Karnataka Budget 2023: ಬೊಮ್ಮಾಯಿ ಬಜೆಟ್​​ನಲ್ಲಿ ಕವಿತೆಗಳ ಝಲಕ್

ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಇಂದು (ಫೆ.17) 2023-24ನೇ ಸಾಲಿನ ಆಯವ್ಯಯ ಮಂಡನೆ ವೇಳೆ ಕವಿತೆ ಓದಿದ್ದು ಗಮನ ಸೆಳೆಯಿತು.

Karnataka Budget 2023: ಬೊಮ್ಮಾಯಿ ಬಜೆಟ್​​ನಲ್ಲಿ ಕವಿತೆಗಳ ಝಲಕ್
ಸಿಎಂ ಬೊಮ್ಮಾಯಿ, ಸಾಹಿತಿಗಳಾದ ಕುವೆಂಪು, ಡಿವಿಜಿ, ಜಿ ಎಸ್ ಶಿವರುದ್ರಪ್ಪ
Follow us
TV9 Web
| Updated By: ವಿವೇಕ ಬಿರಾದಾರ

Updated on: Feb 17, 2023 | 3:42 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ (CM Basavaraj Bommai) ಇಂದು (ಫೆ.17) 2023-24ನೇ ಸಾಲಿನ ಆಯವ್ಯಯ ಮಂಡನೆ ಮಾಡಿದರು. ಬಜೆಟ್​ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇನ್ನು ಕೆಲವು ವರ್ಗ, ಪ್ರದೇಶಗಳಿಗೆ ವಿಶೇಷ ಗಿಫ್ಟ್​​ ನೀಡಿದರು. ವಿಶೇಷವಾಗಿ ರೈತರಿಗೆ ಬಡ್ಡಿ ರಹಿತ 5 ಲಕ್ಷದ ವರೆಗೆ ಸಾಲ ನೀಡುವ ಮೂಲಕ ಮಹತ್ವದ ಘೋಷಣೆ ಮಾಡಿದರು. ಇನ್ನು ಮುಖ್ಯಮಂತ್ರಿ ಬಸವರಾಜ ಬಸವರಾಜ ಬೊಮ್ಮಾಯಿ ಅವರಿಗೆ ಪುಸ್ತಕ ಓದುವ ಹವ್ಯಾಸ ಹೆಚ್ಚಿದ್ದು, ಯಾವುದೇ ತಮ್ಮ ಶುಭಕಾರ್ಯಗಳಿಗೆ ಬುರುವ ಅಥಿತಿಗಳಿಗೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಎಂದು ಹೇಳುತ್ತಾರೆ. ಹಾಗೇ ಇಂದಿನ ಬಜೆಟ್​ ಮಂಡನೆ ವೇಳೆಯೂ ​ ಮಂಡನೆ ವೇಳೆ ಕವಿತೆಗಳ ಸಾಲುಗಳನ್ನು ಓದುವ ಮುಖಾಂತರ ಗಮನ ಸೆಳೆದರು.

ಬಜೆಟ್​ಗೂ ಪ್ರಾರಂಭಕ್ಕೂ ಮುನ್ನ ಸಿಎಂ ಬೊಮ್ಮಾಯಿ ರಾಷ್ಟ್ರಕವಿ ಕುವೆಂಪು ಅವರ

ಹೋಗುತಿದೆ ಹಳೆಯ ಕಾಲ, ಹೊಸ ಕಾಲ ಬರುತಲಿದೆ ಬರುತಲಿದೆ ಹೊಸ ದೃಷ್ಟಿ, ಹೊಸ ಬಯಕೆಗಳಲಿ ಹೋಗುತಿದೆ ಹಳೆ ಬಾಳು, ಹೊಸ ಬಾಳು ಬರುತಲಿದೆ  -ಕುವೆಂಪು

ಎಂಬ ಕವಿತೆಯನ್ನು ಓದಿದರು. ಈ ಮೂಲಕ ಬೊಮ್ಮಾಯಿ ಸರ್ಕಾರ ಈ ಬಜೆಟ್​ ಮೂಲಕ ಹೊಸತನ್ನು ನೀಡುತ್ತಿದೆ. ಇದರಿಂದ ಜನರ ಜೀವನದಲ್ಲಿ ಹೊಸ ಬೆಳಕು ಬರುತ್ತದೆ ಎನ್ನುವ ಆಶಯವಾಗಿತ್ತು.

