AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೊರೊನಾ’ ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರ: ಕರ್ನಾಟಕ ಕಾಂಗ್ರೆಸ್​ ಟ್ವೀಟಾಸ್ತ್ರ!

ಈ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಆರೋಪಿಗೆ ಕೊರೊನಾ ರಕ್ಷಣಾತ್ಮಕ ಅಸ್ತ್ರ ಅನ್ನೋದು ಸ್ಪಷ್ಟ. ಇದರ ನಡುವಲ್ಲಿ ಸಿಡಿ ಹೇಗೆ ಬಂದಿದೆಯೋ, ಹಾಗೆಯೇ ವಾಪಸ್ ಹೋಗುತ್ತೆ. ಇದು ಸಿಡಿ ಪ್ರಕರಣ ಮುಚ್ಚಿ ಹಾಕುವ ಷಡ್ಯಂತ್ರ ಎಂದು ವ್ಯಂಗ್ಯವಾಡಿದೆ.

‘ಕೊರೊನಾ’ ಅತ್ಯಾಚಾರ ಆರೋಪಿಯ ರಕ್ಷಣಾತ್ಮಕ ಅಸ್ತ್ರ: ಕರ್ನಾಟಕ ಕಾಂಗ್ರೆಸ್​ ಟ್ವೀಟಾಸ್ತ್ರ!
ರಮೇಶ್ ಜಾರಕಿಹೊಳಿ
Skanda
|

Updated on:Apr 07, 2021 | 1:45 PM

Share

ಬೆಂಗಳೂರು: ಅಶ್ಲೀಲ ಸಿಡಿ ಹಗರಣದಲ್ಲಿ ಸಿಲುಕಿ ಎಸ್​ಐಟಿ ವಿಚಾರಣೆಯನ್ನು ಎದುರು ನೋಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೇಢವಾಗಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದರು. ಆದರೆ, ಇದಕ್ಕೆ ತಿರುಗೇಟು ನೀಡಿರುವ ರಾಜ್ಯ ಕಾಂಗ್ರೆಸ್​, ಕಳ್ಳನೊಬ್ಬ ನನಗೆ ಕೊರೊನಾ ಬಂದಿದೆ. ನನ್ನನ್ನು ಮುಟ್ಟಬೇಡಿ ಎಂದು ಪೊಲೀಸರಿಗೆ ಹೇಳಿದಂತೆ, ಅತ್ಯಾಚಾರ ಆರೋಪಿಯು ಕೊರೊನಾವನ್ನು ರಕ್ಷಣಾತ್ಮಕ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್​ ಮೂಲಕ ಆರೋಪಿಸಿದೆ.

ಈ ಬಗ್ಗೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಆರೋಪಿಗೆ ಕೊರೊನಾ ರಕ್ಷಣಾತ್ಮಕ ಅಸ್ತ್ರ ಅನ್ನೋದು ಸ್ಪಷ್ಟ. ಇದರ ನಡುವಲ್ಲಿ ಸಿಡಿ ಹೇಗೆ ಬಂದಿದೆಯೋ, ಹಾಗೆಯೇ ವಾಪಸ್ ಹೋಗುತ್ತೆ. ಇದು ಸಿಡಿ ಪ್ರಕರಣ ಮುಚ್ಚಿ ಹಾಕುವ ಷಡ್ಯಂತ್ರ ಎಂದು ವ್ಯಂಗ್ಯವಾಡಿದೆ. ಅಲ್ಲದೇ #ArrestRapistRamesh ಎಂಬ ಹ್ಯಾಶ್​ಟ್ಯಾಗ್ ಬಳಸುವ ಮೂಲಕ ನೇರವಾಗಿ ರಮೇಶ್ ಜಾರಕಿಹೊಳಿ ಅವರ ಮೇಲೆಯೇ ಪ್ರಹಾರ ಮಾಡಿದೆ.

ಕಳ್ಳನೊಬ್ಬ ‘ನನಗೆ ಕರೋನಾ ಬಂದಿದೆ ಮುಟ್ಟಬೇಡಿ’ ಎಂದು ಪೊಲೀಸರಿಗೆ ಹೇಳಿದಂತೆ! ಕರ್ನಾಟಕ ಕಾಂಗ್ರೆಸ್​ ಟೀಕಾಸ್ತ್ರ!

ಎರಡು ದಿನಗಳ ಹಿಂದೆಯಷ್ಟೇ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಯಿಂದ ಇಂದು ಬೆಳಗ್ಗೆಯೇ ಡಿಸ್ಚಾರ್ಜ್​ ಮಾಡಲಾಗಿದೆ. ಏಪ್ರಿಲ್ 4ರಂದು ರಾತ್ರಿ 10.30ರ ಸುಮಾರಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಬಿಪಿ, ಶುಗರ್ ಜಾಸ್ತಿಯಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ಆರೋಗ್ಯ ಪರಿಸ್ಥಿತಿ ಸುಧಾರಿಸಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಏಪ್ರಿಲ್ 1ರಂದು ರಮೇಶ್ ಜಾರಕಿಹೊಳಿ‌ಗೆ ಕೊರೊನಾ ಸೋಂಕು ಧೃಡವಾಗಿದ್ದು, ಮನೆಯಲ್ಲೇ ಕ್ವಾರಂಟೈನ್​ ಆಗಿದ್ದ ಅವರಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ದರಿಂದ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಗೋಕಾಕ ತಾಲೂಕು ಆಸ್ಪತ್ರೆ ವೈದ್ಯರು ಸ್ಪಷ್ಟನೆ ನೀಡಿದ್ದರು. ಇದೀಗ ರಮೇಶ್ ಜಾರಕಿಹೊಳಿಗೆ ಬಿಪಿ, ಶುಗರ್ ಕಂಟ್ರೋಲ್ ಆಗಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಅವರನ್ನು ನೇರವಾಗಿ ಮನೆಗೆ ಕರೆದುಕೊಂಡು ಬಂದ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅವರು ರಮೇಶ್ ಜಾರಕಿಹೊಳಿ‌ಗೆ ಮನೆಯಲ್ಲೇ ಕ್ವಾರಂಟೈನ್ ಆಗಲು ಸೂಚಿಸಿದ್ದಾರೆ.

ಇದನ್ನೂ ಓದಿ: ಶಾಸಕ ರಮೇಶ್​ ಜಾರಕಿಹೊಳಿ ಸರ್ಕಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್​, ಇಂದು ಬೆಳಗ್ಗೆಯೇ ಸೀದಾ ಮನೆಗೆ 

ರಮೇಶ್ ಜಾರಕಿಹೊಳಿಗೆ ಕೊರೊನಾ ಇಲ್ಲ, ಅವರದು ನಾಟಕ: ವಕೀಲ ಜಗದೀಶ್ ದೂರು

Published On - 12:01 pm, Wed, 7 April 21