆಗೆ 144 ಸೆಕ್ಷನ್ ಅನ್ವಯವಾಗಲಿದೆ. ಯಾವುದೇ ಸಭೆ ಸಮಾರಂಭ, ರ್ಯಾಲಿ ಹಾಗೂ ಮೆರವಣಿಗೆ ನಡೆಸದಂತೆ ನಿಷೇಧ ಹೇರಲಾಗಿದೆ. ಪರ ವಿರೋಧ ಘೋಷಣೆ ಕೂಗುವುದಕ್ಕೆ ನಿರ್ಬಂಧಿಸಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುವುದಕ್ಕೆ ಬ್ರೇಕ್ ಹಾಕಲಾಗಿದೆ. 5 ಜನರಿಗಿಂತ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು.

Published On - Oct 13,2023 8:17 AM

Follow Us