ಇದಾದ ನಂತರ ಮೊದಲನೇಯ ವಲಯ ಕೃಷಿ ಮತ್ತು ಪೂರಕ ಚಟುವಟಿಕೆಗಳ ಬಗ್ಗೆ ಬಜೆಟ್​ ಮಂಡನೆ ಮಾಡುವ ವೇಳೆ ಕೆ. ಎಸ್​ ನರಸಿಂಹಸ್ವಾಮಿಯವರ ಸಾಹಿತ್ಯವನ್ನು ಓದಿದರು.

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ -ಕೆ. ಎಸ್​ ನರಸಿಂಹಸ್ವಾಮಿ

ಈ ಸಾಹಿತ್ಯದ ಮುಖಾಂತರ ಬೊಮ್ಮಾಯಿ ಸರ್ಕಾರ ಕೃಷಿಕರಿಗೆ ಆಸೆರೆಯಾಗುತ್ತಿರುತ್ತದೆ. ರೈತಾಪಿ ವರ್ಗದ ಜನರ ಧ್ವನಿಗೆ ಕಿವಿಯಾಗಿರುತ್ತದೆ ಎಂದು ಹೇಳುವ ಆಶಯ ವ್ಯಕ್ತಪಡಿಸಿದರು.

ಮೊದಲನೇಯ ವಲಯ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ಕುರಿತು ಬಜೆಟ್​ ಮಂಡನೆ ಮಾಡುವ ವೇಳೆ ಡಾ. ಜಿ. ಎಸ್​ ಶಿವರುದ್ರಪ್ಪ ಅವರು ಬರೆದ ಸಾಲುಗಳನ್ನು ಓದಿದರು.

ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ ಮತಗಳೆಲ್ಲವು ಪಥಗಳು ಎನ್ನುವ ಹೊಸ ಎಚ್ಚರದಲ್ಲಿ ಬದುಕೋಣ -ಡಾ. ಜಿ. ಎಸ್​ ಶಿವರುದ್ರಪ್ಪ

ರಾಜ್ಯದ ಎಲ್ಲ ವರ್ಗಕ್ಕೂ ಬಜೆಟ್​ ಬೆಳಕಾಗಲಿದೆ. ಜನರ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ, ಎಲ್ಲರನ್ನೂ ಒಂದೇ ದಾರಿ ಕೊಂಡೊಯ್ಯುವ ಬಜೆಟ್​ ಇದಾಗಲಿದೆ ಎಂಬ ಆಶಯದಿಂದ ಸಿಎಂ ಬೊಮ್ಮಾಯಿ ಅವರು ಈ ಸಾಲಗಳನ್ನು ಹೇಳಿದರು ಎನ್ನಬಹುದು.

ಆರನೆ ವಲಯ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು ಕುರಿತು ಬಜೆಟ್​ ಮಂಡನೆ ಮಾಡುವ ವೇಳೆ ಡಿವಿಜಿ ಅವರು ಬರೆದ ಸಾಲುಗಳನ್ನು ಓದಿದರು.

ಜಾನಪದಗಳು, ರಾಜ್ಯ ಸಾಮ್ರಾಜ್ಯಗಳು, ಗುರುಸ್ಥಾನಗಳು, ಧರ್ಮಗಳು, ಭಾಷೆ ವಿದ್ಯೆಗಳು, ಕಾಣಿಸದೆ ಸಾಗಿಹವು ಕಾಲಪ್ರವಾಹದಲಿ ಮಾನವತೆ ನಿಂತಿಹುದು ಮಂಕುತಿಮ್ಮ     -ಡಿವಿಜಿ

ಡಿವಿಜಿ ಅವರ ಈ ಸಾಲುಗಳನ್ನು ಓದುವ ಮೂಲಕ ಜಾನಪದ, ರಾಜ್ಯ ಸಾಮ್ರಾಜ್ಯ, ಗುರುಸ್ಥಾನಗಳು, ಧರ್ಮಗಳು, ಭಾಷೆ ವಿದ್ಯೆಗಳು ಪ್ರಸ್ತುತ ಪ್ರಜಾಪ್ರಭುತ್ವದಲ್ಲಿ ಇಲಾಖೆಗಳಾಗಿ ಮಾರ್ಪಟ್ಟಿವೆ. ಆದರೆ ಇವು ಅನಾಧಿಕಾಲದಿಂದಲೂ ಇದ್ದು, ನಾವು ನೆಪಕ್ಕೆ ಮಾತ್ರ ಎಂದೆಂದಿಗೂ ಇವು ನಿಲ್ಲುವುದಿಲ್ಲ ಎಂಬ ಆಶಯ ವ್ಯಕ್ತವಾಗಿದೆ.