ಆಸ್ತಿ ನೋಂದಣಿಗೆ ಅಪ್ಪ 3 ಲಕ್ಷ ರೂ. ಲಂಚ ಕೊಟ್ಟಿದ್ದಾರೆ, ಆದ್ರೂ ಕೆಲಸ ಆಗಿಲ್ಲ: ಬೆಂಗಳೂರು ವ್ಯಕ್ತಿಯ ಪೋಸ್ಟ್ ವೈರಲ್
ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯಿಂದ ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ಲಂಚ ಪಡೆಯುವುದು ಸಾಮಾನ್ಯವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಭೂಮಿ ನೋಂದಣಿ, ಆರ್‌ಟಿಸಿ ದಾಖಲೆಗಳು, ಇ-ಖಾತಾ ಮುಂತಾದ ಸೇವೆಗಳಿಗೆ ಸಾವಿರಾರು ರೂಪಾಯಿಗಳ ಲಂಚ ನೀಡಬೇಕಾಗುತ್ತದೆ ಎಂದು ಅವರು ದೂರಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶ ಹೆಚ್ಚಾಗಿದೆ.

ಬೆಂಗಳೂರು, ಏಪ್ರಿಲ್ 12: ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್ (Karnataka No.1 in Corruption) ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಆರ್ಥಿಕ ಸಲಹೆಗಾರರೂ ಆಗಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಹೇಳಿಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಇನ್ನು, ಸಾಮಾಜಿಕ ಮಾಧ್ಯಮವಾದ ಎಕ್ಸ್ನಲ್ಲಿ ನೆಟ್ಟಿಗರು ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಅಕ್ಷರಶಃ ಸ್ಯತ್ಯ ಎನ್ನುತ್ತಿದ್ದಾರೆ.
ಹೌದು, ನೆಟ್ಟಿಗರು ತಮ್ಮ ಆಸ್ತಿ ದಾಖಲೆಗಳನ್ನು ಮತ್ತೊಂಬರ ಹೆಸರಿಗೆ ವರ್ಗಾಯಿಸಲು ಅಥವಾ ದಾಖಲೆಗಳಲ್ಲಿನ ಹೆಸರು ಬದಲಾಯಿಸಲು ಸರ್ಕಾರಿ ಕಚೇರಿಗಳಿಗೆ ತೆರಳಿದರೆ ಅಲ್ಲಿನ ಅಧಿಕಾರಿಗಳು 15 ಸಾವಿರ, 30 ಸಾವಿರ ರೂ. ಲಂಚ ಪಡೆದಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ನೆಟ್ಟಿಗ ಮಾಧವ ಎಂಬುವರು ಎಕ್ಸ್ನಲ್ಲಿ ಟ್ಚೀಟ್ ಮಾಡಿದ್ದು, ನನ್ನ ತಂದೆ 14 ಸೆಂಟ್ಸ್ ಆಸ್ತಿ ನೋಂದಣಿಗಾಗಿ ತಹಶೀಲ್ದಾರ್‌ಗೆ 3 ಲಕ್ಷ ರೂ. ಮತ್ತು ಕಂಪ್ಯೂಟರ್ ಆಪರೇಟರ್ಗೆ 10 ಸಾವಿರ ರೂ. ಲಂಚ ನೀಡಿದ್ದಾರೆ. ಆದರೂ ಕೂಡ ನೋಂದಣಿಯಾದ ದಾಖಲೆ ಪತ್ರ ಇನ್ನೂ ಕೂಡ, 3 ತಿಂಗಳು ಕಳೆದರೂ ನಮ್ಮ ಕೈ ಸೇರಿಲ್ಲ ಎಂದು ಪೋಸ್ಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗನ ಆಕ್ರೋಶ
ಇವರ ಪೋಸ್ಟ್ಗೆ asdf ಎಂಬ ಹೆಸರಿನ ಖಾತೆದಾರರು, ಉತ್ತರ ಬೆಂಗಳೂರಿನಲ್ಲಿ 1500 ಚದರ ಅಡಿ ಭೂಮಿ ನೋಂದಣಿಗೆ ಸಬ್ ರಿಜಿಸ್ಟ್ರಾರ್‌ಗೆ 35000 ರೂ., ಆರ್‌ಟಿಸಿ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಲು ತಹಶೀಲ್ದಾರ್‌ಗೆ 25000 ರೂ. ಮತ್ತು ಸರ್ವೇ ಅಧಿಕಾರಿಗಳಿಗೆ ಸರ್ವೆ ಮತ್ತು ಗಡಿ ಗುರುತಿಸಲು 8000 ರೂ. (ಅಧಿಕೃತ ಶುಲ್ಕಗಳು ಸೇರಿದಂತೆ) ನೀಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.
I paid 35000 to Sub Registrar tto register property 25000 to Tehsildar to make name change in RTC records 8000 to Survey officials to survey and mark boundaries(incl official charges) All for a 1500 sqft piece of land in North Bengaluru
Now “Hadd bast” is pending, approx 5000
— asdf (@karahovich) April 10, 2025
ದಿ ವಾರಿಯರ್553 ಎಂಬ ಖಾತೆದಾರರು ಎರಡನೇ ಮಹಡಿಯಲ್ಲಿರುವ ನನ್ನ ಮನೆಗೆ ಇ–ಖಾತಾ ಪಡೆಯಲು ಅಧಿಕಾರಿಗಳು ನನ್ನಿಂದ 15000 ಕೇಳುತ್ತಿದ್ದಾರೆ. ಅನುಮೋದನೆ ಪಡೆಯಲು – 8 ಸಾವಿರ ರೂ, ವಿದ್ಯುತ್ ಸಂಪರ್ಕಕ್ಕೆ – 5 ಸಾವಿರ ರೂ., ನೀರಿನ ಸಂಪರ್ಕಕ್ಕೆ – 5 ಸಾವಿರ ರೂ. ಕೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ತುಂಬಾ ಹೆಚ್ಚಾಗಿದೆ. ಇಲಾಖೆಯಲ್ಲಿರುವ ಹೆಚ್ಚಿನ ಜನರು ಮೀಸಲು ಜಾತಿಗೆ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾದವರು ಎಂದು ಅಳಲು ತೋಡಿಕೊಂಡಿದ್ದಾರೆ.
To get E khata for 2nd floor house – they are asking me 15000.
Getting approval – 8k Electricity connection – 5K Water connection – 5K
So much corruption nowadays. No feat at all now.
Most of ppl in department belonged to reserved caste/ politically influenced.
— Thewarrior553 (@sri5538) April 10, 2025
ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1: ಸ್ಪಷ್ಟನೆ ನೀಡುವ ಬರದಲ್ಲಿ ರಾಯರೆಡ್ಡಿ ಮತ್ತೊಂದು ಎಡವಟ್ಟು
ಒಟ್ಟಿನಲ್ಲಿ, ರಾಜ್ಯ ಸರ್ಕಾರಿ ಕಚೇರಿಗಳಲ್ಲಿನ ಅಧಿಕಾರಿಗಳು ಲಂಚಕೋರರು ಆಗಿದ್ದಾರೆ. ಸಾವಿರಾರು ರೂಪಾಯಿ ಲಂಚ ಪಡೆದು, ಜನರ ಜೀವ ಹಿಂಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Sat, 12 April 25