Siddaramaiah
ಬೆಂಗಳೂರು, (ಮಾರ್ಚ್ 07): ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು(Siddarmaaiah) ಇಂದಿನ ತಮ್ಮ 2025ನೇ ಸಾಲಿನ ಬಜೆಟ್ನಲ್ಲಿ (Karnataka Budget 2025) ರಾಜ್ಯದ ಭದ್ರತೆ ಒತ್ತು ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಗಾದ್ರೆ, ರಾಜ್ಯದ ಭದ್ರತೆ ಸಿದ್ದರಾಮಯ್ಯ ಬಜೆಟ್ನಲ್ಲಿ ಏನೆಲ್ಲಾ ಘೋಷಣೆ ಮಾಡಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿವೆ ನೋಡಿ.
- 667 ಕೋಟಿ ವೆಚ್ಚದಲ್ಲಿ ಬೆಂಗಳೂರು ಸೇಫ್ ಸಿಟಿ ಯೋಜನೆ ಅನುಷ್ಠಾನ
- ನಗರದಾದ್ಯಂತ ಒಟ್ಟು 60 ಮಹಿಳಾ ಔಟ್ ಪೋಸ್ಟ್ ಸ್ಥಾಪನೆ
- 30 ಕೋಟಿ ವೆಚ್ಚದಲ್ಲಿ 12 ಠಾಣೆ ಸೇರಿ ಕಚೇರಿಗಳ ನಿರ್ಮಾಣ
- ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ಕಾರ್ಯಕ್ಷಮತೆ ಹೆಚ್ಚಳ
- ಪೊಲೀಸ್ ಮೊಬಿಲಿಟಿ ಯೋಜನೆಯಡಿ 1 ಸಾವಿರ ವಾಹನ ಖರೀದಿ
- 1 ಸಾವಿರ ವಾಹನ ಖರೀದಿಗೆ 50 ಕೋಟಿ ರೂ. ಅನುದಾನ
- ನಕ್ಸಲ್ ನಿಗ್ರಹ ಪಡೆ ವಿಸರ್ಜನೆ, ನಕ್ಸಲ್ ಪುನರ್ವಸತಿಗೆ 10 ಕೋಟಿ ರೂ.
- ಮಾದಕ ದ್ರವ್ಯ, ಸೈಬರ್ ಅಪರಾಧ ವಿಭಾಗ ಬಲಪಡಿಸಲು 5 ಕೋಟಿ ರೂ.
- 2 ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪನೆಗೆ 80 ಕೋಟಿ ರೂ.
- ಬೆಂಗಳೂರು ಸೇಫ್ ಸಿಟಿ ಯೋಜನೆ 667 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ.
- ಬೆಂಗಳೂರು ನಗರದಾದ್ಯಂತ ಒಟ್ಟು 60 ಮಹಿಳಾ ಔಟ್ ಪೋಸ್ಟ್ ಸ್ಥಾಪನೆ.
- 30 ಕೋಟಿ ರೂ. ವೆಚ್ಚದಲ್ಲಿ 12 ಪೋಲೀಸ್ ಠಾಣೆ ಸೇರಿ ಕಛೇರಿಗಳ ನಿರ್ಮಾಣ.
- ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ಕಾರ್ಯಕ್ಷಮತೆ ಹೆಚ್ಚಳ.
- ಪೊಲೀಸ್ ಮೊಬಿಲಿಟಿ ಯೋಜನೆಯಡಿ ಒಂದು ಸಾವಿರ ವಾಹನ ಖರೀದಿಗೆ 50 ಕೋಟಿ ರೂ.
- ನಕ್ಸಲ್ ನಿಗ್ರಹ ಪಡೆ ವಿಸರ್ಜನೆ, ನಕ್ಸಲ್ ಪುನರ್ವಸತಿಗೆ ೧೦ ಕೋಟಿ ರೂ. ಮೀಸಲು.
- ಮಾದಕ ದ್ರವ್ಯ ಮತ್ತು ಸೈಬರ್ ಅಪರಾಧ ವಿಭಾಗ ಬಲಪಡಿಸಲು 5 ಕೋಟಿ ರೂ. ನೆರವು.
- ಎರಡು ಭಾರತೀಯ ಮೀಸಲು ಪೊಲೀಸ್ ಪಡೆ ಸ್ಥಾಪಿಸಲು 80 ಕೋಟಿ ರೂ. ಅನುದಾನ.
- ಪೊಲೀಸ್ ಗೃಹ-2025 ಯೋಜನೆಯಡಿ ವಸತಿ ಗೃಹಗಳ ನಿರ್ಮಾಣ ಕಾರ್ಯಕ್ಕೆ 300 ಕೋಟಿ ರೂ. ಅನುದಾನ.
- ಬೆಂಗಳೂರು ನಗರದಲ್ಲಿ ಪೊಲೀಸ್ ವಿಭಾಗಗಳ ಸಂಖ್ಯೆ 11ಕ್ಕೆ ಹೆಚ್ಚಳ.
- 4 ವಲಯಗಳಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ.
- ಪೊಲೀಸ್ ಸಿಬ್ಬಂದಿಗಳ ವಾರ್ಷಿಕ ಆರೋಗ್ಯ ತಪಾಸಣೆ ಮೊತ್ತ 1500 ರೂ. ಗೆ ಹೆಚ್ಚಳ.
- ಆಹಾರ ಭತ್ಯೆಯ ದರ 300 ರೂ. ಗೆ ಹೆಚ್ಚಳ.
- ಗೃಹರಕ್ಷಕ ಮತ್ತು ಪೌರ ರಕ್ಷಣಾ ಸ್ವಯಂ ಸೇವಕರು ಕರ್ತವ್ಯದ ವೇಳೆ ಮರಣ ಹೊಂದಿದಲ್ಲಿ ನೀಡುವ ಪರಿಹಾರ ಧನ 10 ಲಕ್ಷ ರೂ.ಗಳಿಗೆ ಹೆಚ್ಚಳ.
- ಕಾರಾಗೃಹ ಇಲಾಖೆ ಮೂಲಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.
- ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಉಪಕರಣಗಳ ಖರೀದಿ ಮತ್ತು ಕಟ್ಟಡ ನಿರ್ಮಾಣಕ್ಕೆ 50 ಕೋಟಿ ರೂ. ಅನುದಾನ.
- ಇಲಾಖೆಯ ಆಧುನೀಕರಣಕ್ಕೆ 330 ಕೋಟಿ ರೂ, ಮೈಸೂರು ವ್ಯಾಪ್ತಿಯಲ್ಲಿ ಹೊಸ ಅಗ್ನಿಶಾಮಕ ಠಾಣಾ ಕಟ್ಟಡ ನಿರ್ಮಾಣ.