Covid 19 Karnataka Update: ಕರ್ನಾಟಕದಲ್ಲಿ 1102 ಮಂದಿಗೆ ಕೊರೊನಾ ಸೋಂಕು, 17 ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 08, 2021 | 10:47 PM

ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 0.64 ಇದ್ದರೆ, ಸೋಂಕಿತರ ಸಾವಿನ ಸರಾಸರಿ ಶೇ 1.54 ಇದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 17,058.

Covid 19 Karnataka Update: ಕರ್ನಾಟಕದಲ್ಲಿ 1102 ಮಂದಿಗೆ ಕೊರೊನಾ ಸೋಂಕು, 17 ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ ಒಟ್ಟು 1102 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ. 1458 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 0.64 ಇದ್ದರೆ, ಸೋಂಕಿತರ ಸಾವಿನ ಸರಾಸರಿ ಶೇ 1.54 ಇದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 17,058. ರಾಜ್ಯದಲ್ಲಿ ಈವರೆಗೆ 29,58,090 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,03,547 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 37,458 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 338 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ. 277 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಒಟ್ಟು 7119 ಸಕ್ರಿಯ ಪ್ರಕರಣಗಳಿವೆ. ಈವರೆಗೆ 12,40,310 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,17,150 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 16,040 ಮಂದಿ ಮೃತಪಟ್ಟಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 338, ದಕ್ಷಿಣ ಕನ್ನಡ 200, ಉಡುಪಿ 133, ಮೈಸೂರು 64, ಶಿವಮೊಗ್ಗ 55, ಚಿಕ್ಕಮಗಳೂರು, ಹಾಸನ 51, ಉತ್ತರ ಕನ್ನಡ 40, ಕೊಡಗು 33, ತುಮಕೂರು 31, ಮಂಡ್ಯ 20, ಬೆಂಗಳೂರು ಗ್ರಾಮಾಂತರ, ಕೋಲಾರ 12, ಚಾಮರಾಜನಗರ 8, ಬಳ್ಳಾರಿ 6, ಬೆಳಗಾವಿ 4, ಚಿಕ್ಕಬಳ್ಳಾಪುರ 5, ಚಿತ್ರದುರ್ಗ 6, ದಾವಣಗೆರೆ 7, ಧಾರವಾಡ 5, ಹಾವೇರಿ 2, ಕಲಬುರಗಿ 7, ಕೊಪ್ಪಳ 4, ರಾಯಚೂರು 3, ರಾಮನಗರ 4, ವಿಜಯಪುರ 1.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಂಗಳೂರು ನಗರ 5, ಉತ್ತರ ಕನ್ನಡ 4, ದಕ್ಷಿಣ ಕನ್ನಡ 3, ಮೈಸೂರು 2, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ 1.

ಕೊರೊನಾ ಸೋಂಕಿಗೆ ಹೆಣ್ಣುಮಗು ಸಾವು

ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ 3ನೇ ಅಲೆಗೆ 2 ವರ್ಷದ ಹೆಣ್ಣುಮಗುವೊಂದು ಮೃತಪಟ್ಟಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್​ ಹೇಳಿದ್ದಾರೆ. ಆಗಸ್ಟ್​ 20ರಂದು ಉಸಿರಾಟದ ಸಮಸ್ಯೆಯಿಂದ ಬಾಲಕಿ ಸಾವನ್ನಪ್ಪಿದ್ದಳು. ಆರ್​ಟಿಪಿಸಿಆರ್​ ಟೆಸ್ಟ್​ನಲ್ಲಿ ಕೊವಿಡ್ ನೆಗೆಟಿವ್ ಬಂದಿತ್ತು. ಆದರೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದರಿಂದ ಕೊವಿಡ್​ ಎಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

(Karnataka Covid Numbers 1102 infected 17 deaths on September 8)

ಇದನ್ನೂ ಓದಿ: ಬಿಬಿಎಂಪಿಯಿಂದ ಮನೆ ಮನೆ ಆರೋಗ್ಯ ಸಮೀಕ್ಷೆ; ಬೆಂಗಳೂರಿನಲ್ಲಿ 22,362 ಕೊರೊನಾ ಸೋಂಕಿತರು ಪತ್ತೆ

ಇದನ್ನೂ ಓದಿ: ಹೈಕೋರ್ಟ್ ಸುದ್ದಿಗಳು: ಕೊವಿಡ್ ಚಿಕಿತ್ಸೆಗೆ ಶುಲ್ಕ ನಿಗದಿ ಬಗ್ಗೆ ಸೂಕ್ತ ಪ್ರಚಾರ ನೀಡಲು ಸರ್ಕಾರಕ್ಕೆ ಸೂಚನೆ

Published On - 10:44 pm, Wed, 8 September 21