ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 9,785 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2,454 ಜನರಿಗೆ ಸೋಂಕು ಖಚಿತವಾಗಿದೆ. ರಾಜ್ಯದಲ್ಲಿ 144 ಜನರು ಕೊವಿಡ್ನಿಂದ ಮೃತಪಟ್ಟಿದ್ದು, ಬೆಂಗಳೂರಿನಲ್ಲಿ 21 ಜನರು ನಿಧನರಾಗಿದ್ದಾರೆ. ರಾಜ್ಯದಲ್ಲಿ ಇಂದಿನ ಕೊವಿಡ್ ಸೋಂಕಿತರ ಸಂಖ್ಯೆಯನ್ನೂ ಸೇರಿಸಿ 27,57,324ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಈವರೆಗೆ 25,32,719 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 32,788 ಜನರ ಸಾವನ್ನಪ್ಪಿದ್ದಾರೆ.
ಇದೇ ಅವಧಿಯಲ್ಲಿ ರಾಜ್ಯದಲ್ಲಿ 21, 614 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ 1,91,796 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾವಾರು ಸೋಂಕಿತರ ವಿವರ
ಬಾಗಲಕೋಟೆ 70, ಬಳ್ಳಾರಿ 337, ಬೆಳಗಾವಿ 443, ಬೆಂಗಳೂರು ಗ್ರಾಮಾಂತರ 242, ಬೆಂಗಳೂರು ನಗರ 2,454 , ಬೀದರ್ 30, ಚಾಮರಾಜನಗರ 176, ಚಿಕ್ಕಬಳ್ಳಾಪುರ 273, ಚಿಕ್ಕಮಗಳೂರು 342, ಚಿತ್ರದುರ್ಗ 156, ದಕ್ಷಿಣ ಕನ್ನಡ 618, ದಾವಣಗೆರೆ 372, ಧಾರವಾಡ 212, ಗದಗ 60, ಹಾಸನ 624, ಹಾವೇರಿ 65, ಕಲಬುರಗಿ 60, ಕೊಡಗು 194, ಕೋಲಾರ 193, ಕೊಪ್ಪಳ 127 , ಮಂಡ್ಯ 320, ಮೈಸೂರು 482, ರಾಯಚೂರು 59, ರಾಮನಗರ 32, ಶಿವಮೊಗ್ಗ 715, ತುಮಕೂರು 440, ಉಡುಪಿ 263, ಉತ್ತರ ಕನ್ನಡ 229, ವಿಜಯಪುರ 188, ಯಾದಗಿರಿ ಜಿಲ್ಲೆಯಲ್ಲಿ 9 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲಾವಾರು ಮೃತರ ಅಂಕಿ ಅಂಶ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 144 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು, 21, ಮೈಸೂರು ಜಿಲ್ಲೆ 20, ಬೆಳಗಾವಿ, ಧಾರವಾಡ ಜಿಲ್ಲೆ 10, ಬಳ್ಳಾರಿ ಜಿಲ್ಲೆ 9, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಸನ 8, ದಾವಣಗೆರೆ, ಶಿವಮೊಗ್ಗ ಜಿಲ್ಲೆ 6, ಹಾವೇರಿ, ಕಲಬುರಗಿ,ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆ 5, ದಕ್ಷಿಣ ಕನ್ನಡ ಜಿಲ್ಲೆ 4, ಚಿಕ್ಕಮಗಳೂರು, ಚಿತ್ರದುರ್ಗ, ವಿಜಯಪುರ , ಉಡುಪಿ, ಉತ್ತರ ಕನ್ನಡ, ಜಿಲ್ಲೆ 3, ಕೊಡಗು, ಕೋಲಾರ, ಕೊಪ್ಪಳ, ಗದಗ ಜಿಲ್ಲೆ 2, ಮಂಡ್ಯ ಜಿಲ್ಲೆ ಓರ್ವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕೊವಿಡ್ ಅಸ್ಪತ್ರೆಗಳ ನೆಲದ ಮೇಲೆ ಸಾರ್ಸ್-ಕೊವ್-2 ವೈರಸ್ ಅಲ್ಲದಿದ್ದರೂ ಅದರ ಆನುವಂಶಿಕ ಸ್ವರೂಪ ಇರುತ್ತದೆ: ವರದಿ
ಬೆಂಗಳೂರಿನಲ್ಲೇ ಪತ್ತೆಯಾಯ್ತು ಅಕ್ರಮ ಕೊವಿಡ್ ಕೇರ್ ಸೆಂಟರ್! ದಾಳಿ ನಡೆಸಿದ ಅಧಿಕಾರಿಗಳು
(Karnataka Covid Update 9785 new cases in state and and 2454 in Bengaluru)
Published On - 7:29 pm, Sat, 12 June 21